ಕವನ : ಶುಭ್ರ ಬೆಳಕು

Must Read

ಶುಭ್ರ ಬೆಳಕು

ಎನಿತು ಮನದ ಭಾವ ವಿಷಾದಿಸಿತು
ಆರೋಪ ಮಿಥ್ಯಾರೋಪದಲಿ
ಕಂಗೆಟ್ಟಿತು
ಇದಿರ ಹಳಿಯಲು ಬೇಡ
ತನ್ನ ಬಣ್ಣಿಸಲು ಬೇಡ
ಬಸವ ವಾಕ್ಯ ಮರೆತು
ಸಾಗಿತು
ಮನದ ಇರುಳು ಬೇಗೆ ಸವೆಸಿ
ಬೆಳಗು ಹರಿದಿದೆ
ವಿಶಾಲ ಮನಕೆ
ರವಿ ಉದಯದಿ
ಹೊಳೆಯುತ್ತಿದೆ ಜಗ
ಕಾಯದಲಿ ಕಾಯಕ ಹೊತ್ತು
ಮೂಡಿ ನಿಂತಿದೆ
ಉದಯರಾಗಕೆ
ನಿತ್ಯ ಹೊಸ ಉಲ್ಲಾಸದಿ
ಕಳೆ ಕಟ್ಟಿದೆ ನಿನ್ನಲ್ಲಿ
ಶುಭ್ರ ವಸ್ತ್ರ ಧಾರೆಯ ಮನಕೆ
ಕಸ ಕಡ್ಡಿ ಆಚೆ ಹಾಕು
ಎದೆಯ ಬಾಂದಳದಲಿ
ಶುಭ್ರ ಬೆಳಕು ಹರಿಸು
ಪಾಚಿಗಟ್ಟಿದೆ ತನುವಿನಲಿ
ಕಿಲುಬು ಗಟ್ಟಲು ಬೇಡ
ಹೊತ್ತಿ ಉರಿಸು
ದಿವ್ಯ ದೀಪ್ತಿ
ಅರಿವು ಇರಲಿ ಮುಗಿಲ ಧರೆಗೆ
ನಡೆವ ಪಾದಕೆ ಗಟ್ಟಿ ಮನಸ್ಸು
ಕೂಗಲಿ ಮತ್ತೆ ಹೊಸ ಕನಸಿಗೆ
ಹಾಡಿ ನಲಿಯೋಣ ಬನ್ನಿ
ಮನುಜ ಮತ ವಿಶ್ವಪಥಕೆ
ಹೊಸ ಹೆಜ್ಜೆ ಸವೆಸಿ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group