ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯಕ್ಕೆ ದಿನಾಂಕ 10 ರಂದು ಬೆಳಗಾವಿಯ ಪೋದಾರ ಇಂಟರ್ನ್ಯಾಷನಲ್ ಶಾಲೆಯ ಮಕ್ಕಳು ಶೈಕ್ಷಣಿಕ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಉಪನಿರ್ದೇಶಕರಾದ ರಾಮಯ್ಯ ಅವರು ಗ್ರಂಥಾಲಯದ ಉಪಯುಕ್ತತೆ ಬಗ್ಗೆ ತಿಳಿಸಿ ಅಲ್ಲಿರುವ ಅಮೂಲ್ಯ ಪುಸ್ತಕಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆನೀಡಿದರು.
ಸಿಬ್ಬಂದಿಗಳಾದ ಪ್ರಕಾಶ ಇಚಲಕರಂಜಿ ಮತ್ತು ಅಂಬೇಕರ್ ಆವರು ಗ್ರಂಥಾಲಯದ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಅದೆ ರೀತಿ ಕಂಪ್ಯೂಟರ್ ವಿಭಾಗ ಮತ್ತು ಡಿಜಿಟಲ್ ಗ್ರಂಥಾಲಯದ ಕುರಿತು ಮಾಹಿತಿ ನೀಡಿದರು.
ಒಟ್ಟು 160 ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿ ಭೇಟಿ ನೀಡಿದರು. ಮಕ್ಕಳು ಗ್ರಂಥಾಲಯದ ವೀಕ್ಷಣೆ ಮಾಡಿ ಮತ್ತು ಮಾಹಿತಿ ಪಡೆದುಕೊಂಡು, ಅನೇಕ ಪ್ರಶ್ನೆಗಳ ಉತ್ತರ ಪಡೆದುಕೊಂಡರು.
ಈ ಸಂದರ್ಭದಲ್ಲಿ ಗ್ರಂಥಪಾಲಕರು,ಮತ್ತು ಆನಂದ, ಸುನಿಲ್, ಸುಮಿತ್ ಕಾವಳೇ, ಸಂಗೀತಾ,ಲಕ್ಷ್ಮೀ, ವಿಜಯ ಲಕ್ಷ್ಮಿ, ಸರಸ್ವತಿ, ಪೂರ್ಣಿಮಾ,ರಾಜಶ್ರೀ,ಮತ್ತಿತರು ಹಾಜರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ರಾಜ ಹುಲಮನಿ ಅವರು, ಇಲಾಖೆಗೆ, ಉಪನಿರ್ದೇಶಕರಿಗೆ ಮತ್ತು ಸಿಬ್ಬಂದಿಗಳ ಸಹಕಾರಕ್ಕೆ ಧನ್ಯವಾದ ತಿಳಿಸಿದರು. ಮಕ್ಕಳೊಂದಿಗೆ ಶಾಲಾ ಗ್ರಂಥಪಾಲಕರಾದ ರಾಜು ಗಂಗಣ್ಣಗೊಳ,ಶಿಕ್ಷಕರಾದ ವಿಜಯಕುಮಾರ್ ಕೆ, ಅಂಜುಮ್ ಜೆ, ದೀಕ್ಷಿತಾ ಡಿ, ಅನ್ನಪೂರ್ಣ ಹಾಜರಿದ್ದರು.