spot_img
spot_img

ವಸಂತಕುಮಾರ್ ಕೈ ಚಳಕದಲ್ಲಿ ಅರಳಿದ ಹೂವುಗಳು ರಮ್ಯ ಪ್ರಕೃತಿ ಚಿತ್ರಣ

Must Read

- Advertisement -

ರಮ್ಯ ಪ್ರಕೃತಿ ಚಿತ್ರಣಹಾಸನದ ವಸಂತಕುಮಾರ್ ಉತ್ತಮ ಚಿತ್ರ ಕಲಾವಿದರು. ಸುಮಾರು ವರ್ಷ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದವರು. ಪ್ರಸ್ತುತ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರು. ಇವರ ಏಕವ್ಯಕ್ತಿ ಪ್ರಕೃತಿ ಚಿತ್ರಕಲಾ ಪ್ರದರ್ಶನ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ದಿನ ನಡೆಯಿತು. ವಸಂತ್ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ನಡೆಸಿ ಬಹುಮಾನ ವಿತರಣಾ ಸಮಾರಂಭದಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುತಾ ಬಂದಿದ್ದಾರೆ.

ಪರಿಸರಕ್ಕೆ ಸ್ಪಂದಿಸುವುದು ಪ್ರತಿಕ್ರಿಯಿಸುವುದು ಎಲ್ಲ ಜೀವರಾಶಿಗಳ ಸಹಜ ಸ್ವಭಾವ ಪ್ರವೃತ್ತಿ. ಮನುಷ್ಯ ಕೂಡ ಇದಕ್ಕೆ ಹೊರತಾಗಿಲ್ಲ ಆದರೆ ಮನುಷ್ಯನಲ್ಲಿ ಇದೊಂದು ಶಕ್ತಿಯು ಇರುತ್ತದೆ. ಅದು ಮತ್ತೊಂದನ್ನು ನಿರ್ಮಿಸುವ ಶಕ್ತಿ. ಈ ನಿರ್ಮಾಣ ಮಾಡುವ ಶಕ್ತಿಯಿಂದಲೇ ಮನುಷ್ಯ ಸುಸಂಸ್ಕೃತ ನೆನಿಸಿಕೊಳ್ಳುತ್ತಾನೆ. ಕಲೆ, ಸಂಗೀತ, ಸಾಹಿತ್ಯ ,ವಿಜ್ಞಾನ, ತಂತ್ರಜ್ಞಾನ, ಇವೆಲ್ಲವೂ ಸಂಸ್ಕೃತಿಯ ಅಂಗ. ಮನುಷ್ಯನಿಗೆ ಮೂರ್ತ ವಸ್ತುಗಳಿಂದ ಹೇಗೆ ಪ್ರೇರಣೆ ಸಿಗುತ್ತದೆಯೋ ಹಾಗೆಯೇ ಅಮೂರ್ತ ವಿಚಾರ ಕಲ್ಪನೆಗಳಿಂದ ಪ್ರೇರಣೆ ಸಿಗುತ್ತದೆ. ಸ್ವಾತಂತ್ರ್ಯದ ಅನ್ಯ ಮಾರ್ಗಗಳ ಅನ್ವೇಷಣೆಯಲ್ಲಿ ಹೊರಡುವ ಕಲಾವಿದ ತನ್ನ ಕಲೆ. ಸಾಹಿತ್ಯ ಮುಖಾಂತರ ಅವಶ್ಯವಾದ ಅದ್ಭುತ ಸ್ವಾತಂತ್ರ ಪಡೆದುಕೊಳ್ಳುತ್ತಾನೆ. ಈ ಅನುಭವವನ್ನು ಬಣ್ಣ ,ರಾಗ ,ಅಕ್ಷರ ಮೂಲಕ ಅಭಿವ್ಯಕ್ತಪಡಿಸುತ್ತಾನೆ.

ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಎಂಬಂತೆ ಚಿತ್ರಕಲೆ ಸವಿಯ ಸವಿದವನಿಗೇ ಗೊತ್ತು. ಚಿತ್ರಕಲೆಯ ಆಳ ಆಗಲ ವಿಶಾಲ ವಿಸ್ತಾರವಾದದ್ದು. ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ವಿಮರ್ಶಕ ಕಂಡ ಎನ್ನುತ್ತಾರೆ. ರವಿ ಕೇವಲ ಭೌತಿಕ ಸ್ವರೂಪ ಗ್ರಹಿಸಿದರೆ ಕವಿ ಭಾವನೆಗಳಲ್ಲೇ ಗ್ರಹಿಸಿ ಓದುಗನ ಮನಸ್ಸಿನ ಕಣ್ಣುಗಳಲ್ಲಿ ನೋಡಲು ಪ್ರೇರೇಪಿಸುತ್ತಾನೆ. ಕಲಾವಿದ ಕೂಡ ಸಾಹಿತ್ಯ ಜೊತೆಗಿನ ಒಡನಾಡಿ. ಸಾಹಿತ್ಯ ಓದು ಕವಿಯ ರಚನೆ ನಮ್ಮ ಮನವನ್ನು ಕಲ್ಪನಾ ಸಾಗರದಲ್ಲಿ ತೇಲಿಸಿ ಅದರಲ್ಲೇ ಮುಳುಗಿಸಿದರೇ ಕಲಾವಿದ ಇದನ್ನೆ ನಮ್ಮ ಕಣ್ಮುಂದೆ ತೆರೆದಿಡುತ್ತಾನೆ. ಒಂದೇ ಚಿತ್ರದಲ್ಲಿ ಕಾವ್ಯದ ಸಾರ ಸೊಗಸು ಹಿಡಿದಿಡುವ ತಾಕತ್ತು ಕಲಾವಿದನ ಕುಂಚದ್ದು!

- Advertisement -

ಕಲೆ ಮನುಷ್ಯನ ಭಾವನಾತ್ಮಕ ಲಹರಿಯ ಕೊಡುಗೆ. ಮನುಷ್ಯ ಪ್ರಕೃತಿಯ ಅವಿನಾಭಾವ ಸಂಬಂಧವನ್ನು ಕಲೆ ಮತ್ತಷ್ಟು ದೃಢಪಡಿಸುತ್ತದೆ. ಕಲಾವಿದ ಸೌಂದರ್ಯ ಆರಾಧಕ. ಪ್ರಕೃತಿ ಸೌಂದರ್ಯಮಯ-ಕಲೆ ಆನಂದಮಯ. ಕಲಾವಿದ ತನ್ನೊಳಗಿನ ವಿಚಾರಗಳನ್ನು ತನ್ನ ಕಲಾಕೃತಿ ಮೂಲಕ ಅಭಿವ್ಯಕ್ತಿಸುತ್ತಾನೆ. ಕಲೆಯನ್ನು ಆಸ್ವಾದಿಸಬೇಕಾದವರು ನಾವಷ್ಟೇ. ಕಲಾವಿದ ವಸಂತಕುಮಾರ್ ಪ್ರಕೃತಿ ಪ್ರಿಯರು. ಮರ ಗಿಡ ಬೆಟ್ಟ ಗುಡ್ಡ ಹಳ್ಳಿ ಕೆರೆ ಕಟ್ಟೆ ಹುಡುಕಿ ಹೊರಟು ಅಲ್ಲೇ ಕುಳಿತು ಲ್ಯಾಂಡ್ ಸ್ಕೇಪ್‍ನಲ್ಲಿ ಯಥಾವತ್ ಪ್ರತಿ ತೆಗೆದವರು. ಬೆಳಗಿನ ವೇಳೆ ಜಾಗಿಂಗ್ ಮಾಡುವ ಇವರಿಗೆ ಹಾಸನ ನಗರದ ಹಾರ್ಟ್ ಸ್ಪಾಟ್ ಮಹಾರಾಜ ಪಾರ್ಕ್ ಕಂಡರೆ ಇಷ್ಟ. ವಯಸ್ಸಾದ ವಾಕಿಂಗ್ ಪ್ರಿಯರಿಗೆ ಆಕ್ಸಿಜನ್ ಕೊಡುತ್ತವಲ್ಲಾ ಆ ಮರ ಗಿಡಗಳು ಬುಡಸಮೇತ ಬೀಳುವ ಮೊದಲು ತಮ್ಮ ಲ್ಯಾಂಡ್ ಸ್ಕೇಫ್‍ನಲ್ಲಿ ಸೇಫ್ ಮಾಡಿಟ್ಟಿದ್ದು ಆ ಪೇಂಟಿಂಗ್ಸ್‍ಗಳು ಪ್ರದರ್ಶನದಲ್ಲಿದ್ವು. ಜೊತೆಗೆ ಹೊಸ ಪೇಂಟಿಂಗ್ಸ್‍ಗಳಲ್ಲಿ ಹೂವುಗಳು ಮೂಡಿದ್ದವು. ಇವು ಜಡೆಗೆ ಅಲಂಕರಿಸುವುದಿಲ್ಲ ನಿಜ. ಆದರೆ ಖರೀದಿಸಿ ಮನೆಯಲ್ಲಿ ಇಡಬಹುದು.

