spot_img
spot_img

ಸಮಾಜವನ್ನು ಎಚ್ಚರಿಸುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ: ಸಾಹಿತಿ ಆಯ್ ಬಿ ಹಿರೇಮಠ

Must Read

- Advertisement -

ಬಸವನಬಾಗೇವಾಡಿ – ಸಾಹಿತ್ಯ ನಿಂತ ನೀರಾಗಬಾರದು ಅದು ಸದಾ ಹೊಸತನದಿಂದ ಹರಿಯುತ್ತಿರಬೇಕು.ಸಮಾಜವನ್ನು ಸರಿದಾರಿಗೆ ತರುವಲ್ಲಿ ಕುಟುಕುವ ಚುಟುಕು ಸಾಹಿತ್ಯಕ್ಕೆ ದೊಡ್ಡ ಶಕ್ತಿ ಇದೆ. ಧಾವಂತದ ಕಾಲದಲ್ಲಿ ಚುಟುಕು ಸಾಹಿತ್ಯ ಮತ್ತು ಬರಹಗಾರರು ಬೆಳಕಿಗೆ ಬರಬೇಕು ಎಂದು ಮುದ್ದೇಬಿಹಾಳದ ಸಾಹಿತಿ ಆಯ್ ಬಿ ಹಿರೇಮಠ ಅವರು ಅಭಿಪ್ರಾಯ ಪಟ್ಟರು.

ಅವರು ಇಲ್ಲಿನ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಸ್ಥಳೀಯ ವಿರಕ್ತಮಠದಲ್ಲಿ ಶ್ರೀ ಮ ನಿ ಪ್ರ ಸಿದ್ದಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದ್ದ ಎರಡನೇ ವಾರ್ಷಿಕೋತ್ಸವ, ಚುಟುಕು ಕವಿಗೋಷ್ಠಿ ಹಾಗೂ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಕವಿಯತ್ರಿ ಕೊಲ್ಹಾರದ ಬೋರಮ್ಮ ಪತಂಗಿಯವರು ಮಾತನಾಡಿ, ಸುಮಾರು ಎರಡುನೂರು ಕವಿಗಳ ಸದಸ್ಯರ ಚುಟುಕು ಗುಟುಕು ವಾಟ್ಸಾಪ್ ಗ್ರೂಪ್ ಮಾಡಿಕೊಂಡ ಈ ಪರಿಷತ್ತು ಉದಯೋನ್ಮುಖ ಬರಹಗಾರರನ್ನು ನಾಡಿಗೆ ಪರಿಚಯಿಸುತ್ತಿದೆ. ಕೊರೊನಾ ಸಮಯದಲ್ಲಿ ಮೂವತ್ತಕ್ಕೂ ಹೆಚ್ಚು ಅಭಿಯಾನ ಮಾಡಿ ಜನತೆಯನ್ನು ಜಾಗೃತಗೊಳಿಸಿದೆ ಎಂದರು.

- Advertisement -

ಇವಣಗಿಯ ಶಿವಬಸಯ್ಯ ಹಿರೇಮಠ(ಬಸವೇಶ್ವರ ನಾಟಕ) ಶ್ರೀಶೈಲ ಇಂಗಳೇಶ್ವರ(ಡೊಳ್ಳಿನ ಹಾಡಕಿ) ಶಹಾವಲಿ ನಬಿಸಾಬ್ ಅವಟಿ(ದೊಡ್ಡಾಟ ಕಲಾವಿದ) ಭಾಗ್ಯಶ್ರೀ ಬಿರಾದಾರ(ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ ಹುದ್ದೆ) ರಾಹುಲ್ ಕಾಂಬಳೆ( ಯುವ ಕವಿ) ವಿಶಾಲ್ ಚಿಕ್ಕೊಂಡ ( ಹಾರ್ವರ್ಡ್ ವಿವಿ ಸಂಶೋಧನಾರ್ಥಿ)

ಅವರನ್ನು ಇದೆ ಸಂದರ್ಭದಲ್ಲಿ ಗೌರವಿಸಲಾಯಿತು.

ಪರಸ್ಪರ ಸತಿ-ಪತಿಯರನ್ನು ಸಾಧಕರ ಸ್ಥಾನದಲ್ಲಿ ಪರಿಷತ್ತು ಗೌರವಿಸಿದ್ದು ವಿಶೇಷವಾಗಿತ್ತು. ಸಾಧಕರ ಪರವಾಗಿ ಭಾಗ್ಯಶ್ರೀ ಬಿರಾದಾರ ಮಾತನಾಡಿದರು.

