spot_img
spot_img

ಎಲ್ಲ ರೀತಿಯ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ ಸುನೀಲಗೌಡ ಪಾಟೀಲ

Must Read

spot_img
- Advertisement -

ಸಿಂದಗಿ: ಗ್ರಾಪಂ ಸದಸ್ಯರಿಗೆ ರೂ. 3 ಸಾವಿರ ಗೌರವ ಧನ ಸಿಗುವವರೆಗೂ ನಾನು ನಿರಂತರ ಪ್ರಯತ್ನ ಮಾಡುತ್ತೇನೆ. ಪೆಟ್ರೋಲ್ ಬೆಲೆ ಗಗನಕ್ಕೆ ಏರಿದೆ ಆ ಹಿನ್ನೆಲೆಯಲ್ಲಿ ಸದಸ್ಯರಿಗೆ ಉಚಿತ ಬಸ್ ಪಾಸ ವ್ಯವಸ್ಥೆ ಮಾಡುವಲ್ಲಿ ಅನೇಕ ಬಾರಿ ಸದನದಲ್ಲಿ ಚರ್ಚಿಸಿದ್ದೇನೆ. ಮುಂಬರುವ ದಿನಗಳಲ್ಲಿ ಗ್ರಾಪಂ ಚುನಾವಣೆಗೆ ಹಲವಾರು ಸೌಲಭ್ಯಗಳನ್ನು ರೂಪಿಸಲು ಪ್ರಯತ್ನಿಸುತ್ತೇನೆ ನನಗೆ ಬೆಂಬಲಿಸಿ ಎಂದು ವಿಧಾನ ಪರಿಷತ್ ಬಾಗಲಕೋಟ- ವಿಜಯಪುರ ದ್ವಿಸದಸ್ಯ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮನವಿ ಮಾಡಿದರು.

ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಸಿಂದಗಿ, ಆಲಮೇಲ ತಾಲೂಕಿನ ವ್ಯಾಪ್ತಿಯ ಚುನಾಯಿತ ಪ್ರತಿನಿಧಿಗಳ ಸಭೆ ಹಾಗೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದರು. ಜನಪ್ರತಿನಿಧಿಗಳಿಗೆ ಸಿಗುವಂಥ ಎಲ್ಲ ರೀತಿಯ ಸೌಲಭ್ಯಗಳನ್ನು ಗ್ರಾಪಂ ಸದಸ್ಯರಿಗೂ ಸಿಗುವಂತೆ ನಾನು ಅನೇಕ ಬಾರಿ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಕೋವಿಡ್ ಹಿನ್ನಲೆಯಲ್ಲಿ ನನ್ನ ಪ್ರದೇಶಾಭಿವೃದ್ದಿಯ ನಿಧಿಯನ್ನು ಸ್ಥಳೀಯವಾಗಿಯೇ ಬಳಕೆ ಮಾಡಿ ಕೋವಿಡ್ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಂಡಿದ್ದೇನೆ. ನಾನು ಕಳೆದ ಬಾರಿ ಸದನದಲ್ಲಿ ಗ್ರಾಪಂ ಸದಸ್ಯರಿಗೆ ರೂ 3 ಸಾವಿರ ಗೌರವಧನ ನೀಡಬೇಕು ಎಂದು ಧ್ವನಿ ಎತ್ತಿದಾಗ ರಾಜ್ಯದ 93 ಸಾವಿರ ಗ್ರಾಪಂ ಸದಸ್ಯ ಪೈಕಿ ಅನೇಕರು ನನಗೆ ಕರೆ ಮಾಡಿ ಅಭಿನಂಧಿಸಿದ್ದಾರೆ ಇದು ನನಗೆ ಖುಷಿ ನೀಡಿದೆ. ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಅಷ್ಟೊಂದು ಸರಿಯಾಗಿಲ್ಲ ಇನ್ನು ಬಹುತೇಕ ಹಳ್ಳಿಗಳಲ್ಲಿ ಮಹಿಳೆಯರು ಶೌಚಕ್ಕೆ ಹೊರಗಡೆ ಹೋಗುತ್ತಿರುವುದು ನಾಚಿಕೆಗೇಡು ಅದನ್ನು ತಪ್ಪಿಸಲು ನಾನು ಪ್ರಾಮಾಣೀಕ ಪ್ರಯತ್ನ ಮಾಡುತ್ತೇನೆ. ಮುಂಬರು ದಿನಗಳಲ್ಲಿ ಸದಸ್ಯರ ಗೌರವಧನವನ್ನುಆನ್ ಲೈನ್ ಮುಖೇನ ಅವರ ಖಾತೆಗೆ ಜಮೆ ಮಾಡುವ ಯೋಜನೆಯ ರೂಪ ಹೊತ್ತು ನಿಂತಿದ್ದೇನೆ. ಈ ಬಾರಿ ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ಗ್ರಾಮ ಪಂಚಾಯತಿಯಲ್ಲಿಅಧಿಕಾರ ವಿಕೇಂದ್ರೀಕರಣ ಮತ್ತು ಪಂಚಾಯತ ವ್ಯವಸ್ಥೆಯನ್ನುಅಭಿವೃದ್ದಿ ಮಾಡಿದ್ದು ಮಾಜಿ ಪ್ರಧಾನಿ ದಿ.ರಾಜೀವಗಾಂಧಿ ಸರ್ಕಾರ ಮಹಾತ್ಮ ಗಾಂಧಿ ಅವರ ಕನಸನ್ನು ನನಸು ಮಾಡಲು ಕಾಂಗ್ರೆಸ್ ಗೇ ಮಾತ್ರ ಸಾಧ್ಯ. ಎನ್‍ಆರ್‍ಇಜಿ ಯೋಜನೆಯನ್ನು ಜಾರಿ ಮಾಡುವ ಮೂಲಕ ಕಾಂಗ್ರೆಸ್‍ ದೇಶದ ಪಂಚಾಯತ ಕ್ಷೇತ್ರದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರದಲ್ಲಿ 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ಮಂಜೂರು ಮಾಡಿ ಬಡವರಿಗೆ ಆಶ್ರಯವನ್ನು ನೀಡಿದ್ದೆವು ಆದರೆ ಪ್ರಸ್ತುತ ರಾಜ್ಯ ಸರ್ಕಾರ ಬಡವರ ಯೋಜನೆಯನ್ನು ಕಿತ್ತುಕೊಂಡು ಇಲ್ಲಿಯವರೆಗೂ ಯಾವ ಮನೆಗಳನ್ನು ಮಂಜೂರು ಮಾಡದೆ ಬಡಜನತೆಗೆ ಅನ್ಯಾಯ ಮಾಡುತ್ತಿದೆ. ಗ್ರಾಪಂ ಮಟ್ಟದಲ್ಲಿ ಅತ್ಯಂತ ಜಟಿಲ ಸಮಸ್ಯೆಗಳಿಗೆ ಅವುಗಳಿಗೆ ಹೊಸ ಭಾಷ್ಯ ಬರೆಯಲೇಬೇಕು ಇಲ್ಲವಾದಲ್ಲಿ ಹಳ್ಳಿಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತವೆ. ಸುನೀಲಗೌಡ ಪಾಟೀಲ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದಾಗ ನಾನು 2 ಜಿಲ್ಲೆಗಳ ಗ್ರಾಪಂ ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಸ್ಯೆಗಳಿಗೆ ನೀವು ಧ್ವನಿಯಾಗಬೇಕು ಎಂದು ಮಾರ್ಗದರ್ಶನ ಮಾಡಿದ್ದೆ ಅದರಂತೆ ಅವರು ಎಲ್ಲ ಗ್ರಾಪಂಗಳಿಗೆ ಭೇಟಿ ನೀಡಿ ಸ್ಯಾನಿಟೈಸರ್ ಯಂತ್ರಗಳನ್ನು ವಿತರಣೆ ಮಾಡಿ ಮಾದರಿಯಾಗಿದ್ದಾರೆ. ಮುಂಬರುವ ಡಿ.10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಬೇಕು ನಿಮ್ಮ ಜೊತೆ ಸದಾ ನಾವಿರುತ್ತೇವೆ ಎಂದು ಭರವಸೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಹಿಕ್ಕಣಗುತ್ತಿ ಗ್ರಾಪಂ ಸದಸ್ಯ ನಿಂಗಣ್ಣ ಬಿರಾದಾರ ಮಾತನಾಡಿ, ಕಟ್ಟಾ ಕಾಂಗ್ರೆಸ್ ನಾಯಕರು ನಿಷ್ಠಾವಂತಿಕೆಯಿಂದ ಈ ಚುನಾವಣೆಯನ್ನು ಎದುರಿಸಿ ನಾವು ನಿಷ್ಠಾವಂತಿಕೆಯಿಂದ ಎದುರಿಸುತ್ತೇವೆ ಕಳೆದ ಸಿಂದಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾಂಗ್ರೆಸ್ ನಾಯಕರೆ ಕಾರಣ ನಿಷ್ಠಾವಂತಿಕೆ ಮೊದಲು ನಿಮ್ಮಲ್ಲಿ ಬರಬೇಕು ಎಂದು ಪಕ್ಷದಲ್ಲಿ ಇದ್ದು ವಿರೋಧಿಸಿದ್ದ ಕೆಲವು ಕೈ ನಾಯಕರಿಗೆ ಚಾಟಿ ಬೀಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಮಲ್ಲಣ್ಣ ಸಾಲಿ, ಮಾಜಿ ಶಾಸಕ ಅಶೋಕ ಶಾಬಾದಿ, ಶರಣಪ್ಪ ಸುಣಗಾರ, ವಾಯ್.ಸಿ.ಮಯೂರ, ವಿಠ್ಠಲ ಕೊಳೂರ ಸೇರಿದಂತೆ ಇತರರು ಮಾತನಾಡಿ, ಕಳೆದ ಬಾರಿಗಿಂತಲು ಸಿಂದಗಿ ತಾಲೂಕಿನಿಂದ ಹೆಚ್ಚು ಮತ ಬರುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇವೆ ಎಂದರು.

