ಸಿಂದಗಿ: ಪೇಂಟರ್ಸ್‍ಗಳ ಕುಟುಂಬ ಬಡತನದಿಂದ ಕೂಡಿದ್ದು ಅವರ ಮಕ್ಕಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಜೊತೆಗೆ ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಿಕೊಡುತ್ತೇನೆಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಯಕ ಕಟ್ಟಡ ಪೇಂಟರ್ಸ್ ಸಂಘದಿಂದ ಹಮ್ಮಿಕೊಂಡ ತಾಲೂಕಿನ ಪೇಂಟರ್ಸ್ ಸಮಾವೇಶ ಹಾಗೂ ನೂತನವಾಗಿ ಆಯ್ಕೆಗೊಂಡಿರುವ ಶಾಸಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ಕಾರ್ಮಿಕರು ಹಾಗೂ ಪೇಂಟರ್ಸಗಳು ಮೆಲ್ತರದ ಕಟ್ಟಡಗಳನ್ನು ಹತ್ತಿ ಕೆಲಸ ಮಾಡುವ ಪರಿಸ್ಥಿತಿಯಿದ್ದು ತಾವೆಲ್ಲರು ಕಡ್ಡಾಯವಾಗಿ ವಿಮೆ ಮಾಡಿಸಿ ಅಲ್ಲದೆ ಕಾರ್ಮಿಕ ಇಲಾಖೆಯಿಂದ ದೊರೆಯುತ್ತಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಎಲ್ಲರು ಕಾರ್ಮಿಕರ ಕಾರ್ಡುಗಳನ್ನು ಮಾಡಿಸಿ ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಮಿಕ ನಿರೀಕ್ಷಕಿ ಶ್ರೀಮತಿ ಜಗದೇವಿ ಸಜ್ಜನ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ಸದುಪಯೋಗ ಪಡೆದುಕೊಳ್ಳಬೇಕಾದರೆ ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಕಾರ್ಡ ಮಾಡಿಕೊಂಡು ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪೂಜ್ಯ ಶ್ರೀ ಸಂಗಮನಾಥ ಶ್ರೀಗಳು ಹಾಗೂ ಶ್ರೀ ಸೈಯದ್ ಜಮೀಲ್ ಹುಸೇನಿ ಮಗರಬಿಯವರು ಸಾನ್ನಿಧ್ಯ ವಹಿಸಿದ್ದರು.
ಲಕ್ಷ್ಮಣ ದೇವಾಪೂರ, ಬಸನಗೌಡ ಇಂಗಳಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೇಂಟರ್ಸ್ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ ದೇವಾಪೂರ, ಉಪಾಧ್ಯಕ್ಷ ಅಯುಬ್ ಕರಡಿ, ನಗರದ ವ್ಯಾಪಾರಿಗಳಾದ ಬಾಬಾಗೌಡ ಪಾಟೀಲ, ರವಿ ನಾವಿ, ಚೇತನ ಶಾಹಾಪೂರ, ಆಶೀಫ್ ಕುಡಚಿ, ಬಸವರಾಜ ನಾಯ್ಕೊಡಿ, ಶಿವಾನಂದ ಸಾಂಬಾ, ಬಸವರಾಜ ನಾವಿ, ಪೇಂಟರ್ಸ್ ಸಂಘದ ಗೌರಾವಾಧ್ಯಕ್ಷ ಬಾಬು ರಾಠೋಡ, ಅಧ್ಯಕ್ಷ ಮಹ್ಮದ್ ರಫೀಕ ಮಾಶ್ಯಾಳಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಮಿಕರು ತಾಲೂಕಿನ ಸಮಸ್ತ ಪೇಂಟರ್ಸ್‍ಗಳು ಭಾಗವಹಿಸಿದ್ದರು. ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ರಾಜು ನರಗುಂದಿ ನಿರೂಪಿಸಿದರು. ಭೀಮಾಶಂಕರ ಸಿ ಅಗಸರ ವಂದಿಸಿದರು.