spot_img
spot_img

ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರ ಮಹಿಳೆ ಮಲ್ಲಮ್ಮ

Must Read

- Advertisement -

(ಅಗಷ್ಟ-18 ಬೆಳವಡಿ ಮಲ್ಲಮ್ಮ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ)

• ಮಲ್ಲಮ್ಮ, ಬೆಳವಾಡಿ ಸಾಮ್ರಾಜ್ಯದ (ಸಂಸ್ಥಾನ) ರಾಣಿ. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಈ ಮಲ್ಲಮ್ಮ. ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ವೀರ ರಾಣಿ, ಮರಾಠರ ವಿರುದ್ಧ ಹೋರಾಡಲು ಮಹಿಳಾ ಸೇನೆಯನ್ನು ಸಂಘಟಿಸಿದ ಮೊದಲ ಮಹಿಳೆಯಾಗಿದ್ದಾರೆ, ಜಗತ್ತಿನಲ್ಲಿ ಪ್ರಥಮವಾಗಿ ಎರಡು ಸಾವಿರ ಮಹಿಳಾ ಸೈನ್ಯವನ್ನು ಕಟ್ಟಿ ಶಿವಾಜಿ ಮಹಾರಾಜರ ಧೈರ್ಯ ಪ್ರಶ್ನೆ ಮಾಡಿದ ಮತ್ತು ಶಿವಾಜಿ ಮಹಾರಾಜರಿಗೆ ಪ್ರತಿಭಟಿಸಿದ ರಾಣಿ ಬೆಳವಡಿ ಮಲ್ಲಮ್ಮ

● ಬೆಳವಡಿ ಮಲ್ಲಮ್ಮನ ಬಾಲ್ಯದ ಜೀವನ:- ಆಧುನಿಕ ಉತ್ತರ ಕನ್ನಡ ಜಿಲ್ಲೆ ಮತ್ತು ದಕ್ಷಿಣ ಗೋವಾವನ್ನು ನಿಯಂತ್ರಿಸಿದ ಸೋಧೆ ಸಾಮ್ರಾಜ್ಯದ ರಾಜ ಮಧುಲಿಂಗ ನಾಯಕನ ಮಗಳು ಈ ಮಲ್ಲಮ್ಮ, ಇವರ ಶಿಕ್ಷಣವು 5 ನೇ ವಯಸ್ಸಿನಲ್ಲಿ ಪ್ರಾರಂಭವಾಯಿತು, ಅಲ್ಲಿ ಅವಳು ತನ್ನ ತಂದೆ ಮತ್ತು ಅವಳ ಸಹೋದರ ಸದಾಶಿವ ನಾಯಕನಿಗೆ ನಿರ್ಮಿಸಿದ ಶಾಲೆಯಲ್ಲಿ ಓದಿದಳು. ಶಾಲೆಯ ಪ್ರಾಂಶುಪಾಲರು ಶಂಕರ್ ಭಟ್ ಗಮನಾರ್ಹ ವಿದ್ವಾಂಸರಾಗಿದ್ದರು ಮತ್ತು 10 ಹಿರಿಯ ಶಾಸ್ತ್ರಿಗಳು (ತತ್ವಶಾಸ್ತ್ರ ಮತ್ತು ಪ್ರಾಚೀನ ಗ್ರಂಥಗಳ ಗೌರವಾನ್ವಿತ ಶಿಕ್ಷಕರು) ಮಲ್ಲಮ್ಮನ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಮಲ್ಲಮ್ಮ ಮದುವೆಯ ವಯಸ್ಸನ್ನು ತಲುಪಿದಾಗ, ಅವಳ ತಂದೆ ಸ್ವಯಂವರವನ್ನು ಏರ್ಪಡಿಸಲು ನಿರ್ಧರಿಸಿದರು. ಮಲ್ಲಮ್ಮ ತನ್ನ ದಾಳಿಕೋರರಿಗೆ ಒಂದು ತಿಂಗಳೊಳಗೆ ಅವನ ವಯಸ್ಸು ಮತ್ತು ಒಂದಕ್ಕೆ ಸಮನಾದ ಹುಲಿಗಳ ಸಂಖ್ಯೆಯನ್ನು ಬೇಟೆಯಾಡಲು ಸವಾಲು ಹಾಕಲು ನಿರ್ಧರಿಸಿದಳು. ಬೆಳವಾಡಿಯ ರಾಜಕುಮಾರ ಈಶಪ್ರಭು ತನ್ನ 20ನೇ ವಯಸ್ಸಿನಲ್ಲಿ ಒಂದು ತಿಂಗಳಲ್ಲಿ 21 ಹುಲಿಗಳನ್ನು ಯಶಸ್ವಿಯಾಗಿ ಬೇಟೆಯಾಡಿ ಕೊಂದು ಮಲ್ಲಮ್ಮನ ಕೈಗೆ ಸಿಕ್ಕರು. ಈ ಒಕ್ಕೂಟದೊಂದಿಗೆ ಮಲ್ಲಮ್ಮ ಬೆಳವಾಡಿ ಮಲ್ಲಮ್ಮ ಎಂದು ಕರೆಯಲ್ಪಟ್ಟರು ಮತ್ತು ಈಶಪ್ರಭುವಿನ ಜೊತೆಯಲ್ಲಿ ಬೆಳವಾಡಿಯ ಆಡಳಿತ ದಂಪತಿಯಾದರು, ಇದು ತುಲನಾತ್ಮಕವಾಗಿ ಸಣ್ಣ ಸಾಮ್ರಾಜ್ಯವಾಗಿದ್ದು, ಅವರ ಪ್ರದೇಶಗಳು ಆಧುನಿಕ ದಿನದ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳ ಭಾಗಗಳನ್ನು ಒಳಗೊಂಡಿವೆ.

