ತಹಶಿಲ್ದಾರರ ಮೇಲೆ ಹಲ್ಲೆಗೆ ಯತ್ನಿಸಿದ ವಕೀಲೆ ಪ್ರಕರಣ
ಬೀದರ – ಒತ್ತುವರಿ ಮಾಡಲಾಗಿದ್ದ ಸರ್ಕಾರಿ ಜಮೀನು ತೆರವುಗೊಳಿಸಲು ಹೋಗಿದ್ದ ತಹಶಿಲ್ದಾರರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಜಿಲ್ಲಾ ಕಾರ್ಯಲಯಕ್ಕೆ ಹೋಗಿ ಒಳಗೆ ಹೋಗದೆ ರಸ್ತೆ ಮೇಲೆ ನಿಂತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಪ್ರಕರಣ ಹಿನ್ನೆಲೆಯಲ್ಲಿ ನೋಡಿದರೆ ….ಭಾಲ್ಕಿ ತಹಶಿಲ್ದಾರರು ಸರ್ಕಾರದ ಜಾಗವನ್ನು ಪೊಲೀಸ್ ಇಲಾಖೆ ಸಹಾಯದಿಂದ ತೆರವು ಮಾಡುವ ಸಂದರ್ಭದಲ್ಲಿ ಭಾಲ್ಕಿ ಯಲ್ಲಿ ವಕೀಲೆ ಧನಲಕ್ಷ್ಮಿ ರಾಜಕುಮಾರ ಬಳತೆ ತೆರವು ಕಾರ್ಯಾಚರಣೆ ತಡೆಯಲು ಹೋಗಿ ತಹಶಿಲ್ದಾರರ ಮೇಲೆಯೇ ಹಲ್ಲೆ ಮಾಡಲು ಹೋಗಿದ್ದರು ಅದಕ್ಕೆ ಅವರು ಕೊಡುವ ಕಾರಣ ಎಂದರೆ ಇನ್ನೂ ಈ ಪ್ರಕರಣ ಕೋರ್ಟ್ ನಲ್ಲಿ ನಡೆಯುತ್ತಿದ್ದು ತೆರವು ಕಾರ್ಯಾಚರಣೆ ಕಾನೂನು ಬಾಹಿರ ಎಂದು.
ಆದರೆ ಭಾಲ್ಕಿ ತಹಶಿಲ್ದಾರರು ಮೇಲಧಿಕಾರಿಗಳ ಆದೇಶ ಮೇರೆಗೆ ಸರ್ಕಾರದ ಅತಿಕ್ರಮಣ ಜಾಗವನ್ನು ತೆರವು ಮಾಡಲು ರಾತ್ರಿ ೧;೩೦ ಗಂಟೆಗೆ ಹೋಗಿದ್ದರು. ತೆರವು ಮಾಡುವ ಸಂದರ್ಭದಲ್ಲಿ ವಕೀಲೆ ಧನಲಕ್ಷ್ಮಿ ರಾಜಕುಮಾರ ಬಳತೆ ತಡೆಯಲು ಪ್ರಯತ್ನಿಸಿದರು ಈ ಹಿನ್ನೆಲೆಯಲ್ಲಿ ಭಾಲ್ಕಿ ಪೊಲೀಸರು ಬಂಧಿಸಿದರು ಮತ್ತು ನನ್ನ ಮೇಲೆ ಪೊಲೀಸರು ಹಲ್ಲೆ ಮಾಡಿದಾರೆ ಎಂದು ವಕೀಲೆ ಧನಲಕ್ಷ್ಮಿ ರಾಜಕುಮಾರ ಬಳತೆ ಆರೋಪ ಮಾಡಿದರು.
ಪೊಲೀಸರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿರುವ ಬೀದರ ಜಿಲ್ಲಾ ವಕೀಲರ ಸಂಘ (ರಿ) ಬೀದರ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗೆ ಮನವಿ ಸಲ್ಲಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