spot_img
spot_img

ರಾಷ್ಟ್ರ ನಾಯಕರ ವೇಷ ಭೂಷಣ ಕಾರ್ಯಕ್ರಮ

Must Read

- Advertisement -

ಸಿಂದಗಿ: ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್‍ನಲ್ಲಿ ಸೋಮವಾರ ಮಹಾತ್ಮಾ ಗಾಂಧಿ ಹಾಗೂ ಲಾಲಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ರಾಷ್ಟ್ರ ನಾಯಕರ ವೇಷ ಭೂಷಣ ಪ್ರದರ್ಶನ ಕಾರ್ಯಕ್ರಮ ಜರುಗಿತು.

ಸಾಲುಮರದ ತಿಮ್ಮಕ್ಕ ವೇಷಧಾರಿ ವಿದ್ಯಾರ್ಥಿನಿ ಸಾಧನಾ ಬಡಿಗೇರ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿಕ್ಕಮಕ್ಕಳ ತಜ್ಞ, ಕಾಂಗ್ರೆಸ್ ಯುವ ಮುಖಂಡ ಡಾ.ಮುತ್ತು ಮನಗೂಳಿ ಅವರು ಮಾತನಾಡಿ, ಕ್ರಿಯೇಟಿವ್ ಕಿಡ್ಸ್ ಹೋಮ್‍ನ ಮಕ್ಕಳು ನಾನಾ ರಾಷ್ಟ್ರ ನಾಯಕರ ವೇಷಧರಿಸಿ ಗಮನ ಸೆಳೆದಿದ್ದಾರೆ. ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯು ಮಕ್ಕಳಿಗೆ ರಾಷ್ಟ್ರ ನಾಯಕರ ವೇಷಧಾರಿ ಮಾಡುವ ಮೂಲಕ ಮಕ್ಕಳಲ್ಲಿ ದೇಶ ಪ್ರೇಮ ತುಂಬವ ಕಾರ್ಯ ಮಾಡಿದೆ. ರಾಷ್ಟ್ರ ನಾಯಕರ ಬಗ್ಗೆ ತಿಳಿಸಿಕೊಡುವ ಮೂಲಕ ಅವರ ತತ್ವ ಆದರ್ಶಗಳನ್ನು ಮಕ್ಕಳು ಮೈಗೂಡಿಸಿಕೊಂಡು ಭವ್ಯ ಭಾರತ ನಿರ್ಮಾಣದ ಕನಸು ನನಸಾಗುವಂತೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

- Advertisement -

ಅಧ್ಯಕ್ಷತೆ ವಹಿಸಿ ರಾಷ್ಟ್ರಪ್ರಶಸ್ತಿ ಪುರಸ್ಕøತ ವಿಶ್ರಾಂತ ಶಿಕ್ಷಕ ಹ.ಮ. ಪೂಜಾರ, ಅತಿಥಿಗಳಾಗಿ ಆಗಮಿಸಿದ ಡಾ.ಸಂಗಮೇಶ ಪಾಟೀಲ, ಡಾ.ಶಿವಾನಂದ ಹೊಸಮನಿ, ಪುರಸಭೆ ಸದಸ್ಯ ಬಸವರಾಜ ಯರನಾಳ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ, ಕಸ್ತೂರಬಾ, ಲಾಲಬಹಾದ್ದೂರ ಶಾಸ್ತ್ರಿ, ಜವಹರಲಾಲ ನೆಹರು, ಬಾಲ ಗಂಗಾಧರ ತಿಲಕ, ಶಿವಾಜಿ, ವಿ.ಡಿ. ಸಾವರಕರ, ಒನಕೆ ಒಬವ್ವ, ರಾಣಿ ಅಬ್ಬಕ್ಕ, ಝಾನಸಿಬಾಯಿ ಲಕ್ಷ್ಮಿಬಾಯಿ, ಕಿತ್ತೂರರಾಣಿ ಚೆನ್ನಮ್ಮ, ವಿವೇಕಾನಂದ, ಸಂಗೋಳ್ಳಿ ರಾಯಣ್ಣ, ಸುಖದೇವ, ಭಗತಸಿಂಗ, ಚಂದ್ರಶೇಖರ ಅಝಾದ, ರಾಣಾಪ್ರತಾಪ ಸಿಂಗ, ಸುಭಾಸಚಂದ್ರ ಭೋಷ, ಸುಚೆತ ಕೃಪಲಾನಿ, ಬಿಕಾಸಿ ಕಾಮಾ, ಜಿಜಾಬಾಯಿ, ಹಜರತ್ ಬೆಗಂ, ವಿಜಯಲಕ್ಷ್ಮಿ ಪಂಡಿತ ಸೇರಿದಂತೆ ಅನೇಕ ರಾಷ್ಟ್ರ ನಾಯಕರ ವೇಷಧರಿಸಿದ 50 ಜನ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಿ ಮೆಚ್ಚುಗೆ ಪಡೆದರು.

ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ, ಮುಖ್ಯಗುರುಮಾತೆ ಡಾ.ಜ್ಯೋತಿ ಪೂಜಾರ, ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಳಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ಶಾಂತಾ ಮೋಸಲಗಿ, ಅಂಬಿಕಾ ಹೂಗಾರ, ಸಿಬ್ಬಂದಿ ವರ್ಗ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group