- Advertisement -

ಕಾರ್ಯಕ್ರಮದಲ್ಲಿ ಬಸವಣ್ಣನವರ ಪಾತ್ರ ಮಾಡುವ ಶಿವಬಸಯ್ಯ ಹಿರೇಮಠ ಅವರಿಂದ ವಚನ ಗಾಯನ, ಇವರುಗಳಿಗೆ ಕಾಳಪ್ಪ ಬಡಿಗೇರ ಮತ್ತು ಸಂಗಡಿಗರು ಹಾರ್ಮೋನಿಯಂ ಮತ್ತು ತಬಲಾ ಸಾಥ್ ನೀಡಿದರು. ಹಾಗೂ ಕರ್ನಾಟಕ ಕೋಗಿಲೆ ಎಂದು ಹೆಸರು ಮಾಡಿದ ಡೊಳ್ಳಿನ ಹಾಡಕಿಯ ಶ್ರೀಶೈಲ ಇಂಗಳೇಶ್ವರ ಇವರ ಗಾಯನವಿತ್ತು.

ಜಿಲ್ಲೆಯ ವಿವಿಧ ತಾಲೂಕಿನಿಂದ ಆಗಮಿಸಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕವಿ- ಕವಯಿತ್ರಿಯರು ತಮ್ಮ ಚುಟುಕುಗಳನ್ನು ವಾಚಿಸಿದರು. ಎಲ್ಲರಿಗೂ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು.

ವಿಶೇಷ ಸನ್ಮಾನಿತರಾಗಿ ಪತ್ರಕರ್ತರ ಸಂಘದ ವಿಜಯಪೂರ ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ ಬೆಣ್ಣೂರ,  ಸದಸ್ಯರಾದ ನಾಗೇಶ್ ನಾಗೂರ, ಸಂಗೀತ ಶಾರದೆ ಪ್ರಶಸ್ತಿ ವಿಜೇತೆ ವಿಜಯಲಕ್ಷ್ಮಿ ಹಿರೇಮಠ, ಚಿತ್ರಕಲಾ ಸ್ಪರ್ಧಾ ವಿಜೇತ ಕು,ನಿಂಗಪ್ಪ ದಂಡಿನ, ಪ್ರಬಂಧ ವಿಜೇತ ಕು, ರಾಜು ಬಂಡಿವಡ್ಡರ ಅವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಶಾಖಪಟ್ಟಣಂ CISF ನ ಕುಮಾರಸ್ವಾಮಿ ಹಿರೇಮಠ, ಕರವೇ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ಅಶೋಕ್ ಹಾರಿವಾಳ, ಕಚುಸಾಪ ವಿಜಯಪುರ ಜಿಲ್ಲಾಧ್ಯಕ್ಷ ಜಗದೀಶ್ ಸಾಲಳ್ಳಿ , ಅಧ್ಯಕ್ಷತೆ ವಹಿಸಿದ ಹೇರಕಲ್ ಗ್ರಾಮ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾ ರಬಿನಾಳ, ತಾಲೂಕಾ ಕಚುಸಾಪ ಅಧ್ಯಕ್ಷ ಪ್ರಭಾಕರ ಖೇಡದ ಮಾತನಾಡಿದರು. ವಿವೇಕ್ ಬ್ರಿಗೇಡ್ ಸದಸ್ಯರಾದ ರವಿಗೌಡ ಚಿಕ್ಕೊಂಡ ಇದ್ದರು. ವಿರಕ್ತಮಠದ ಶ್ರೀ ಮ ನಿ ಪ್ರ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಚನಗೈದರು.

ಈಶ್ವರ ಹಳ್ಳಿಯವರು ಪ್ರಾರ್ಥನೆಗೈದರು, ಕಚುಸಾಪ ಸಂಘಟಕರಾದ ಬಸವರಾಜ ಹಡಪದ ಅವರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಅರುಂಧತಿ ಹತ್ತಿಕಾಳ ಅವರ ಸ್ವಾಗತ ಮತ್ತು ಪರಿಚಯ, ಕಜಾಪ ಅಧ್ಯಕ್ಷ ದೇವೇಂದ್ರ ಗೋನಾಳ ಅವರ ನಿರೂಪಣೆ, ಯೋಗ ಗುರು ಕಾಶೀನಾಥ ಅವಟಿ ಅವರ ವಂದನಾರ್ಪಣೆ ಮಾಡಿದರು.

- Advertisement -
- Advertisement -

Latest News

ಶಿವಾನಂದ ಮಹಾವಿದ್ಯಾಲಯದಲ್ಲಿ ವರಕವಿ ಬೇಂದ್ರೆಯವರ ೪೩ನೇ ಪುಣ್ಯಸರಣೆ

ಕಾಗವಾಡ: ನಗರದ ಶಿವಾನಂದ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಪ್ರಾಯೋಜಿತ ಕನ್ನಡ ವಿಭಾಗ ವರಕವಿ ಶಬ್ದಗಾರುಡಿಗ ಡಾ. ದ. ರಾ. ಬೇಂದ್ರೆಯವರ ೪೩ನೇ ಪುಣ್ಯಸ್ಮರಣೆಯನ್ನು ಆಯೋಜಿಸಲಾಗಿತ್ತು. ಈ ಸಮಾರಂಭದ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group