ರಕ್ಷಾಬಂಧನ
- Advertisement -
ಬಂಧನದಿಂದುಸಿದಾನಂದ ಜನ್ಮ ಜನ್ಮಾಂತರಗಳಿಂದ
ಅನವರತ ಮಧುರ ಸಂಬಂಧ
ಈ ಋಣಾನುಬಂಧll
ಗುರು ಬಂಧು ಬಳಗವೆಲ್ಲ
ಸತಿ ಸುತ ಸ್ನೇಹಿತರೆಲ್ಲ
ಜೀವನ ಯಾತ್ರೆಯಲಿ ಸಂದಿಸುವರೆಲ್ಲ
ಬಂಧನ ಮಂದಿರ ಕಟ್ಟುವರೆಲ್ಲll
ಹೊಸೆಯುವ ನೂಲಿನೆಳೆಯಲ್ಲ
ಬೆಸೆಯುವ ಲೋಹಗಳಲ್ಲ
ಹೃದಯಗಳ ಮಿಡಿತವೆಲ್ಲ
ಬಂಧನ ದೇವರ ಅನುಗ್ರಹವೆಲ್ಲ ll
- Advertisement -
ಬಂದು ಹೋಗುವ ಸಂಭ್ರಮವಲ್ಲ
ಅಗೋಚರ ಭಾವ ಬಂಧನವೆಲ್ಲ
ಅಗಣಿತ ಪ್ರೇಮ ಸಾಕ್ಷಾತ್ಕಾರವೆಲ್ಲ
ಈ ರಕ್ಷಾಬಂಧನ ಅನುಪಮವೆಲ್ಲll
ಶಿವಪ್ಪ ವ ಕಾಕೋಳ ಶಿಕ್ಷಕರು, ನೆಲೋಗಲ್ಲ
(ಎಸ್ವಿಕೆ ಸೂರಣಗಿ) 8970668017