ತಾಲೂಕಿನ ವಿವಿಧ ಗ್ರಾಪಂ ಸದಸ್ಯರು ತಮ್ಮ ಪಂಚಾಯತ ವ್ಯಾಪ್ತಿಯ ಅನೇಕ ಸಮಸ್ಯೆಗಳನ್ನು ವ್ಯಕ್ತ ಪಡಿಸಿದರು. ವೇದಿಕೆ ಮೇಲೆ ಕಾಂಗ್ರೆಸ್ ನಾಯಕರಾದ ಗುರನಗೌಡ ಪಾಟೀಲ ನಾಗಾವಿ, ರಫೀಕ ಕಾಣೆ, ರದ್ದೇವಾಡಗಿ, ಎಸ್.ಎಮ್.ಪಾಟೀಲ ಗಣಿಹಾರ, ಪುರಸಭೆಯ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಸಂತೋಷ ಹರನಾಳ, ಅಯುಬ ದೇವರಮನಿ, ಪರುಶುರಾಮ ಕಾಂಬಳೆ, ಚಂದ್ರಕಾಂತ ಸಿಂಗೆ ಸೇರಿದಂತೆ ಇತರರು ಇದ್ದರು.

- Advertisement -

ಕಾಂತು ಒಡೆಯರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಪಂ ಸದಸ್ಯರು ಹಾಗೂ ಸ್ಥಳಿಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group