spot_img
spot_img

ನಾಗನೂರ ಪ.ಪಂ. ಅಧ್ಯಕ್ಷರಾಗಿ ಯರಗಣವಿ, ಉಪಾಧ್ಯಕ್ಷರಾಗಿ ಕಾತ್ತೇನವರ ಆಯ್ಕೆ

Must Read

- Advertisement -

ಚೀಟಿ ಎತ್ತುವುದರ ಮೂಲಕ ಆಯ್ಕೆ !

ಮೂಡಲಗಿ: ತಾಲ್ಲೂಕಿನ ನಾಗನೂರ ಪಟ್ಟಣ ಪಂಚಾಯತಿಗೆ ಸೋಮವಾರ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರ ಮಧ್ಯೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಂದ್ರವ್ವ ಮಲ್ಲಗೌಡ ಯರಗಣವಿ ಮತ್ತು ಉಪಾಧ್ಯಕ್ಷರಾಗಿ ಸುಭಾಸ ಕಲ್ಲೋಳೆಪ್ಪ ಕಾತ್ತೇನವರ ಅಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮತ್ತು ಉಪಾಧ್ಯಕ್ಷ ಸ್ಥಾನವು ಎಸ್.ಸಿ ಪುರುಷ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಚಂದ್ರವ್ವ ಮಲ್ಲಗೌಡ ಯರಗಣವಿ, ಬಸಪ್ಪ ಗೌಡಪ್ಪ ತಡಸನ್ನವರ, ಪವಾಡಿ ಸಿದಪ್ಪ ಗೋಟೂರ ನಾಮ ಪತ್ರಸಲ್ಲಿಸಿದರು ಅದರಲ್ಲಿ ಪವಾಡಿ ಸಿದ್ದಪ್ಪ ಗೋಟೂರ ಅವರು ನಾಮ ಪತ್ರ ವಾಪಸ ಪಡೆದರಿಂದ ಅಧ್ಯಕ್ಷ ಸ್ಥಾನಕ್ಕೆ ಯರಗಣವಿ ಮತ್ತು ತಡಸನ್ನವರ ಇಬ್ಬರು ಕಣದಲ್ಲಿ ಉಳಿದದ್ದರು, ಆದರೆ ಚುನಾವಣೆಯಲ್ಲಿ ಇಬ್ಬರೂ ತಲಾ ಎಂಟು ಮತಗಳನ್ನು ಪಡೆದ ಕಾರಣ ಜಟಿಲಗೊಂಡ ಚುನಾವಣೆಗೆ ಚೀಟಿ ಎತ್ತುವ ಮೂಲಕ  ಪಟ್ಟಣದ ಹಿರಿಯರಾದ ಬಸನಗೌಡ ಆರ್.ಪಾಟೀಲ ಬೆಂಬಲಿತ ಚಂದ್ರವ್ವ ಮಲ್ಲಗೌಡ ಯರಗಣವಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಸ ಕಲ್ಲೋಳೆಪ್ಪ ಕಾತ್ತೇನವರ ಒಬ್ಬರೆ ನಾಮ ಪತ್ರಸಲ್ಲಿಸಿದರಿಂದ ಅವಿರೋಧವಾಗಿ ಆಯ್ಕೆಗೊಂಡರು.

- Advertisement -

ಚುನಾವಣಾಧಿಕಾರಿ ಮೂಡಲಗಿ ಗ್ರೇಡ್-೨ ತಹಶೀಲ್ದಾರ ಶಿವಾನಂದ ಬಬಲಿ, ಸಹಾಯಕ ಚುನಾವಣಾಧಿಕಾರಿಯಾಗಿ ಬಾಲನಾಯ್ಕ ಕುಮರೇಶ ಕಾರ್ಯನಿರ್ವಹಿಸಿದರು.

ವಿಜಯೋತ್ಸವ: ನಾಗನೂರ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಚಂದ್ರವ್ವ ಮಲ್ಲಗೌಡ ಯರಗಣವಿ ಬೆಂಬಲಿಗರು ಗುಲಾಲ ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಈ ಸಮಯದಲ್ಲಿ ಪ.ಪಂ ಸದಸ್ಯರಾದ ಬಸವರಾಜ ಹಳಿಗೌಡ್ರ,ಲಕ್ಷ್ಮಣ ದಿನ್ನಿಮನಿ, ಜಯಶ್ರೀ ಮನ್ನಿಕೇರಿ, ಶಂಕರ ದಳವಾಯಿ, ಶೋಭಾ ಬಬಲಿ, ಲಕ್ಕವ್ವ ಮುತ್ತೆನ್ನವರ, ಮುಖಂಡರಾದ ಕೆಂಚಗೌಡ ಪಾಟೀಲ, ಪರಸಪ್ಪ ಬಬಲಿ, ಶಂಕರ ಹೊಸಮನಿ, ಮಲ್ಲಪ್ಪ ಹೊಸಮನಿ, ಬಸವರಾಜ ಕರಿಹೊಳಿ, ಸಿದ್ದಪ್ಪ ಯಾದಗೂಡ, ಸತ್ತೆಪ್ಪ ಕರವಾಡಿ, ಬಲವಂತ ಕರಬನ್ನವರ, ಯಮನ್ನಪ್ಪ ಕರಬನ್ನವರ, ಭೀಮಪ್ಪ ಹಳಿಗೌಡ್ರ, ಚನ್ನಗೌಡ ಪಾಟೀಲ, ಗಜಾನನ ಯರಗಣವಿ, ನಿಂಗಣ್ಣ ಯರಗಣವಿ, ಮುತ್ತಪ್ಪ ಮುತ್ತೆನ್ನವರ ಮತ್ತಿತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group