spot_img
spot_img

ಪರಿಸರ ವಿನಾಶ ನಿಲ್ಲಿಸದಿದ್ದರೆ ಮಾನವನ ವಿನಾಶ -ಡಾ. ಭೇರ್ಯ ರಾಮಕುಮಾರ್

Must Read

- Advertisement -

ಮೈಸೂರು: ಪರಿಸರ ವಿನಾಶ ತಡೆಗಟ್ಟದಿದ್ದರೆ ಮಾನವ ಕುಲದ ವಿನಾಶ ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ. ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.

ಮೈಸೂರು ಜಿಲ್ಲೆಯ ಕೆ. ಆರ್. ನಗರದ ಕಾರಾಗೃಹದಲ್ಲಿ   ನಡೆದ ಮನಪರಿವರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರೆಸಾರ್ಟ್ಗಳ ನಿರ್ಮಾಣದಿಂದ, ಹೆದ್ದಾರಿಗಳ ನಿರ್ಮಾಣದಿಂದ, ಗಣಿಗಾರಿಕೆಗಳಿಂದ  ಪರಿಸರ ನಿರಂತರವಾಗಿ ಹಾಳಾಗುತ್ತಿದೆ. ಹಲವು ಕಡೆ ಕೃಷಿ ಉದ್ದೇಶಕ್ಕಾಗಿ ಅರಣ್ಯಗಳನ್ನು ನಾಶ ಮಾಡಲಾಗುತ್ತಿದೆ. ಹಿಂದಿನ ತಲೆಮಾರಿನ ಪ್ರಕೃತಿಯನ್ನು ದೇವರೆಂದು ಆರಾಧಿಸುತ್ತಿದ್ದರು. ಇಂದಿನ ಜನ ತಮ್ಮ ಸ್ವಾರ್ಥಕ್ಕಾಗಿ ಪ್ರಕೃತಿ ನಾಶ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕೃತಿ ನಾಶದಿಂದಾಗಿ ಪ್ರವಾಹ, ಅತಿವೃಷ್ಟಿ ಪರಿಸ್ಥಿತಿ ಉಂಟಾಗುತ್ತಿದೆ. ಆಹಾರ ಹಾಗೂ ನೀರಿನ ಅಭಾವದಿಂದ ಆನೆ, ಚಿರತೆ ಮೊದಲಾದ ವನ್ಯಪ್ರಾಣಿಗಳು ಜನವಸತಿ ಪ್ರದೇಶಕ್ಕೆ  ಪ್ರವೇಶಿಸುತ್ತಿವೆ. ಇದರಿಂದಾಗಿ ಆಸ್ತಿ, ಬೆಳೆ, ಪ್ರಾಣಹಾನಿಗಳು ಉಂಟಾಗುತ್ತಿವೆ. ಮರಗಳ ಮರಣಹೋಮದಿಂದ ಬೆಟ್ಟಗುಡ್ಡಗಳು ಸಡಿಲಾಗಿ  ಬೆಟ್ಟಗುಡ್ಡಗಳು ಮಳೆಯಲ್ಲಿ ಕುಸಿದು ಬೀಳುತ್ತಿವೆ. ಸಾವು  ನೋವು ಉಂಟಾಗುತ್ತಿವೆ. ಪರಿಸರ ನಾಶದಿಂದ  ವಾತಾವರಣ ಕಲುಷಿತಗೊಂಡಿದ್ದು ಮನುಷ್ಯರು ಹೃದಯಘಾತ, ಶ್ವಾಸಕೋಶದ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅಶುದ್ಧ ಗಾಳಿ, ಅಶುದ್ಧ ನೀರು ಸೇವನೆಯಿಂದ ಮಾನವಕುಲ ವಿನಾಶದತ್ತ ಸಾಗಿದೆ. ಈಗಲಾದರೂ ಜನರು ಪರಿಸರ ಸಂರಕ್ಷಣೆ ಬಗ್ಗೆ ಗಮನ ನೀಡಬೇಕೆಂದು ಡಾ. ಭೇರ್ಯ ರಾಮಕುಮಾರ್  ಕಿವಿಮಾತು ನುಡಿದರು.

