Homeಸುದ್ದಿಗಳುಉತ್ತಮ ಪರಿಸರಕ್ಕಾಗಿ ಗಿಡ ಬೆಳೆಸಿ - ಈರಣ್ಣ ಕಡಾಡಿ

ಉತ್ತಮ ಪರಿಸರಕ್ಕಾಗಿ ಗಿಡ ಬೆಳೆಸಿ – ಈರಣ್ಣ ಕಡಾಡಿ

ಮೂಡಲಗಿ: ಉತ್ತಮ ವಾತಾವರಣ ನಿರ್ಮಾಣ ಆಗಬೇಕಾದರೆ ಮರಗಳ ಬೆಳೆಸುವದು ಗಿಡಗಳನ್ನು ಸಂರಕ್ಷಿಸುವದು ಅವಶ್ಯವಾಗಿದೆ, ತಂತ್ರಜ್ಞಾನ ಬೆಳೆದಷ್ಟು ನಾವು ಪರಿಸರ ಕಡೆ ಗಮನ ನೀಡುವದನ್ನು ಬಿಟ್ಟಿದ್ದೆವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪರಿಸರ ಕಾಳಜಿ ಕುರಿತು ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಪಶು ಪಾಲನಾ ಇಲಾಖೆಯ ಆವರಣದಲ್ಲಿ ಯುವ ಜೀವನ ಸೇವಾ ಸಂಸ್ಥೆಯ, ಅರಣ್ಯ ಇಲಾಖೆ ಗೋಕಾಕ ಹಾಗೂ ಪುರಸಭೆ ಸಹಯೋಗದಲ್ಲಿ ಭಾನುವಾರದಂದು ಜರುಗಿದ, ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮೂಡಲಗಿ ಪಟ್ಟಣದ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಪರಿಸರ ಪ್ರೇಮಿ ಈರಣ್ಣ ಢವಳೇಶ್ವರ ಸಸಿ ನೆಡುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡುವಂತ ಕಾಯಕ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಅರಣ್ಯ ಇಲಾಖೆಯ ಅಧಿಕಾರಿ ಮಂಹಾತೇಶ ಹಿಪ್ಪರಗಿ ಮಾತನಾಡಿ, ಮರಗಳನ್ನು ಬೆಳೆಸಿದ ರೈತರಿಗೆ ಪ್ರತಿ ವರ್ಷ ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತದೆ ಗಾಳಿ,ಜಲ, ಭೂಮಿ ಇವುಗಳ ರಕ್ಷಣೆ ಮರಗಳಿಂದ ಮಾತ್ರ ಸಾಧ್ಯ ಎಂದರು.

ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಮಾತನಾಡಿ, ನಾವು ಕಾಡನ್ನು ಉಳಿಸಿ ಬೆಳೆಸಿದರೆ, ಕಾಡು ನಮ್ಮನ್ನು ಉಳಿಸಿ ಬೆಳೆಸುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪಶು ಆಸ್ಪತ್ರೆಯ ಆವರಣದಲ್ಲಿ 100 ಸಸಿ ನೆಟ್ಟು ಬೆಳೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಾಲಿ ಕ್ಲಿನಿಕ್ ಸಹಾಯಕ ನಿರ್ಧೇಶಕ ಡಾ ಎಮ್ ಬಿ ವಿಭೂತಿ, ಪಶು ಪಾಲನಾ ಸಹಾಯಕ ನಿರ್ಧೇಶಕ ಡಾ. ಮೋಹನ ಕಮತ, ಮುಂಖಡರಾದ ಪ್ರಕಾಶ ಮಾದರ, ನಿಂಗಪ್ಪ ಪಿರೋಜಿ, ಶಿವಬಸು ಹಂದಿಗುಂದ, ಮಲ್ಲಪ್ಪ ಮದಗುಣಕಿ, ಡಾ.ಬಿ ಎಮ್ ಪಾಲಭಾಂವಿ, ಬಸವರಾಜ ಪಾಟೀಲ್, ಈಶ್ವರ ಮುರಗೋಡ, ಶ್ರೀಶೈಲ ಕೌಜಲಗಿ, ಬಸವರಾಜ ಗಾಡವಿ, ಬಸಗೌಡ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES

Most Popular

error: Content is protected !!
Join WhatsApp Group