spot_img
spot_img

ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಹನುಮಂತ ಗುಡ್ಲಮನಿ ಆಯ್ಕೆ

Must Read

- Advertisement -

ಮೂಡಲಗಿ: ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಭಗವಂತರಾಯಗೌಡ ಪಾಟೀಲ ಅವರು ಮೂಡಲಗಿ ಪುರಸಭೆಯ ಅಧ್ಯಕ್ಷ ಹನುಮಂತ ರಾಮಪ್ಪ ಗುಡ್ಲಮನಿ ಅವರನ್ನು ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದಾರೆ.

ಮೂಡಲಗಿ ಪಟ್ಟಣದ ಹಾಲು ಮತ ಸಮಾಜದ ಯುವ ಮುಖಂಡ ಹನುಮಂತ ಗುಡ್ಲಮನಿ ಅವರನ್ನು ರಾಜ್ಯ ಯುವ ಘಟಕದ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದ ಬಗ್ಗೆ ಬೆಂಗಳೂರದ ಸಂಘದ ಕಛೇರಿಯಲ್ಲಿ ಯುವ ಘಟಕದ ರಾಜ್ಯ ಅಧ್ಯಕ್ಷರಾದ ಭಗವಂತರಾಯಗೌಡ ಕೆ ಪಾಟಿಲ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಮೂರ್ತಿ, ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಡಾ.ರಾಜೇಂದ್ರ ಸಣ್ಣಕ್ಕಿ  ಮತ್ತು ಕೆ ರಾಮಚಂದ್ರಪ್ಪಾ,  ಕೃಷ್ಣಮೂರ್ತಿ ಅವರು ಪ್ರಮಾಣ ನೀಡಿ ತಕ್ಷಣದಿಂದ ಸಮಾಜದ ಏಳ್ಗೆಗಾಗಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದ್ದಾರೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಯುವ ಘಟಕದ ನಿರ್ದೇಶಕರಾಗಿ ಹನುಮಂತ ಗುಡ್ಲಮನಿ ಅವರ ಆಯ್ಕೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ, ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ್ಮ  ಹಾಗೂ ಮೂಡಲಗಿ ತಾಲೂಕಿನ ಹಾಲು ಮತ ಸಮಾಜ ಭಾಂಧವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group