- Advertisement -

● ಮಲ್ಲಮ್ಮ ಮತ್ತು ಮರಾಠರ ಜೊತೆಗಿನ ಯುದ್ಧ:- ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠರ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಈಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜನನ್ನು ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು.

ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ. ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕದಲ್ಲಿ ಮಲ್ಲಮ್ಮಳನ್ನು ‘ಸಾವಿತ್ರಿ ಬಾಯಿ’ ಎಂದು ಕರೆದಿದ್ದಾರೆ. ಮಲ್ಲಮ್ಮ ಮತ್ತು ಶಿವಾಜಿಯ ನಡುವಿನ ಯುದ್ದ 27 ದಿನಗಳ ಕಾಲ ನಡೆದಿತ್ತು ಎಂದು ಬರೆದಿದ್ದಾರೆ.

ಶಿವಾಜಿ ಮಹಾರಾಜರ ಸೈನ್ಯ ನಿರಂತರ ಇಪ್ಪತ್ತೇಳು ದಿನಗಳ ಪ್ರಯತ್ನ ಮಾಡಿದರೂ ಬೆಳವಡಿ ಕೋಟೆ ಭೇದಿಸಲು ಸಾದ್ಯವಾಗಲಿಲ್ಲ. ಇಪ್ಪತ್ತೆಂಟನೆಯ ದಿನ ಕೋಟೆ ವಶವಾಯಿತು. ರಾಣಿ ಮಲ್ಲಮ್ಮನಿಗೆ ಅವಮಾನಿಸಿದ ಸುಖೋಜಿ ಗಾಯಕವಾಡನ ಕಣ್ಣುಗಳನ್ನು ಶಿವಾಜಿ ಮಹಾರಾಜರು ಕೀಳಿಸಿರುವುದಾಗಿ ಮರಾಠಿ ಇತಿಹಾಸದ ದಾಖಲೆಗಳು ಹೇಳುತ್ತವೆ. ಶಿವಾಜಿಯು ತನ್ನ ಸೈನಿಕರು ತಪ್ಪು ಮಾಡಿದ ಕಾರಣಕ್ಕೆ ಶಿವಾಜಿ ಸ್ವತಃ ರಾಣಿ ಬೆಳವಾಡಿ ಮಲ್ಲಮ್ಮ ಅವರ ಪರಾಕ್ರಮ ಮೆಚ್ಚಿ ಅವರ ಹತ್ತಿರ ಮಂಡಿ ಊರಿ ಕೃತಜ್ಞತೆ ಹೇಳುತ್ತಾರೆ, ರಾಣಿ ಬೆಳವಾಡಿ ಮಲ್ಲಮ್ಮ ಅವರ ಸಂಸ್ಥಾನ ದಲ್ಲಿ ಶಿವಾಜಿ ಅವರ ಮೂರ್ತಿ ಸ್ಥಾಪನೆ ಮಾಡ್ತಾರೆ ಅಂತೆ ಪುರಾವೆಗಳಿವೆ.

