spot_img
spot_img

ಜಗದೀಶ ಶೆಟ್ಟರ ಅವರ ಗೆಲುವು ನಿಶ್ಚಿತ – ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಮೂಡಲಗಿ: ‘ಅರಭಾವಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಅತೀ ಹೆಚ್ಚು ಮತ ನೀಡಲು ಬದ್ಧರಾಗಿದ್ದು, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಅವರ ಗೆಲವು ನಿಶ್ವಿತವಾಗಿದೆ’ ಎಂದು ಅರಭಾವಿಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಶುಕ್ರವಾರ ಸಂಜೆ ಇಲ್ಲಿಯ ಶಿವಬೋಧರಂಗ ಸೊಸೈಟಿಯ ಸಭಾಭವನದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು, ಭಾರತದ ಭವಿಷ್ಯಕ್ಕಾಗಿ ಮತ್ತು ದೇಶದ ಅಭಿವೃದ್ಧಿಗಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಮತ್ತು ನರೇಂದ್ರ ಮೋದಿ ಅವರು ಪ್ರಧಾನಿ ಆಗುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.
ದೇಶದ ವಿವಿಧ ಆಯಾಮಗಳ ಚುನಾವಣೆಯ ಸಮೀಕ್ಷೆಯಲ್ಲಿ ಬಿಜೆಪಿ ಪಕ್ಷವು ಅತೀ ಹೆಚ್ಚು ಸ್ಥಾನಗಳಿಂದ ಮತ್ತೆ ಸರ್ಕಾರವನ್ನು ನಿರ್ಮಿಸಲಿದೆ ಎಂದು ಸಾಬೀತಾಗಿದೆ. ಜಗದೀಶ ಶೆಟ್ಟರ ಅವರನ್ನು ಚುನಾಯಿಸುವುದರಿಂದ ಅದು ಬೆಳಗಾವಿ ಜಿಲ್ಲೆಗೆ ವರದಾನವಾಗಲಿದೆ. ಜಗದೀಶ ಶೆಟ್ಟರ್ ಅವರ ಮೂಲಕ ಜಿಲ್ಲೆಯು ಇನ್ನಷ್ಟು ಅಭಿವೃದ್ಧಿಯಾಗಲಿದೆ ಎಂದರು.

ದೇಶದ ಪಕ್ಕದ ಶತ್ರುಗಳಾದ ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳ ಉಪಟಳವನ್ನು ಸದ್ದಡಗಿಸಲು ಮೋದಿಯಂಥ ಸಮರ್ಥ ನಾಯಕ ಈ ದೇಶಕ್ಕೆ ಅವಶ್ಯ ಬೇಕು. ಭಾರತವು ಇಂದು ಮಹಾನ್ ಶಕ್ತಿಯಾಗಿ ನಿರ್ಮಾಣವಾಗಲು ನರೇಂದ್ರ ಮೋದಿಯಂತ ಪ್ರಧಾನಿಯಿಂದ ಸಾಧ್ಯವಾಗಿದೆ. ನರೇಂದ್ರ ಮೋದಿ ಅವರ ನಡೆಗೆ ಇಡೀ ಜಗತ್ತು ಭಾರತದತ್ತ ನೋಡುವಂತಾಗಿದೆ ಎಂದರು.

- Advertisement -

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಯು ಶೂನ್ಯವಾಗಿದೆ. ಕಾಂಗ್ರೆಸ್‍ಗೆ ಅಧಿಕಾರ ಕೊಟ್ಟಿದ್ದ ತಪ್ಪಿಗೆ ಜನರು ಈಗ ಶಪಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಅಪಪ್ರಾಚಾರಕ್ಕೆ ಕಿವಿಗೊಡಬೇಡಿ. ಚುನಾವಣೆ ಸಂದರ್ಭಕ್ಕೆ ಮಾತ್ರ ಅವರು ಕಾಣಿಸಿಕೊಳ್ಳತ್ತಾರೆ. ದೇಶ ಸುರಕ್ಷಿತವಾಗಿರಲು, ಅಭಿವೃದ್ಧಿಯತ್ತ ಸಾಗಿಸಲು ಬಿಜೆಪಿ ಪಕ್ಷವನ್ನು ಚುನಾಯಿಸಲು ನಾವೆಲ್ಲ ಬದ್ಧರಾಗೋಣ ಎಂದು ಕರೆಕೊಟ್ಟರು.

