ರಕ್ಷಾ ಬಂಧನ
- Advertisement -
ಪ್ರೀತಿ ತುಂಬಿದ ಬದುಕು ಜೀವನ ಸಾಗಿಸುವ ಗುರಿ… ಅಣ್ಣ ನನಗೆ ಬೇಕು…
ಸುಖ ಶಾಂತಿ ನೆಮ್ಮದಿ ಶಾಂತಿ ತಂದಿದೆ.
ಕಷ್ಟದಲ್ಲಿ ಜೀವನ ಸಾಗಿಸುವ ಗುರಿ ಕಲಿಸಿದೆ
ಧೈರ್ಯ, ಮಮತೆ, ಪ್ರೀತಿ ತುಂಬಿದ ವಾತ್ಸಲ್ಯ ಭಾವನೆ ಮೂಡುತ್ತದೆ.
- Advertisement -
ನನ್ನ ದನಿ ಇನಿ ಪ್ರೀತಿ ನಮ್ಮ ಅಣ್ಣಂದಿರು
ಸದಾ ನನ್ನ ಉಸಿರು ಕೊಟ್ಟ ರಕ್ತ ಸಂಬಂಧ ಎಂದಿಗೂ ನಾ ಮರೆಯಲಾರೆ…
ತಂಗಿಯ ಉಸಿರು ಅಣ್ಣಂದಿರ ಆಸೆ
ಪ್ರೀತಿ ಪ್ರೇಮ ಸಹನೆ ಅಕ್ಕರೆ ಹೆಚ್ಚಿಸಿದೆ.
ನಂಬಿಕೆ ಜೀವನ ಆಧಾರ ನನ್ನ ಅಣ್ಣಂದಿರು ಆಸ್ತಿ…
ಎನ್ನ ಜೀವನ ಪೂರ್ತಿ ಇರುತ್ತದೆ
ನಿನ್ನ ಎದೆಯಾಳದಲ್ಲಿ ಪ್ರೀತಿ ತುಂಬಿದ ಬದುಕು ಜೀವನ ಸಾರ್ಥಕ…
- Advertisement -
ಅಣ್ಣ ನೀ ಸ್ಪೂರ್ತಿ ಐಸಿರಿ ಬದುಕಿಡೀ ಪಸರಿಸುವ ಕಾರ್ಯ ನೀ ಹಾಕಿದ ಹೆಜ್ಜೆಗಳು ನಿಜವಾಗಲೂ ನಿನ್ನ ಮನಸಿನ ಕರುಳಿನ ಕರೆ
ರಕ್ತ ಸಂಬಂಧ ಮಿಡಿಯುತಿದೆ….
ನಿಮ್ಮ ಪ್ರೋತ್ಸಾಹವೂ ನನಗೆ ಶೀ ರಕ್ಷೆ
ಗೂಡಲ್ಲಿ ಅಡಗಿಕೊಳ್ಳಲು ನನ್ನ ದನಿ ಇನಿ ಸದಾ ಪ್ರೀತಿ ಹಂಚುವ ನನ್ನ ತವರು.
ಸಿ. ರಶ್ಮಿ ಸತ್ಯ, ಹಿಂದುಪುರ್ (ಆಂಧ್ರಪ್ರದೇಶ) ವರದಿಗಾರರು