spot_img
spot_img

ಇಂಗ್ಲೀಷ, ಹಿಂದಿ ವ್ಯಾಮೋಹದಲ್ಲಿ ಕನ್ನಡ ಸೊರಗುತ್ತಿದೆ – ಮುಕ್ತಾಯಕ್ಕ

Must Read

- Advertisement -

ಸಿಂದಗಿ: ಭಾರತ ದೇಶದಲ್ಲಿ ಕನ್ನಡ ಭಾಷೆ ಮೂರನೇ ಸ್ಥಾನ ಪಡೆದುಕೊಂಡಿದೆ ಆದರೆ ನಾವೆಲ್ಲ ಅಂತರ ಭಾಷೆ ಇಂಗ್ಲೀಷ, ರಾಷ್ಟ್ರೀಯ ಭಾಷೆ ಹಿಂದಿ ವ್ಯಾಮೋಹದಲ್ಲಿ ಮುಳುಗಿ ಕನ್ನಡ ಸೊರಗಿ ಹೊಗುತ್ತಿದೆ ಎಂದು ಎಚ್.ಜಿ.ಕಾಲೇಜಿನ ಪ್ರಾದ್ಯಾಪಕಿ ಮುಕ್ತಾಯಕ್ಕ ಕತ್ತಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ  ಉಪನ್ಯಾಸ ನೀಡಿ, ಕರ್ನಾಟಕ ಏಕೀಕರಣವಾದ ಬಳಿಕ ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ಮೊಳಗುತ್ತಿದೆ. ಅಲ್ಲದೆ ನಾಲಿಗೆಯಿಂದ ತುಟಿಯವರೆಗೆ ಕನ್ನಡ ಭಾಷೆ ಅನುಕರಣೆಯಲ್ಲಿದೆ ಆದರೆ ನಾವೆಲ್ಲ ಪಾಶ್ಚಿಮಾತ್ಯ ಸಂಸ್ಕೃತಿಗೆ ಬೆನ್ನುಹತ್ತಿ ಮಮ್ಮಿ ಡ್ಯಾಡಿ ಅನಿಸಿಕೊಳ್ಳುತ್ತಿದ್ದೇವೆ. ಕನ್ನಡ ಸಂಪೂರ್ಣ ಗಟ್ಟಿಯಾಗಿದೆ. ಕಲಿಕೆಗೆ ಇಂಗ್ಲೀಷ ಭಾಷೆಯನ್ನು ಕಲಿಯೋಣ ಆದರೆ ಮಾತೃಭಾಷೆಯ ಬದಲಾಗಿ ಕಲಿಯೋದು ಬೇಡ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಮೇಶ ಭೂಸನೂರ ಮಾತನಾಡಿ, ಕನ್ನಡ ಭಾಷೆ ಎಂದೆಂದು ತಾಯಿ ಭಾಷೆ ಅದು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಮರೆಯಾಗುತ್ತಿದೆ. ಎಲ್ಲ ಭಾಷೆಗಳು ಕಲಿಕೆಗೆ ಇರಲಿ ಪ್ರತಿ ಮನೆ ಮನೆಯಲ್ಲಿ ಕನ್ನಡ ವಿರಲಿ ಎಂದು ಹೇಳಿದ ಅವರು, 30 ವರ್ಷಗಳ ಹಿಂದೆ ಡಾ. ರಾಜಕುಮಾರ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು ಇಂದು ಡಾ. ಪುನಿತರಾಜಕುಮಾರ ಅವರಿಗೆ ಬಿಜೆಪಿ ಸರಕಾರದಿಂದ ನೀಡಲಾಗಿದೆ ಎಂದು ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ತಹಶೀಲ್ದಾರ ನಿಂಗಣ್ಣ ಬಿರಾದಾರ, ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ತಾಪಂ ಇಓ ಬಾಬು ರಾಠೋಡ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜಶೇಖರ ಕೂಚಬಾಳ, ಸಿಪಿಐ ರವಿ ಉಕ್ಕುಂದ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ವೇದಿಕೆ ಮೇಲಿದ್ದರು.

ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಶಾಸಕ ರಮೇಶ ಭೂಸನೂರ ಧ್ವಜಾರೋಹಣ ಮಾಡಿದರು. ಕಸಾಪ ಅಧ್ಯಕ್ಷ ಕನ್ನಡಾಂಬೆಯ ದ್ವಜಾರೋಹಣ ನರವೆರಿಸಿದರು ನಂತರ ಕನ್ನಡ ಮಾತೆಯ ಮೆರವಣಿಗೆಯು ಕನ್ನಡಾಂಬೆ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದಿಂದ ಜಗದ್ಗುರು ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ಟಿಪ್ಪು ಸುಲ್ತಾನ ವೃತ್ತ, ಡಾ. ಅಂಬೇಡ್ಕರ ವೃತ್ತ, ಸಂಗೋಳ್ಳಿ ವೃತ್ತದಿಂದ ಬಸವ ಮಂಟಪದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಶಾಲಾ ಮಕ್ಕಳು ಪ್ರಭಾತ ಪೇರಿಯುದ್ದಕ್ಕು ಕನ್ನಡಸ ಕಹಳೆ ಮೊಳಗಿತು.

- Advertisement -

ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿ ಪರಿಚಯಿಸಿದರು. ಪವನ ಕುಲಕರ್ಣಿ ನಿರೂಪಿಸಿದರು. ದೈಹಿಕ ನಿರ್ದೇಶಕ ರವಿ ಗೋಲಾ ವಂದಿಸಿದರು.

- Advertisement -
- Advertisement -

Latest News

ಸೈನಿಕರು ದೇಶದ ಆಸ್ತಿ ಮತ್ತು ಶಕ್ತಿ ಇದ್ದಂತೆ-  ಪ್ರೊ. ಸಂಜೀವ ಮಂಟೂರ

ಮೂಡಲಗಿ:-ಪಟ್ಟಣದ ಆರ್ ಡಿ ಎಸ್ ಕಾಲೇಜಿನಲ್ಲಿ "ಕಾರ್ಗಿಲ್ ವಿಜಯೋತ್ಸವ" ಕಾರ್ಯಕ್ರಮ ನಡೆಯಿತು. ಭಾರತ ದೇಶದ ರಕ್ಷಣೆಯಲ್ಲಿ ವೀರಯೋಧರು ಒಂದು ಶಕ್ತಿಯಾಗಿ ದೇಶದ ಸಂರಕ್ಷಕರಾಗಿ ತಮ್ಮ ಜೀವವನ್ನು ತ್ಯಾಗ ಮಾಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group