spot_img
spot_img

ನಮ್ಮೊಳಗೇ ನಮ್ಮನ್ನು ನೋಡಿಕೊಳ್ಳುವದೇ ರಾಜಯೋಗ : ಬ್ರಹ್ಮಕುಮಾರಿ ಶೋಭಕ್ಕ

Must Read

- Advertisement -

ಹೊನ್ನಾಳಿ : ನವೆಂಬರ್ ೩ ರಿಂದ ೩೦ ರವರೆಗೆ ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ “ಶರಣರು ಕಂಡ ಶಿವ ” ಪ್ರವಚನ ನಡೆಯುತ್ತಿದೆ. ಹೊನ್ನಾಳಿಯ ಈಶ್ವರಿಯ ವಿಶ್ವ ವಿದ್ಯಾಲಯದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರವಚನದಲ್ಲಿ ನವೆಂಬರ್ ೧೮ ರಂದು ಬ್ರಹ್ಮ ಕುಮಾರಿ ಶೋಭಕ್ಕ ಅವರು ನೆರೆದಿದ್ದ ಸಹಸ್ರಾರು ಅಮೃತಾತ್ಮರಿಗೆ ರಾಜಯೋಗ ಜ್ಞಾನದ ಬಗ್ಗೆ ಪ್ರವಚನ ನೀಡಿದರು.

ಸಂತಸದಾಯಕ ಜೀವನ ನಡೆಸಲು ಇಂದು ಮನುಷ್ಯ ಏನೆಲ್ಲಾ ಮಾಡುತ್ತಿದ್ದಾನೆ ಆದ್ರೆ ಸಂತಸ ಎಲ್ಲೋ ಕಳೆದು ಹೋಗಿರುವ ರೀತಿ ಚಡಪಡಿಸುತ್ತಿದ್ದಾನೆ. ಪ್ರಕೃತಿಯ ಆಗು ಹೋಗುಗಳ ಜೊತೆ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ಸುಲಭ ಉಪಾಯ ಅರಿತು ಬದುಕಬೇಕಾಗಿದೆ. ಆದದ್ದೆಲ್ಲ ಒಳ್ಳೆಯದಕ್ಕೆ, ಆಗುವದೆಲ್ಲಾ ಆಗಲಿ, ಪರಮಾತ್ಮನ ಕೃಪೆ ಬೇಕೆಂಬ ಸತ್ಯ ಅರಿತು ಮನುಷ್ಯ ಬದುಕಬೇಕಾಗಿದೆ ಎಂದರು.

- Advertisement -

ಅಕ್ಬರ್ ಮತ್ತು ಬೀರಬಲ್ಲ ನ ಪ್ರಸಂಗಗಳನ್ನು ನೆನಪಿಸುತ್ತ, ಆಗುವದೆಲ್ಲಾ ಆಗಲಿ, ಬಂದದ್ದನ್ನು ಧೈರ್ಯದಿಂದ ಸ್ವೀಕರಿಸೋಣ ಎಂದರು.

ಇಂದಿನ ಆಧುನಿಕ ಜಂಜಾಟದ ಸ್ವಾರ್ಥ ಜೀವನ ಶೈಲಿಯಲ್ಲಿ ಎಲ್ಲದೂ ಭಾರವಾಗಿದೆ. ನಮಗೆ ಎಲ್ಲವು ಸುಲಭದಲ್ಲೇ ಸಿಗಬೇಕು, ಕಷ್ಟ, ಕಷ್ಟ ಸಹಿಷ್ಣುತೆ ಇಲ್ಲವಾಗಿದೆ. ಬದುಕಿನಲ್ಲಿ ಏನಾದರೊಂದು ಸಾಧಿಸಬೇಕಾದರೆ ಒಂದಿಷ್ಟು ಪ್ರಯತ್ನ ಬೇಕು. ನಮಗೆ ರಾಜಯೋಗ ಜ್ಞಾನದಿಂದ ಸಾರ್ಥಕ ಬದುಕು ಕಟ್ಟಿಕೊಳ್ಳಲು ಸಾಧ್ಯ. “ನಮ್ಮೊಳಗೇ ನಮ್ಮನ್ನು ನೋಡಿಕೊಳ್ಳುವದೇ ರಾಜಯೋಗ “. ಇದೊಂದು ಜ್ಞಾನವಾಗಿದ್ದು ಎಲ್ಲರೂ ಅವಶ್ಯವಾಗಿ ಇದನ್ನು ಪಡೆಯಬೇಕಾಗಿದೆ. 

