ಕವನ : ದೇವ ಮಾನವ ಬಾಬಾ ಸಾಹೇಬ 

0
117

ದೇವ ಮಾನವ ಬಾಬಾ ಸಾಹೇಬ 

ಆ ದೇವರನ್ನು
ಕಂಡಿಲ್ಲ ನಾವು
ದೇವರನ್ನು ನಿಮ್ಮಲ್ಲಿಯೇ
ಕಂಡು ಕೊಂಡೆವು ನಾವು
ಅಕ್ಷರಶಃ ದೈವೀ ಗುಣಗಳನ್ನು
ಮೈಗೂಡಿಸಿಕೊಂಡ ನಿಜವಾದ
ದೇವರು ನೀವು
ದೇವತಾ ಮನುಷ್ಯರು ನೀವು
ಮನುಜರೆಲ್ಲ ಒಂದೇ
ನಮ್ಮಲ್ಲಿ ಹರಿವ ರಕ್ತ ಒಂದೇ
ಈ ಭೂಮಿಯ ಬೆಳಕು,
ಹರಿಯುವ ನೀರು ಒಂದೇ
ಎಂದು ಸಮಾನತೆಯ ಮಾನವೀಯತೆಯ ತತ್ವಗಳನು
ಎಲ್ಲರಿಗೂ ತಿಳಿಸಿದ ದೇವರು ನೀವು.
ಹಿಂದುಳಿದ ಸಮಾಜಕ್ಕಷ್ಟೇ
ಅಲ್ಲದೇ ಮಹಿಳೆಯರ ಮತ್ತು                                      ಇಡೀ ರಾಷ್ಟ್ರದ ಒಳಿತು ಮತ್ತು ಉಳಿವಿಗಾಗಿ ರಚಿಸಿದಿರಿ ಸಂವಿಧಾನವ.                                                    ನೀವಾದಿರಿ ಈ ನವಭಾರತ ನಿರ್ಮಾಣದ ಬಾಬಾ ಸಾಹೇಬ ಅಂಬೇಡ್ಕರ.                                                           ನಿಮಗೆ ಸಹಸ್ರ ಸಹಸ್ರ(ಕೋಟಿ ) ನಮಸ್ಕಾರ

ಡಾ ಜಯಾನಂದ ಧನವಂತ ( ಚಿತ್ರ ಕೃಪೆ : ಮೂಡಲಗಿಯ ಕಲಾವಿದ ಸುಭಾಸ ಕುರಣೆ)

 

 

LEAVE A REPLY

Please enter your comment!
Please enter your name here