spot_img
spot_img

22 ರಂದು ಗೋಕಾಕ ನಗರದಲ್ಲಿ ನಾಟಕ ಪ್ರದರ್ಶನ

Must Read

- Advertisement -

ಇಂದಿನ ಯುವ ಪೀಳಿಗೆ ಚನ್ನಮ್ಮನ ಗತಿಇತಿಹಾಸ ತಿಳಿಯಲಿ-ಸಂಸದ ಈರಣ್ಣ ಕಡಾಡಿ

ಮೂಡಲಗಿ: ಶತ ಶತಮಾನಗಳಿಂದ ದಾಸ್ಯದ ಸಂಕೊಲೆಯಲ್ಲಿದ್ದ ದೇಶವನ್ನು ಸ್ವತಂತ್ರಗೊಳಿಸುವ ಸಲುವಾಗಿ ಹೋರಾಡಿದ ಲಕ್ಷಾಂತರ ಜನರ ತ್ಯಾಗ ಬಲಿದಾನಗಳನ್ನು ಎಂದಿಗೂ ಮರೆಯಲಾಗದು, ಸೂರ್ಯ ಮುಳುಗದ ಸಾಮ್ರಾಜ್ಯವನ್ನೇ ಕಟ್ಟಿದ ಬ್ರಿಟಿಷರಿಂದ ದೇಶವನ್ನು ದಾಸ್ಯ ಮುಕ್ತಗೊಳಿಸಲಿಕ್ಕೆ ಮೊದಲ ಸ್ವಾತಂತ್ರದ ಕಿಡಿ ಹೊತ್ತಿಸಿದ ವೀರ ಮಹಿಳೆ ಕಿತ್ತೂರಿನ ರಾಣಿ ಚನ್ನಮ್ಮ ಬೆಳಗಾವಿ ಜಿಲ್ಲೆಯ ಗಂಡು ಮೆಟ್ಟಿನ ನೆಲದವಳು ಎಂಬುದು ನಮ್ಮೆಲ್ಲರಿಗೆ ಹೆಮ್ಮೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಜ-19 ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ಅಂತಹ ಚನ್ನಮ್ಮನ ಗತ ಇತಿಹಾಸವನ್ನು ಇಂದಿನ ಪೀಳಿಗೆಗೆ ನೆನಪಿಸುವುದಕ್ಕಾಗಿ ವೀರರಾಣಿ ಕಿತ್ತೂರು ಚನ್ನಮ್ಮ ಎಂಬ ಬೃಹತ್ ಮೆಗಾ ನಾಟಕವನ್ನು ಗೋಕಾಕ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಇದೇ ಭಾನುವಾರ 22 ರಂದು ಸಂಜೆ 06.00 ಗಂಟೆಗೆ ಏರ್ಪಡಿಸಲಾಗಿದೆ.

- Advertisement -

ಈ ನಾಟಕದಲ್ಲಿ ಸುಮಾರು 250 ಕಲಾವಿದರೂ, ಜೀವಂತ ಕುದುರೆಗಳು, ಒಂಟೆಗಳು ಮತ್ತು ಆನೆಗಳು ನಾಟಕದಲ್ಲಿ ಪ್ರದರ್ಶನ ನೀಡಲಿವೆ. ಇದೊಂದು ಐತಿಹಾಸಿಕವಾದ ಅತ್ಯಂತ ಅದ್ಬುತವಾದ ಮೈಮನಗಳನ್ನು ರೋಮಾಂಚನಗೊಳಿಸುವ ನಾಟಕವಾಗಿದೆ.

ಜನಸಾಮಾನ್ಯರೆಲ್ಲರೂ ನಾಟಕ ನೋಡಲು ಅನುಕೂಲವಾಗುವಂತೆ ಉಚಿತ ಪ್ರವೇಶ ಪತ್ರಗಳನ್ನು ವಿತರಿಸಲಾಗುತ್ತಿದೆ. ಪ್ರವೇಶ ಪತ್ರಗಳಿಲ್ಲದವರೂ ಕೂಡ ಉಚಿತವಾಗಿ ನಾಟಕ ವಿಕ್ಷೀಸಲು ಅವಕಾಶ ಮಾಡಲಾಗಿದ್ದು, ತಾವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ನಾಟಕವನ್ನು ನೋಡಿ ಕಣ್ಣತುಂಬಿಕೊಳ್ಳಬೇಕಾಗಿ ಸಂಸದ ಕಡಾಡಿ ಅವರು ವಿನಂತಿಸಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group