spot_img
spot_img

ವಡೇರಹಟ್ಟಿ ಸರ್ಕಾರಿ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಉದ್ಘಾಟನೆ

Must Read

- Advertisement -

 ‘ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು’

ಮೂಡಲಗಿ: ‘ಶಾಲಾ ಮಕ್ಕಳು ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗುವಂಥ ಕಾರ್ಯಚಟುವಟಿಕೆಗಳು ಶಾಲೆಗಳಲ್ಲಿ ನಿರಂತರವಾಗಿ ನಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.  

ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯ್ತಿಯಿಂದ ರೂ. 2 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಾ. ಎ.ಪಿ.ಜಿ. ಅಬ್ದುಲ್‍ಕಲಾಂ ವಿಜ್ಞಾನ ಪ್ರಯೋಗಾಲಯ ಮತ್ತು ವಿದ್ಯಾರ್ಥಿಗಳ ವಿಜ್ಞಾನ ಪ್ರದರ್ಶನದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದರು.

- Advertisement -

ವಡೇರಹಟ್ಟಿ ಗ್ರಾಮ ಪಂಚಾಯ್ತಿಯವರು ರೂ. 2 ಲಕ್ಷ ವೆಚ್ಚದಲ್ಲಿ  ಪ್ರಾಥಮಿಕ ಶಾಲೆಯಲ್ಲಿ ಪ್ರಯೋಗಾಲಯ ನಿರ್ಮಿಸಿದ್ದು ಶ್ಲಾಘನೀಯವಾಗಿದೆ. ಇದು ಇತರೆ ಗ್ರಾಮ ಪಂಚಾಯ್ತಿಗಳಿಗೆ ಮಾದರಿಯಾಗಿದೆ ಎಂದರು.  

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮ್ ಲೋಕನ್ನವರ ಮಾತನಾಡಿ, ಸಿ.ವಿ. ರಾಮನ್ ಅವರು ಭಾರತವು ಕಂಡ ಶ್ರೇಷ್ಠ ವಿಜ್ಞಾನಿಯಾಗಿದ್ದು, ಅವರ ಸಂಶೋಧನೆಯ ನೆನಪಿಗಾಗಿ ಭಾರತದಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತಿದೆ. ಮಕ್ಕಳು ವಿಚಾರವಂತರಾಗಬೇಕು ಎಂದರು.

          ಅತಿಥಿ ಬಾಲಶೇಖರ ಬಂದಿ ಹಾಗೂ ವಡೇರಹಟ್ಟಿ ಕೇಂದ್ರದ ಸಮೂಹ ಸಂಪನ್ಮೂಲ ವ್ಯಕ್ತಿ ಆನಂದ ಹಮ್ಮನವರ ಮಾತನಾಡಿದರು. 

- Advertisement -

        ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಕ್ಕವ್ವ ಮಳಿವಡೇರ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಲಕ್ಕವ್ವ ಸಾರಾಪೂರ, ಸದಸ್ಯರಾದ ಲಕ್ಷ್ಮೀ ನಂದಿ, ಪ್ರವೀಣ ಈರಗಾರ, ಲಕ್ಷ್ಮೀಬಾಯಿ ಹೊಳ್ಕರ, ರುಕ್ಮವ್ವ ಡೂಗನ್ನವರ, ವಿದ್ಯಾಶ್ರೀ ಜೋಕಾನಟ್ಟಿ, ಮಾರುತಿ ಡೊಣವಾಡ, ಸ್ವಾಗತಿ ಭಜಂತ್ರಿ, ಸಿದ್ದಯ್ಯ ಪೂಜೇರಿ, ಅಶೋಕ ಅರಸಪ್ಪಗೋಳ, ಲಕ್ಕವ್ವ ಹಾದಿಮನಿ, ಯಮನವ್ವ ತಳವಾರ, ಪಿಡಿಒ ಶಿವಾನಂದ ಗುಡಸಿ, ಮುಖ್ಯ ಶಿಕ್ಷಕ ಎಲ್.ವಿ. ಕೊರಕೊಪ್ಪ, ಎಂ.ಕೆ. ಶಿರಗೂರ, ಬಿ.ಡಿ. ರಡ್ಡಿ, ಎಸ್.ಎಂ. ನಾಯಿಕ, ಎಂ.ಎಂ. ನದಾಫ, ಬಿ.ಎಲ್. ನಾಯಿಕ, ಎಸ್.ಐ. ಈರೇಶನವರ, ಜಿ.ಆರ್. ಬಡಿಗೇರ ಭಾಗವಹಿಸಿದ್ದರು. 

ವಿ.ಪಿ. ರಾಜೇಶ್ವರಿ ನಿರೂಪಿಸಿದರು, ಮುಖ್ಯ ಶಿಕ್ಷಕ ಎಲ್.ಯು. ಕೊರಕೊಪ್ಪ ವಂದಿಸಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group