- Advertisement -

ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು, ತಮ್ಮ ಮಕ್ಕಳ  ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಸಸಿಗಳನ್ನು ನೆಡಬೇಕು. ಆ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಭೇರ್ಯ ರಾಮಕುಮಾರ ನುಡಿದರು. ಹಿಂದಿನ ತಲೆಮಾರಿನವರ  ಮುನ್ನೆಚ್ಚರಿಕೆ ಇಂದಾಗಿ ನಾವು ಉತ್ತಮ ಬಾಳುವೆ ನಡೆಸಿದ್ದೇವೆ. ಮುಂದಿನ ತಲೆಮಾರಿಗೆ ಉತ್ತಮ ಪ್ರಕೃತಿ ನೀಡದಿದ್ದರೆ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು ಎಂದು ಎಚ್ಚರಿಕೆ ನೀಡಿದ ಅವರು ಪರಿಸರ ಅಸಮತೋಲನದಿಂದ  ಸೂರ್ಯನ ಕಿರಣಗಳಿಂದ ನಮ್ಮನ್ನು  ರಕ್ಷಿಸುತ್ತಿರುವ ಓಜೋ ನ್ ಪದರವು ದುರ್ಬಲಗೊಳ್ಳಲಿದೆ. ಭೂಮಿಯ ಜೀವಿಗಳ ನಾಶಕ್ಕೆ ಕಾರಣವಾಗಲಿದೆ ಎಂಬ ಆತಂಕ  ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕಾರಾಗೃಹದ ಖ್ಯೆದಿ ಗಳಿಗೆ ರಕ್ಷಾಬಂಧನ ನಡೆಸಿ ಮಾತನಾಡಿದ ಕೆ. ಆರ್. ನಗರದ ಬ್ರಹ್ಮಕುಮಾರಿ  ಈಶ್ವರೀಯ ವಿಶ್ವವಿದ್ಯಾಲಯಧ ಸಹೋದರಿ ಅಮೃತ ಅವರು ಮಾತನಾಡಿ ಮನುಷ್ಯನು ಯಾವುದೊ ಕೆಟ್ಟಗಳಿಗೆಯಲ್ಲಿ ತಪ್ಪು ಮಾಡುವುದು ಸಹಜ. ಆದರೆ ಆತ  ಮತ್ತಮತ್ತೆ ತಪ್ಪು ಮಾಡಬಾರದು. ಜೀವನದಲ್ಲಸತ್ಯ ಹರಿಶ್ಚಂದ್ರ ನಾಟಕ ನೋಡಿದ ನಂತರ ಮಹಾತ್ಮಾರಾಗಿ ಪರಿವರ್ತನೇ ಆದರು. ಅದೇ ರೀತಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡಿದ ಸ್ವಾಮಿ ವಿವೇಕಾನಂದ ಅವರು ಮಹಾ ವ್ಯಕ್ತಿ ಆದರು. ಖ್ಯಾಡಿಗಳು ತಮ್ಮ ಮನಪರಿವರ್ತನೆ ಮಾಡಿಕೊಳ್ಳಬೇಕು. ಸಮಾಜದಲ್ಲಿ ಸಾಧಕರಾಗಿ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ನಿವೃತ್ತ ಸ್ಯೆನಿಕ ಮಧು ಕುಮಾರ್, ಶಿವು ಸ್ಯೆನಿಕ ಅಕಾಡೆಮಿಯ ಶಿವು ಜೈಲ್ ಸೂಪರಿಡೆಂಟ್ ರಘುಪತಿ ಮುಖ್ಯ ಅತಿಥಿಗಳಾಗಿದ್ದರು. ಗಾಯಕ ಬೈರಾಜ್ ಮೂಲೆಪೆಟ್ಲು ಗೀತೆಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು.

- Advertisement -

ಉಮಾ ಎಲ್ಲರನ್ನು ಸ್ವಾಗತಿಸಿದರು. ಗಿರೀಶ್ ಅಥಿತಿಗಳ ಪರಿಚಯ ಮಾಡಿಕೊಟ್ಟರು.

- Advertisement -
- Advertisement -

Latest News

ವಾಹನ ಸವಾರರಿಗೆ ಬೆಲೆ ಏರಿಕೆ ಬರೆ – ಈರಣ್ಣ ಕಡಾಡಿ

ಮೂಡಲಗಿ:ಲೋಕಸಭಾ ಚುನಾವಣೆ ನಂತರ ರಾಜ್ಯದ ವಾಹನ ಸವಾರರಿಗೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ 3 ರೂ, ಡೀಸೆಲ್ 3.50 ರೂ. ಏರಿಸುವ ಮೂಲಕ ಗ್ಯಾರಂಟಿ ಬರೆ ನೀಡಿದೆ...
- Advertisement -

More Articles Like This

- Advertisement -
close
error: Content is protected !!
Join WhatsApp Group