spot_img
spot_img

ಸಿಂದಗಿ ಪೋಲೀಸರ ಕಾರ್ಯಾಚರಣೆ ; ಇಬ್ಬರು ಕಳ್ಳರ ಬಂಧನ

Must Read

- Advertisement -

ಸಿಂದಗಿ: ಪಟ್ಟಣದಲ್ಲಿ  ಘಟಿಸುತ್ತಿದ್ದ ಅಂಗಡಿಗಳ ಕಳ್ಳತನದ ಪ್ರಕರಣಗಳ ಹಿಂದಿರುವ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು ಅವರಿಂದ ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸದರಿ ತನಿಖಾ ತಂಡವು ಆರೋಪಿತರ ತಪಾಸಣೆಯಲ್ಲಿ ಇದ್ದಾಗ ದಿನಾಂಕ 27.03.2024 ರಂದು ಮುಂಜಾನೆ 8.30 ಗಂಟೆ ಸುಮಾರಿಗೆ ಸಿಂದಗಿ ಬೈಪಾಸ್‌ ರಸ್ತೆಯ ಮೇಲೆ ತಿರುಗಾಡುವ ವಾಹನಗಳ ತಪಾಸಣೆಯಲ್ಲಿ ತೊಡಗಿದಾಗ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಂಡಿಗೋ ಕಾರ ನಂ:ಕೆಎ-06-ಸಿ-ಒ985 ಇದನ್ನು ಮತ್ತು ಅದರ ಚಾಲಕ ಸಮೀರಪಾಶ್ಯಾ ತಂ. ರಿಯಾಜಪಾಶ್ಚಾ, ವಯಾ 34 ವರ್ಷ ಸಾ| ತುಮಕೂರ ಮತ್ತು ಅವನ ಗೆಳೆಯನಾದ ಶಫೀಉಲ್ಲೇಖಾನ ತಂ.ಅಮದುಲ್ಲಾಖಾನ್ ಉರ್ಫ ಅಮದಖಾನ್ ಬಾಬು ವಯಾ 24 ವರ್ಷ ಸಾ| ತುಮಕೂರ ಈ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ತನಿಖಾ ತಂಡದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಜಯಪುರ,  ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ, ಹಾಗೂ ಪೊಲೀಸ್ ಉಪಾಧೀಕ್ಷಕರು ಇಂಡಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ನಾನಾಗೌಡ ಆರ್. ಪೊಲೀಸ್ ಪಾಟೀಲ ಸಿ.ಪಿ.ಐ. ಸಿಂದಗಿ ವೃತ್ತ, ಭೀಮಪ್ಪ ಎಮ್. ರಬಕವಿ, ಪಿ.ಎಸ್.ಆಯ್.[ಕಾಸು] ಮತ್ತು ಅರವಿಂದ ಅಂಗಡಿ ಪಿ.ಎಸ್.ಐ.[ಅವಿ] ಸಿಂದಗಿ ರವರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ  ಎಸ್.ಎನ್. ಸಂಕದ ಎ.ಎಸ್.ಐ, ಎಸ್. ಮತ್ತು ಎಚ್‌-480 ಆರ್.ಎಲ್. ಕಟ್ಟಿಮನಿ, ಸಿಪಿ.ಸಿ 504 ಪಿ.ಕೆ.ನಾಗರಾಳ ಪಿಸಿ 1752 ಬಿ.ಜೆ. ಮುಳಸಾವಳಗಿ ಪಿಸಿ 1695 ಎಸ್.ಎಸ್. ಕೊಂಡಿ ಸಿಂದಗಿ ಪಿಎಸ್ ಇವರನ್ನು ಒಳಗೊಂಡ ಒಂದು ತನಿಖಾ ತಂಡವನ್ನು ರಚನೆ ಮಾಡಿದ್ದು, ಇಬ್ಬರೂ ಆರೋಪಿಗಳನ್ನು ಕಾರ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿದಾಗ ಸಿಂದಗಿ ನಗರದ ಅಂಬೇಡ್ಕರ ಸರ್ಕಲದಿಂದ ಆಲಮೇಲ ಕಡೆಗೆ ಹೋಗುವ ರಸ್ತೆಯ ಬಾಜು ಇರುವ ಪಿರಾದಿಯ ಬೀಳಗಿ ಇಂಜನಿಯರಿಂಗ್‌ ವರ್ಕ್ಸಶಾಪ್‌ ದಲ್ಲಿ ಇದ್ದ ರಿವೈಂಡಿಂಗ್ [ಕಾಪರ] ವಾಯರ, ಕಳುವು ಮಾಡಿಕೊಂಡು ತುಮಕೂರಿಗೆ ಹೋಗಿ ಕಳುವು ಮಾಡಿದ ಕಾಪರ ವಾಯರ ಕರಗಿಸಿ ತುಮಕೂರು ನಗರದ ಅಡವೀಶಯ್ಯ ತಂ. ಸಿದ್ದವೀರಯ್ಯ ವಕ್ಕೋಡಿ ಇವರ ಬಾಂಡೇದ ಅಂಗಡಿಯಲ್ಲಿ ಮಾರಾಟ ಮಾಡಿ ಬಂದ ಹಣ 1,26,000/- ರೂಪಾಯಿಗಳು ಬಂದಿದ್ದು ಅದರಲ್ಲಿ ಸ್ವಲ್ಪ ಹಣವನ್ನು ಖರ್ಚು ಮಾಡಿದ್ದು ಉಳಿದ 1,01,125/- ರೂ. ಗಳು ಮತ್ತು ಗುನ್ನೆಕ್ಕೆ ಬಳಸಿದ ಕಣ್ಣಿನದ ರಾಡು ಹಾಗೂ ಕಾ‌ರ್ನಂ : ಕೆಎ-06-ಸಿ-0985 ನೇದ್ದನ್ನು ಹಾಜರಪಡಿಸಿದ್ದನ್ನು ಜಪ್ತ ಮಾಡಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

- Advertisement -

ಈ ಪ್ರಕರಣ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯವನ್ನು ಜಿಲ್ಲಾ ಪೋಲೀಸ್ ಅಧೀಕ್ಷಕರು, ವಿಜಯಪುರರವರು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆ .

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group