ತಮ್ಮ ರಚನೆ ಕುರಿತು ವಸಂತಕುಮಾರ್ ಹೇಳಿದ್ದು ಹ್ಯಾಂಡ್‍ಮೇಡ್ ಶೀಟ್‍ನಲ್ಲಿ ಹಾಸನದ ತಟ್ಟೆಕೆರೆ ರಸ್ತೆ, ಮಂಗಳೂರಿನ ಯಕ್ಷಗಾನ ನೃತ್ಯಪಟ್ಟು ಇವು ಅಕ್ರಾಲಿಕ್ ಮಾಧ್ಯಮದಲ್ಲಿ ಚಿತ್ರಿಸಿದವು. ಹಳ್ಳಿ ಚಿತ್ರಣದ ಈ ಲ್ಯಾಂಡ್‍ಸ್ಕೇಫ್ ಸಂಜೆ ವೇಳೆ ಕಸ ಗುಡಿಸುವ ಮಹಿಳೆಯ ದೃಶ್ಯ, ಶರಾವತಿ ಹಿನ್ನೀರಿನ ಲೋಕೇಶನ್ ಅಲ್ಲಿಗೆ ಹೋದಾಗ ಚಿತ್ರಿಸಿದ್ದು. ಸಿಂಗೇನಹಳ್ಳಿ ಗಡಿ ಜಮೀನಿನ ಈ ಚಿತ್ರಣ ಜಲವರ್ಣದ್ದು, ಅಕ್ರಾಲಿಕ್ ಆನ್ ಕ್ಯಾನವಾಸ್‍ನಲ್ಲಿ ಕೆಲ ಕ್ರಿಯೆಟಿವೀಟಿ ಪೇಂಟಿಂಗ್ಸ್‍ಗಳಿವೆ. ಇದು ಎಸ್ಟೇಟ್ ಲೋಕೇಶನ್ ಮುಂಜಾನೆ ದೃಶ್ಯ ಜಲ ವರ್ಣದ್ದು. ಬುಡಕಟ್ಟು ಜನಾಂಗದ ಪೈಂಟಿಂಗ್ಸ್‍ಗಳು ಇನ್ನೂ ಮಾರಾಟವಾಗದೇ ಹಾಗೆಯೇ ಉಳಿದಿವೆ. ಆಶಾವಾದದ ನಡುವೆಯೂ ನಿರಾಶೆ ಮುಖದಲ್ಲಿ ಮೂಡಿತ್ತು. ಏನೇ ಆಗಲಿ 30 ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನ.

ಗೊರೂರು ಅನಂತರಾಜು
ಮೊ: 9449462879.
ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕೋವಿಡ್ ೨೦೨೦ರಲ್ಲಿ ೧೨ ಲ. ಸಾವು ;ವರದಿ ವರದಿ ದೋಷಪೂರಿತ ; ಆರೋಗ್ಯ ಸಚಿವಾಲಯ

೨೦೧೯ ರಲ್ಲಿ ಘಟಿಸಿದ ಕೋವಿಡ್-೧೯ ರ ಸಾವಿನ ಸಂಖ್ಯೆಗಿಂತಲೂ ಸುಮಾರು ಎಂಟು ಪಟ್ಟು ಹೆಚ್ಚು ಅಂದರೆ ೧೨ ಲಕ್ಷಕ್ಕಿಂತಲೂ ಹೆಚ್ಚು ಜನ ೨೦೨೦ ರಲ್ಲಿ ಕೋವಿಡ್...
- Advertisement -

More Articles Like This

- Advertisement -
close
error: Content is protected !!
Join WhatsApp Group