ರಾಜಯೋಗ ದಿಂದ ಅಷ್ಟ ಶಕ್ತಿಗಳ ಪ್ರಾಪ್ತಿಯಾಗುತ್ತದೆ. ನಮಗೆ “ಸಹನ ಶಕ್ತಿ” ಬಹಳ ಮುಖ್ಯವಾಗಿದ್ದು ರಾಜಯೋಗದಿಂದ ಅದನ್ನು ಪಡೆಯಬಹುದು. ನಮ್ಮ ಬದುಕಿನಲ್ಲಿ ಬೇರೊಬ್ಬರೊಂದಿಗೆ, ನಮ್ಮ ಸುತ್ತಮುತ್ತಲಿನವರೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗ ನಮಗೆ ಸಂತಸದಾಯಕ ಬದುಕು ಸಿಗುತ್ತದೆ. ಅಂತಹ “ಸಮಾವೇಶ ಗೊಳಿಸುವ ಶಕ್ತಿ”  ರಾಜಯೋಗದಿಂದ ಸಿಗುತ್ತದೆ. ಇನ್ನು ನಾವು ಯಾವುದು ಒಳ್ಳೆಯದು ಕೆಟ್ಟದೆಂದು ತುಲನೆ ಮಾಡಿಕೊಳ್ಳುವ ಅಂದರೆ “ಪರೀಕ್ಷಿಸುವ ಶಕ್ತಿ” ಹಾಗೂ  ಯಾವ್ಯಾವ ಪರಿಸ್ಥಿತಿಯಲ್ಲಿ ಯಾವುದು ಸೂಕ್ತ ಎಂದು 

- Advertisement -

“ನಿರ್ಣಯಿಸುವ ಶಕ್ತಿ” ಕೂಡ ನಮಗೆ ರಾಜಯೋಗದಿಂದ ಸಿಗುತ್ತದೆ. ಧೈರ್ಯಮ್ ಸರ್ವತ್ರ ಸಾಧನಂ ಎಂಬಂತೆ ಬದುಕಿನಲ್ಲಿ ನಮಗೆ ಬಂದದ್ದನ್ನು “ಎದುರಿಸುವ ಶಕ್ತಿ” ಬೇಕಾಗಿದೆ. ಪ್ರೀತಿಪಾತ್ರರ ಅಗಲಿಕೆ, ಸಾವು ನೋವು ಗಳು ನಮ್ಮನ್ನು ಕೂಪಕ್ಕೆ ತಳ್ಳದೆ ಅವೆಲ್ಲವನ್ನು ಎದುರಿಸುವ ಶಕ್ತಿಯನ್ನು ರಾಜಯೋಗ ಜ್ಞಾನ ನೀಡುತ್ತದೆ. ಎಲ್ಲರಿಗೂ ಕಾಡುವ ಒಂಟಿತನ, ಸ್ವಾರ್ಥ, ಅಹಂಕಾರ ಗಳು ನಮ್ಮನ್ನು ಮುಂದೆ ಕರೆದೊಯ್ಯಲಾರವು. ಹಾಗಾಗಿ ಪ್ರಕೃತಿ ಮತ್ತು ಸಮಾಜದಲ್ಲಿ ಆದಷ್ಟು ಹೊಂದಾಣಿಕೆಯಿಂದ ಸಹ ಜೀವನ ನಡೆಸಬೇಕು. ಅಂತಹ “ಸಹಯೋಗದ ಶಕ್ತಿ” ನಮಗೆ ಬೇಕಾಗಿದೆ. ಇನ್ನು ನಾವು ಸಣ್ಣದನ್ನು ದೊಡ್ಡದನ್ನಾಗಿ ಮಾಡದೇ, ಇದ್ದದ್ದನ್ನು ಇದ್ದಂತೆ, ಆದಷ್ಟು ಸಂಕುಚಿತ ಮಾಡಿಕೊಂಡು ಸ್ವೀಕರಿಸುವ ಅಂತರವಲೋಕನದ “ಸಂಕುಚಿತ ಗೊಳಿಸುವ ಶಕ್ತಿ” ಮತ್ತು ಸಣ್ಣ ಸಣ್ಣ ಘಟನೆಗಳನ್ನು ದೊಡ್ಡದಾಗಿ ಮಾಡದೇ, ಅಥವಾ ದೊಡ್ಡದನ್ನೂ “ಸಂಕ್ಷಿಪ್ತ ಗೊಳಿಸುವ ಶಕ್ತಿ ” ಗಳು ನಮಗೆ ಬೇಕಾಗಿದೆ. ಈ ಎಲ್ಲಾ ಎಂಟು ಶಕ್ತಿಗಳು ನಮಗೆ ಜ್ಞಾನದಿಂದ, ಪರಮಾತ್ಮನ ಅಸ್ತಿತ್ವದ ಅರಿವಿನಿಂದ, ನಮ್ಮೊಳಗಿನ ಅಂತಾರಾತ್ಮದ ಕಣ್ಣು ತೆರೆಯುವುದರಿಂದ ಸಿಗುತ್ತದೆ. ರಾಜಯೋಗ ಮಾಡುತ್ತಾ ಹೋದರೆ ನಮ್ಮಲ್ಲಿರುವ ಸದ್ಗುಣಗಳು, ಒಳ್ಳೆತನ ಇನ್ನಷ್ಟು ಜಾಗೃತವಾಗುತ್ತದೆ. 