ಇದೇ ಏ. 23ರಂದು ಅರಭಾವಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಏರ್ಪಡಿಸುತ್ತಿದ್ದು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ಷೇತ್ರದಿಂದ ಜಗದೀಶ ಶೆಟ್ಟರ ಅವರಿಗೆ ಅಗ್ರ ಮತ ನೀಡುವ ಮೂಲಕ ಗೆಲ್ಲಿಸಲು ಪಣತೊಡೋಣ ಎಂದರು.

- Advertisement -

ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ ಶೆಟ್ಟರ ಪತ್ನಿ ಶಿಲ್ಪಾ ಶೆಟ್ಟರ ಮಾತನಾಡಿ ‘ನರೇಂದ್ರ ಮೋದಿ ಅವರು ಸಮರ್ಥ ನಾಯಕರಾಗಿದ್ದಾರೆ. ದೇಶ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ. ಜಗತ್ತಿನಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಬಿಜೆಪಿಗೆ ಮತವನ್ನು ನೀಡಬೇಕು’ ಎಂದರು.

ಕೋವಿಡ್‍ದಂತ ಕಾಯಲೆಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಮೂಲಕ ಪ್ರಧಾನಿ ನರೇಂದ್ರ ಮೋಧಿ ಅವರು ಇಡೀ ಜಗತ್ತಿಗೆ ಮಾದರಿಯೆನಿಸಿಕೊಂಡಿದ್ಧರೆ. ರೈತರ, ಮಹಿಳೆಯರ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ. ಆಯೋಧ್ಯೆಯಲ್ಲಿ ರಾಮಮಂದಿರವನ್ನು ಸ್ಥಾಪಿಸುವ ಮೂಲಕ 500 ವರ್ಷಗಳ ಇತಿಹಾಸಕ್ಕೆ ಹೊಸ ಭಾಷೆ ಬರೆದಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ಆಕ್ಸಿಜನ್ ನಿರ್ವಹಿಸುವ ಜವಾಬ್ದಾರಿ ಜಗದೀಶ ಶೆಟ್ಟರ ಅವರಿಗೆ ಕೊಟ್ಟಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಅವರಿಗಿದೆ. ಬೆಳಗಾವಿ ಜಿಲ್ಲೆಯ ಯಾವತ್ತೂ ಅಭಿವೃದ್ಧಿಗೆ ಜಗದೀಶ ಶೆಟ್ಟರ್ ಅವರಂಥ ಸಮರ್ಥ ನಾಯಕರು ಬೇಕು. ಜಗದೀಶ ಶೆಟ್ಟರ ಅವರಿಗೆ ಮತ ನೀಡಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು.

ವೇದಿಕೆಯಲ್ಲಿ ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಬಿಜೆಪಿ ಮಹಿಳಾ ಮೋರ್ಚಾದ ಇಂದಿರಾ ಅಂತರಗಟ್ಟಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಬಸವರಾಜ ಗುಲಗಾಜಂಬಗಿ, ಅಪ್ಪಾಸಾಹೇಬ ಹೊಸಕೋಟಿ ಉಪಸ್ಥಿತರಿದ್ದರು.
ಸಿದ್ಧಣ್ಣ ದುರದುಂಡಿ, ಮಹಾಂತೇಶ ಕುಡಚಿ ನಿರೂಪಿಸಿದರು.

- Advertisement -
- Advertisement -

Latest News

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ ಆರಂಭ

ತಿರುವನಂತಪುರಂ - ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣಾ ಪ್ರಚಾರ ಮುಗಿಸಿದ ಕೂಡಲೆ ನರೇಂದ್ರ ಮೋದಿ ತಮ್ಮ ೪೫ ತಾಸುಗಳ ಧ್ಯಾನ ಪೂರೈಸಲು ತಮಿಳುನಾಡಿನ ಕನ್ಯಾಕುಮಾರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group