ಹೊಟ್ಟೆ ಪಾಡು
ಹೊಟ್ಟೆಯ ಹಸಿವನು | ಶಮನವ ಮಾಡಲು
ಚಿಂದಿಯ ಆಯುವ | ಕೆಲಸವ ಹಿಡಿದೆ
ನಿನ್ನನು ನೋಡಿ | ಕಲಿಯಲೆ ಬೇಕು
ಸ್ವಾಭಿಮಾನದಿ | ಬದುಕಲು ಸಾಕು
ಬಾಗಿದ ಬೆನ್ನಿನ | ಮೇಲಿದೆ ಹೊರೆಯು
ಬಾಳ ಬಂಡೆಯಾ | ಬವಣೆಯ ಭಾರವು
ಜೀವನ ಸಾಗಿಸೆ | ದೇಹಕೆ ಶಕ್ತಿಯ
ತುಂಬಲು ಬೇಕಿದೆ | ತುತ್ತು ಅನ್ನವು
ನೆರೆತ ಕೂದಲು | ಸೊರಗಿದ ದೇಹ
ಆದರೂ ದುಡಿದೇ | ತಿನ್ನುವ ಹಂಬಲ
ಮಿಥ್ಯದಿ ಗಳಿಸಲು | ಇಲ್ಲ ವ್ಯಾಮೋಹ
ಮೆಚ್ಚಿದೆ ತಾಯಿ | ನಿನ್ನ ಮನೋಬಲ
ಹೆಜ್ಜೆ ಹೆಜ್ಜೆಗೂ | ಮಿಥ್ಯವ ನುಡಿದು
ಗಳಿಸುವರಲ್ಲ | ಪರರನು ಹೊಡೆದು
ಭಿಕ್ಷೆಯ ಬೇಡದ | ಧ್ಯೇಯ ನಿನ್ನದು
ನಿನಗೆ ನಮಿಸುವಾ | ಬಯಕೆ ನನ್ನದು
ದುಡಿಯದೇ ತಿನ್ನುವ | ಜನರಿಗೆ ಮಾದರಿ
ಕಾಯಕ ನಂಬಿಹ | ಯೋಗಿಯು ನೀನು
ಚಿಂದಿಯಾರಿಸುವ | ಕೆಲಸವೆ ಆದರು
ಸಾರುತಲಿರುವೆ | ದುಡಿಮೆ ಘನತೆಯ
ಶ್ರೀಮತಿ ಜ್ಯೋತಿ ಕೋಟಗಿ
ಶಿಕ್ಷಕಿ ಸ ಮಾ ಪ್ರಾ ಶಾಲೆ ತಲ್ಲೂರ