spot_img
spot_img

ಸವದತ್ತಿ ತಾ. ಕ. ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳು

Must Read

spot_img
- Advertisement -

ಸವದತ್ತಿ– ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್. ಆರ್ ಪೆಟ್ಲೂರ್ ರಾಜೀನಾಮೆ ಯಿಂದ ತೆರವಾಗಿದ್ದ ಕಾರಣ ಜೂ. 17 ರಂದು ಜರುಗಿದ ಸಭೆಯಲ್ಲಿ  ಸಂಘದ ನೂತನ ಸದಸ್ಯರ ಆಯ್ಕೆ ಮಾಡಲಾಯಿತು.

ಸರ್ವ ಸದಸ್ಯರು ಹಾಗೂ ಜಿಲ್ಲಾ ಉಪಾಧ್ಯಕ್ಷರಾದ  ಮಲ್ಲಿಕಾರ್ಜುನ ಸಿದ್ದನಗೌಡ್ರ, ಹಿರಿಯರಾದ  ಟಿ.ಬಿ ಏಗನಗೌಡ್ರ, ಪ್ರಕಾಶ ಹೆಮ್ಮರಡಿ,  ಪ್ರಶಾಂತ ಹಂಪಣ್ಣವರ, ಆರ್ ಎಂ ಕುಡಚಿ ಇವರುಗಳು ಉಪಸ್ಥಿತರಿದ್ದರು.

ಈ ಕೆಳಗಿನಂತೆ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

- Advertisement -

ಅಧ್ಯಕ್ಷರಾಗಿ ಗಂಗಾಧರ ಕುರಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ ಕೋಳಿ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಹೊಂಗಲ ಹಾಗೂ ಶ್ರೀಮತಿ ಎ ಎಸ್ ಮದನಬಾವಿ, ಖಜಾಂಚಿಗಳಾಗಿ  ಈರಣ್ಣ ಕಿತ್ತೂರ, ಸಹಕಾರ್ಯದರ್ಶಿಗಳಾಗಿ ಎಸ್ ಎಸ್ ಪಾಶ್ಚಾಪುರ ಹಾಗೂ ಶ್ರೀಮತಿ ಪಿ ಎ ಹಲಕಿ, ಸಂಘಟನಾ ಕಾರ್ಯದರ್ಶಿಗಳಾಗಿ  ಮಲ್ಲಪ್ಪ ಯರಝರ್ವಿ ಹಾಗೂ ಶ್ರೀಮತಿ ಎಂ ಬಿ ಮೂಲಿಮನಿ. 

ಈ ಎಲ್ಲ ಸದಸ್ಯರನ್ನೂ ನೂತನವಾಗಿ ಆಯ್ಕೆ ಮಾಡಲಾಗಿದೆ. ಈ ಪದಾಧಿಕಾರಿಗಳನ್ನು ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕರಾದ ವಿಶ್ವಾಸ ವಸಂತ ವೈದ್ಯ ಅವರು ಅಭಿನಂದಿಸಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ ಎಂದು ಸಲಹಾತ್ಮಕ ನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ಎಮ್ಎಚ್ ಪೂಜೇರ, ಆರ್ ಎಸ್ ಹೆಬಸೂರ, ಟಿ ಆರ್ ಏಗನಗೌಡರ, ಎಫ್ ಜಿ ನವಲಗುಂದ, ರಾಮಣ್ಣ ಗುಡಗಾರ, ಬಿ ಎಫ್ ನಾಯ್ಕರ, ಜಗದೀಶ ಗೊರಾಬಾಳ, ಡಿ ಎ ಮೇಟಿ, ಮಂಜುನಾಥ ನರೇಂದ್ರ ಹಾಗೂ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group