ಹಾಸನದ ಸಮಾಜಸೇವಕ,ನೇತ್ರ ದಾನಿ, ರಂಗಭೂಮಿ ಕಲಾವಿದರಾದ ಡಾ.ಎಂ. ಸಿ.ರಾಜು ದೊಡ್ಡಮಂಡಿಗನಹಳ್ಳಿ ಅವರ ಸಮಾಜಸೇವೆ, ರಂಗಭೂಮಿ ಸೇವೆ ಹಾಗೂ ನೇತ್ರದಾನ ಕಾರ್ಯಕ್ರಮಗಳನ್ನು ಪರಿಗಣಿಸಿ ಬೆಂಗಳೂರಿನ ಚೈತನ್ಯ ನ್ಯಾಷನಲ್ ಫೌಂಡೇಶನ್ ವತಿಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ಕೆಂಪೇಗೌಡ ನಗರದ ಉದಯ ಭಾನು ಕಲಾ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಹಾಗೂ ಸಮಾಜ ಸೇವಕಿ ಡಾ.ಸೌಜನ್ಯ ಶರತ್ ಚಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಮೈಸೂರಿನ ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ,ಕೊಡಗಿನ ಸಾಹಿತಿ ಎಂ. ಡಿ.ಅಯ್ಯಪ್ಪ , ವಾಸ್ತುತಜ್ಞ ಮುದ್ದಪ್ಪ ಆರಾಧ್ಯ, ಚೈತನ್ಯ ಅಂತರ ರಾಷ್ಟ್ರೀಯ ಆಕಾಡೆಮಿ ಅಧ್ಯಕ್ಷರಾದ ಡಾ.ವಸುಧಾ ಶ್ರೀನಿವಾಸ್ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.