- Advertisement -

ಮರಾಠಿ ಇತಿಹಾಸಕಾರರಲ್ಲಿ ಅನೇಕ ಗೊಂದಲಗಳು ಇರುವ ಬಗ್ಗೆ ಪುಣೆ ವಿಶ್ವವಿದ್ಯಾಲಯದವರು ಸಾಬೀತು ಮಾಡಿದ್ದಾರೆ. ಅವಳು ಶತ್ರು ಪಡೆಗಳ ಜತೆ ಕುದುರೆ ಮೇಲೆ ಸೀರೆಯಲ್ಲಿ ವೀರಗಚ್ಚೆ ಹಾಕಿ ಹೋರಾಡಿದಳು, ಹಾಗೂ ಬೆಳವಡಿಯ ಮಲ್ಲಮ್ಮಳು ಬಿಲ್ಲು ಬಾಣ, ಕಾವಲಿಗಳ ಆಯುಧಗಳನ್ನು ಉಪಯೋಗಿಸಿ ಯುದ್ಧ ಮಾಡಿದಳು ಎಂದು ಉಲ್ಲೇಖಿಸಲಾಗಿದೆ. ವಿದ್ವಾಂಸರಾದ ಶೇಷೊ ಶ್ರೀನಿವಾಸ್ ಮುತಾಲಿಕ ಅವರು ಕ್ರಿ.ಶ 1704-05 ರಲ್ಲಿ ಮಧುಲಿಂಗ ನಾಯಕರ ಅರಮನೆ ಜೀವನವನ್ನು ಮರಾಠಿ ಭಾಷೆಯಲ್ಲಿ ದಾಖಲಿಸಿದ್ದಾರೆ.

● ಕೊನೆಯ ಮಾತು:- ಇತಿಹಾಸದಲ್ಲಿ ಬೆಳವಡಿ ಮಲ್ಲಮ್ಮಾ ಜೀ ಮತ್ತು ಶಿವಾಜಿ ಮಹಾರಾಜರ ಸಂಘರ್ಷದ ನಂತರ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯದ ಭಾವನಾತ್ಮಕ ಬೇಸುಗೆಯುಂಟು ಮಾಡುವ ಪ್ರೇರಣಾದಾಯಿ ಘಟನೆಯಾಯಿತು. ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿ, ಮರಾಠರೊಂದಿಗೆ ಕೆಚ್ಚೆದೆಯಿಂದ ಹೋರಾಡಿ ಯುದ್ಧದಲ್ಲಿ ಜಯಶಾಲಿಯಾಗಿ, ಶತ್ರುಗಳನ್ನು ಮಂಡಿಯುರುವಂತೆ ಮಾಡಿದ ಮಲ್ಲಮ್ಮ ಎಂಬ ಈ ವೀರ ಮಹಿಳೆಗೆ ನಮ್ಮದೊಂದು ಸಲಾಂ ಹೇಳೋಣ.

ಎನ್.ಎನ್.ಕಬ್ಬೂರ
ಶಿಕ್ಷಕರು, ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com
○○○○○○○○○○○○○

- Advertisement -
- Advertisement -

Latest News

ಕಲ್ಲು ಮಠದ ಶ್ರೀ ಪ್ರಭು ಸ್ವಾಮಿಗಳ ಲಿಂಗ ದೇವರ ಲೀಲಾ ವಿಳಾಸ ಚಾರಿತ್ರ

ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸಂಯುಕ್ತ ಆಶ್ರಯದಲ್ಲಿ ಕಲ್ಲು ಮಠದ ಶ್ರೀ...
- Advertisement -

More Articles Like This

- Advertisement -
close
error: Content is protected !!
Join WhatsApp Group