ಏಕತಾನತೆ, ಪರಿಸ್ಥಿತಿ ನಿಭಾಯಿಸುವುದು ನಮಗೆ ಚನ್ನಾಗಿ ಗೊತ್ತಿದ್ದರೆ ಎಲ್ಲವೂ ಸರಳ ಸುಲಭವಾಗುತ್ತವೆ. ಇನ್ನು, ನಮ್ಮ ಮನಸ್ಸನ್ನು ನಾವು ಸ್ವಚ್ಛ ಸುಂದರವಾಗಿ ಇಟ್ಟುಕೊಳ್ಳಬೇಕಾಗಿದೆ. ಮನಸ್ಸು ನಮ್ಮ ಕಣ್ಣಿಗೆ ಕಾಣದು. ಆದರೆ ಒಳ್ಳೆ ಮನಸ್ಸು, ಕೆಟ್ಟ ಮನಸ್ಸು ಎಂಬುದನ್ನು ನಾವು ವ್ಯಕ್ತಿ ವ್ಯಕ್ತಿಗಳಲ್ಲಿ ಗುರುತಿಸುತ್ತೇವೆ. “ಮನ ಏವಾ ಮನುಷ್ಯಣಂ ಕಾರಣಮ್ ಬಂಧ ಮೋಕ್ಷಯೋ” ಎಂಬಂತೆ  ಎಲ್ಲಾ ಆಗು ಹೋಗುಗಳಿಗೂ ನಮ್ಮ ಮನಸ್ಥಿತಿಯೇ ಮೊದಲ ಕಾರಣ ಎಂಬುದನ್ನು ಅರಿಯಬೇಕು. ಬೇರೆಯವರ ಸುಖ ಸಂಪತ್ತು ನೋಡಿ ನಾವು ನಮ್ಮ ಬಗ್ಗೆ ಕೀಳಿರಿಮೆ, ಬೇರೆಯವರ ಬಗ್ಗೆ ಅಸೂಯೆ ಪಡಬಾರದು. ಯಾಕೆಂದರೆ ದುಃಖ ಸಂಪತ್ತು ಇರುವ ಶ್ರೀಮಂತನಿಗೆ ನೋಡಿ ಅನುಭವಿಸಲು ಕಣ್ಣು ಇರದ ಪರಿಸ್ಥಿತಿಯಲ್ಲಿ ಎಷ್ಟು ಸಂಪತ್ತು, ಹಣ ಕೊಡುತ್ತೇನೆ ಎಂದರು ಆ ಭಿಕ್ಷುಕ ತನ್ನ ಕಣ್ಣನ್ನು  ಶ್ರೀಮಂತನಿಗೆ ಕೊಡಲಾರ. ಯಾಕೆಂದರೆ ದೇಹದ ಮೌಲ್ಯ ಬೆಲೆಕಟ್ಟಲಾಗದು.

