ಮೂಡಲಗಿ: ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಒದಗಿಸಿರುವ ಅಗತ್ಯ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಕಲಿಕೆಗೆ ಪೂರಕವಾಗುವ ವಾತಾವರಣ ಸೃಷ್ಟಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಿಕ್ಷಣ ಸಂಯೋಜಕ ಸತೀಶ ಬಿ.ಎಸ್ ಹೇಳಿದರು.
ಅವರು ಸಮೀಪದ ಪಟಗುಂದಿಯ ಸರಕಾರಿ ಕನ್ನಡ ಮತ್ತು ಉರ್ದು ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಸನ್ 2024-25 ನೇ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿ, ಮಕ್ಕಳ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ಸೌಲಭ್ಯಗಳನ್ನು ಸರಕಾರವು ಶಿಕ್ಷಣ ಇಲಾಖೆಗೆ ನೀಡಿದ್ದು, ಅವುಗಳನ್ನು ಸದುಪಯೋಗಪಡಿಸಿಕೋಳ್ಳಬೇಕು. ಶಾಲಾ ಪಠ್ಯಪುಸ್ತಕ, ಸಮವಸ್ತ್ರ, ಬಿಸಿಯೂಟ, ಶಿಷ್ಯ ವೇತನ ಮುಂತಾದ ಪ್ರೋತ್ಸಾಹಕ ಯೋಜನೆಗಳ ಸದ್ಬಳಕೆಯಾಗಬೇಕು. ಕ್ರೀಡಾಕೂಟ ಸಾಂಸ್ಕೃತಿಕ ಮನೋರಂಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪ್ರಸಕ್ತ ವರ್ಷ ಶೈಕ್ಷಣಿಕವಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಅಕ್ಷರ ಬಂಡಿ ನಿರ್ಮಿಸುವ ಮೂಲಕ ಪ್ರಸಕ್ತ ಸಾಲಿನಲ್ಲಿ ದಾಖಲಾಗುವ ಮಕ್ಕಳ ಮನೆಗಳಿಗೆ ತೆರಳಿ ಆರತಿಯೊಂದಿಗೆ ಶಾಲೆಗೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಗಂಗಾಧರ ಮಲ್ಹಾರಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ಯಲ್ಲಪ್ಪ ಪೂಜೇರ, ಉಪಾಧ್ಯಕ್ಷ ವಿನೋದ ಇಂಡಿ, ಸದಸ್ಯರಾದ ಸುರೇಶ ಬ್ಯಾಹಟ್ಟಿ, ಅರ್ಜುನ ಸರ್ವಿ, ಶಿವಾನಂದ ಚಿಂಚೆವಾಡಿ, ತವನಪ್ಪ ಬೋಳಿ, ಬಸವರಾಜ ಅಂಗಡಿ, ಇಸಿಒ ಆರ್.ವಿ ಯರಗಟ್ಟಿ, ಸಿಆರ್‍ಪಿ ಎಸ್.ವಾಯ್ ದ್ಯಾಗಾನಟ್ಟಿ, ಶಿವಬಸು ಗುಡ್ಲಿ, ಎಮ್.ಎನ್ ಪೆಂಡಾರಿ, ಕೆ.ಎಲ್ ಮೀಶಿ, ಎ.ಎ ಪೆಂಡಾರಿ, ಎಸ್ ಐ ನದಾಫ್, ಮಹಾಂತೇಶ ಭಜಂತ್ರಿ, ಬಾಳೇಶ ತುಬಾಕಿ, ಜಯಶ್ರೀ ಸರ್ವಿ, ಲಕ್ಷ್ಮೀ ಕೆಳಗೇರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.