ಮಡಿವಾಳ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ
ಸಿಂದಗಿ: ಸಮಾಜದಲ್ಲಿರುವ ಕಂದಾಚಾರ, ಶೋಷಣೆ ಮೂಢನಂಬಿಕೆಗೆ ಒಳಗಾದಂತೆ ವಿಶ್ವ ವಿನೂತನ ಸ್ವತಂತ್ರ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿರುವ ವಿಶ್ವ ಗುರು ಬಸವಣ್ಣನವರು ಸಾರಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಕುಟುಂಬದಲ್ಲಿ ಸಮಾಜದಲ್ಲಿ ಸುಖ- ಶಾಂತಿ ನೆಮ್ಮದಿ ಸಂತೃಪ್ತಿಯಿಂದ ಜೀವನ ಸಾಗಿಸಬೇಕು ಎಂದು ರಾಷ್ಟ್ರೀಯ ಬಸವದಳದ ಸಂಚಾಲಕರಾದ ಪೂಜ್ಯಶ್ರೀ ಸದ್ಗುರು ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶರಣೆ ಶ್ರೀಮತಿ ವಿಜಯಲಕ್ಷ್ಮೀ ಶರಣ ಶ್ರೀ ಶಿವಾನಂದ ಶಾಹಾಪೂರ ಅವರ ಸದನದಲ್ಲಿ ರಾಷ್ಟ್ರೀಯ ಬಸವದಳ ಹಮ್ಮಿಕೊಂಡ ಪವಿತ್ರ ಶ್ರವಣ ಮಾಸದ ಮನೆ ಮನಗಳಲ್ಲಿ ಗುರು ಬಸವ ಜ್ಯೋತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿ, ವಿಶ್ವಗುರು ಬಸವಣ್ಣನವರು ಹಾಗೂ ಅವರ ಸಮಕಾಲಿನ ಶರಣರ ತತ್ವ ಚಿಂತನೆ ಸರ್ವಕಾಲಕ್ಕೂ ಪ್ರಸಕ್ತವಾಗಿವೆ. ಶರಣರು ನುಡಿದಂತೆ ನಡೆದವರು ನಾವು ಎಲ್ಲರು ನುಡಿದಂತೆ ನಡೆಯಬೇಕು. ಸಮಾಜದಲ್ಲಿ ಅಂಧ ಶ್ರದ್ಧೆ ಕಂದಾಚಾರ , ಮೂಢನಂಬಿಕೆಯಿಂದ ದೂರವಿರಲು ಬಸವಣ್ಣನವರ ತತ್ವ ಜೀವನದಲ್ಲಿ ರೂಡಿಸಿ ಕೊಳ್ಳಲು “ಬಸವ ಜ್ಯೋತಿ” ಕಾರ್ಯಕ್ರಮದ ಉದ್ದೇಶವಾಗಿದ್ದು ವಿದ್ಯಾರ್ಥಿಗಳು ತಾವು ಮೊದಲು ಕೈಯಲ್ಲಿ ಮೊಬೈಲ್ ಹಿಡಿಯದೇ ಉತ್ತಮ ಪುಸ್ತಕ ಹಿಡಿಯುವದನ್ನು ಕಲಿಯಬೇಕು ಗುರು ತೋರಿರುವ ಸನ್ಮಾರ್ಗದಲ್ಲಿ ನಡೆಯಬೇಕು ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರಗಳು ನೀಡಬೇಕು ಎಂದರು.
ಜಗದೀಶ ಕಲಬುರ್ಗಿ ಮಾತನಾಡಿ, ಮನೆಯಲ್ಲಿ ಶರಣರ ಸಂತರ ವಿಚಾರ ಧಾರೆಗಳನ್ನು ಜೀವನದಲ್ಲಿ ರೂಡಿಸಿ ಕೊಂಡು ಸುಂದರ ಬದುಕು ಕಟ್ಟಿಕಂಡು ಜೀವನ ನಡೆಸಬೇಕು ಎಂದರು.
ವೇದಿಕೆ ಮೇಲೆ ಕೆ ಇ ಬಿ ಶಾಖಾಧಿಕಾರಿ ಬಸವರಾಜ ಈ ಮಡಿವಾಳರ. ತಾಲೂಕು ಮಡಿವಾಳ ಮಾಚಿದೇವ ಸೇವಾ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಬ ಅಗಸರ ಗುರಣ್ಣ ಶಹಾಪೂರ ಇದ್ದರು.
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ಪ್ರತಿಭಾವಂತ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕುಮಾರಿ ಯಮನಾ ಮಡಿವಾಳರ. ಅಕ್ಷಯ ಮಡಿವಾಳ. ಸೃಷ್ಟಿ ಮಡಿವಾಳ. ನಂದಿನಿ ಅಗಸರ. ದಾನಮ್ಮ ಅಗಸರ. ರಾಹುಲ್ ಅಗಸರ. ರಾಹುಲ್ ಚಂ ಅಗಸರ. ಗೀತಾ ಮಡಿವಾಳಕರ್. ಸತೀಶ ಅಗಸರ. ಮೇಘಾ ಅಗಸರ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರು ಶಿವಾನಂದ ಶಹಾಪೂರ ಸ್ವಾಗತಿಸಿದರು. ಶಿಕ್ಷಕ ಆರ್.ವ್ಹಾ.ಪರೀಟ ಪ್ರಾರ್ಥನೆ ಗೀತೆ ಹೇಳಿದರು. ಶಿಕ್ಷಕ ಸಾಹಿತಿ ಬಸವರಾಜ ಅಗಸರ ನಿರೂಪಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಶಿವಾನಂದ ಶಾಹಾಪೂರ ವಂದಿಸಿದರು.