ನಾವು ಅಂದುಕೊಂಡಿದ್ದೇವೆ ನಮ್ಮ ಸಂಗಾತಿಗಳು ಬಹಳಷ್ಟು ಇವೆ ಎಂದು. ಆದರೆ ನಮ್ಮ ಸಂಗಾತಿಗಳು ನಾಲ್ಕು ಇವೆ. ಅವುಗಳಲ್ಲಿ ಒಂದು ಮಾತ್ರ ನಮ್ಮ ಜೊತೆ ಶಾಶ್ವತವಾಗಿ ಬಂದು, ಉಳಿದವುಗಳು ಅರ್ಧದಲ್ಲೇ ಕೈ ಕೊಡುತ್ತವೆ. ಆ ಸತ್ಯದ ಅರಿವು ಬೇಕಾಗಿದೆ. ಹೇಗೆಂದರೆ… ನಮಗೆ ಏನೆಲ್ಲಾ ಆಸೆ ಲೋಲುಪತೆಗಳು, ಸುಂದರ ಕುಟುಂಬ ಐಶ್ವರ್ಯಗಳು, ವಿಲಾಸಿ ಜೀವನ ಇದ್ದರೂ ಸಹ ನಮ್ಮ ಬದುಕಿನಲ್ಲಿ ಅವೆಲ್ಲ ಶಾಶ್ವತವಲ್ಲ.  ಕಟ್ಟಿಕೊಂಡ ಹೆಂಡತಿ ಮಕ್ಕಳು, ಬಂಧು ಬಳಗ, ಧನ ಸಂಪತ್ತು, ಸುಂದರ ದೇಹ ಈ ಯಾವುವೂ ನಮ್ಮ ಸಾವಿನೊಂದಿಗೆ ನಮ್ಮ ಜೊತೆ ಬರಲಾರವು. ಬರುವದು ನಮ್ಮ “ನಮ್ಮ ಕರ್ಮಗಳು ಮಾತ್ರ ನಮ್ಮ ಜೊತೆ ಬರುತ್ತವೆ. ಹಾಗಾಗಿ ಒಳ್ಳೆ ಕರ್ಮಗಳನ್ನೇ ಮಾಡುತ್ತ, ಕೆಟ್ಟ ಕರ್ಮಗಳನ್ನು ಕೈಬಿಡಬೇಕಾಗಿದೆ. ಆಗುವದೆಲ್ಲಾ ಆಗಲಿ ಬಿಡಿ, ನೀವು ಮಾತ್ರ ಸರಿಯಾಗಿರಿ  ಯಾಕೆಂದರೆ  ಅವರವರ ಬುತ್ತಿ ಅವರವರ ಹೆಗಲಿಗೆ ಇದ್ದೆ ಇರುತ್ತದೆ. ನಾವು ಅಕ್ಷಮ್ಯ ಅಪರಾಧ ಮಾಡಿದವರನ್ನೂ ಕೂಡ ಬೇಷರತ್ ಕ್ಷಮಿಸಲೇಬೇಕು ಏಕೆಂದರೆ ನಾವು ನೆಮ್ಮದಿಯಾಗಿ ಇರಬೇಕಲ್ಲವೇ.. ಹಾಗಾಗಿ ನಮ್ಮ ಸುಂದರ ಬದುಕಿಗಾಗಿ ಜ್ಞಾನಿಗಳಾಗೋಣ, ರಾಜಯೋಗ ಜ್ಞಾನದಿಂದ ಸಾರ್ಥಕ ಬದುಕನ್ನು ಪಡೆಯೋಣ.

ಪ್ರವಚನ ಪ್ರತಿದಿನ ಸಂಜೆ ೬.೩೦ ರಿಂದ ಒಂದು ಗಂಟೆ ನಡೆಯುತ್ತಿದ್ದು ಎಲ್ಲಾ ಅಮೃತಾತ್ಮರು ಇದರ ಸದುಪಯೋಗ ಪಡೆಯಬೇಕೆಂದು ಕಾರ್ಯಕ್ರಮ ನಿರ್ವಹಕಿ ಬ್ರಹ್ಮಕುಮಾರಿ ಜ್ಯೋತಿ ಅಕ್ಕ ಅವರು ವಿನಂತಿ ಮಾಡಿ, ವೇದಿಕೆ ವತಿಯಿಂದ ಹೊನ್ನಾಳಿಯ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳಿಗೆ ಗೌರವಿಸಲಾಯಿತು.

ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆ ಹಾಗೂ ಬಿದರಗಡ್ಡೆ ಗ್ರಾಮದ ಚನ್ನಬಸಣ್ಣ, ರಾಜಣ್ಣ, ಮಮತಕ್ಕ ಮುಂತಾದ ಬಳಗದವರು ಪ್ರವಚನ ನೀಡುತ್ತಿರುವ ಶೋಭಕ್ಕ ಮತ್ತು ಜ್ಯೋತಿ ಅಕ್ಕನವರಿಗೆ ಗೌರವ ಸಮರ್ಪಣೆ ಮಾಡಿದರು. ಪ್ರವಚನ ಪೂರ್ವದಲ್ಲಿ ಶರಣೆ ಕವಿತಾ ನಾಯಕ್ ಅವರು ಶರಣರ ವಚನಗಳನ್ನು ಹಾಡಿದರು.


ವರದಿ:

ಸಂತೋಷ್ ಬಿದರಗಡ್ಡೆ

ಶಿಕ್ಷಕ, ಸಾಹಿತಿಗಳು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ರೇವಣಸಿದ್ದಯ್ಯನವರ ಪುಣ್ಯಸ್ತ್ರೀ ರೇಕಮ್ಮ ಹನ್ನೆರಡನೇ ಶತಮಾನ ಎಂಬುದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವ ಬಹುಮುಖ್ಯ ಕಾಲಘಟ್ಟ. ಶರಣರು ರಚಿಸಿದ ವಚನಗಳನ್ನು ಕನ್ನಡ ಸಾಹಿತ್ಯದ ಉಪನಿಷತ್ತುಗಳು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group