ಸಿಂದಗಿ; ನಾವು ಹುಟ್ಟಿದ ನಾಡು ಹೆತ್ತ ತಾಯಿಗೆ ಸಮ ನಮ್ಮ ನಾಡು ನಮ್ಮ ನುಡಿ ನಮ್ಮ ಭಾಷೆಯನ್ನು ಎಂದೆಂದಿಗೂ ಮರೆಯಬಾರದು ಎಂದು ವಿಜ್ಞಾನ ಶಿಕ್ಷಕ ಎಂ. ಗಂಗಪ್ಪ ಕಳಕಳಿ ವ್ಯಕ್ತಪಡಿಸಿದರು.
ತಾಲೂಕಿನ ಮೋರಟಗಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡ ೭೦ ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿರುವ ಇನ್ನುಳಿದ ಭಾಷೆಗಳನ್ನು ಗೌರವಿಸಿ, ಆದರೆ ಕನ್ನಡ ಭಾಷೆಯನ್ನು ಪ್ರೀತಿಸಿ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿ ಇತರ ಭಾಷೆ ಬಳಸುವುದು ಹೆಚ್ಚುತ್ತಿದೆ ನಮ್ಮ ರಾಜ್ಯ ನಮ್ಮ ಹೆಮ್ಮೆ ಎನ್ನುವಂತೆ ಕನ್ನಡಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ರಾಷ್ಟ್ರ ದ್ವಜ ಹಾಗೂ ನಾಡ ದ್ವಜಕ್ಕೆ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿದ್ದನಗೌಡ ಪಾಟೀಲ ದ್ವಜಾರೋಹಣ ನೆರವೇರಿಸಿ ಗೌರವ ಸಮರ್ಪಿಸಿದರು.
ಪಿಯುಸಿ ಹಾಗೂ ಪದವೀಧರ ವಿದ್ಯಾರ್ಥಿಗಳಿಂದ ದೇಶಭಕ್ತಿ ಹಾಗೂ ನಾಡ ಭಕ್ತಿ ಗೀತೆ ನೃತ್ಯಗಳು ಮನರಂಜಿಸಿದವು.
ಸಮಾರಂಭದಲ್ಲಿ ಸಂಸ್ಥೆಯ ಚೇರಮನ್ ಬಿ. ಐ. ಮಸಳಿ, ಕಾರ್ಯದರ್ಶಿ ಎಂ. ಎಸ್. ಪಾಟೀಲ್, ಪದವಿ ಕಾಲೇಜಿನ ಪ್ರಾಚಾರ್ಯ ವ್ಹಿ. ಸಿ. ಗೋಲಾ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ. ಏನ್. ಲಮಾಣಿ, ಪ್ರೌಢ ಶಾಲಾ ಮುಕ್ಯೋಪಾಧ್ಯಾಯ ಬಿ. ಆರ್. ಬಿರಾದಾರ್, ಪ್ರಾರ್ಥಮಿಕ ಶಾಲೆ ಮುಖ್ಯೋಪಾಧ್ಯಾಯಕಿ ಆರ್. ವಾಯ್. ಚೌಗಲೇ, ಎಸ್. ಜಿ. ಬಿರಾದಾರ, ಸೇರಿದಂತೆ ಸರ್ವ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಉಪಸ್ಥಿತರಿದ್ದರು.