spot_img
spot_img

ಗೋ ಸಂಪತ್ತಿನ ರಕ್ಷಣೆ ನಮ್ಮೆಲ್ಲರ ಹೊಣೆ – ಶೇಖರಗೌಡ

Must Read

ಸಿಂದಗಿ: ಭಾರತೀಯ ಸಂಸ್ಕೃತಿಯಲ್ಲಿ  ಗೋವಿಗೆ ಪೂಜ್ಯ ಸ್ಥಾನವಿದ್ದು, ನಮ್ಮ ದೇಹದ ಅನೇಕ ರೋಗಗಳನ್ನು ಗುಣ ಪಡಿಸುವ ದಿವ್ಯ ಔಷಧಿಯನ್ನು ಗೋಮೂತ್ರ ದಿಂದ ತಯಾರಿಸಲಾಗುತ್ತಿದೆ. ದೇಶದಲ್ಲಿ 30ಕೋಟಿಗೂ ಹೆಚ್ಚು ಗೋವುಗಳಿವೆ. ಗೋವನ್ನು ಪುಣ್ಯಕೋಟಿ ಎನ್ನಲಾಗುತ್ತದೆ. ಕಾರಣ ಗೋವು ನಮ್ಮ ರಾಷ್ಟ್ರೀಯ ಸಂಪತ್ತು  ಗೋ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ವಿಶ್ವ ಹಿಂದೂ ಪರಿಷದ್ ಸಿಂದಗಿ ತಾಲೂಕ ಕಾರ್ಯದರ್ಶಿಗಳಾದ ಶೇಖರಗೌಡ ಹರನಾಳ ಹೇಳಿದರು.

ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಹತ್ತಿರದ ಹನುಮಾನ ಮಂದಿರದಲ್ಲಿ ವಿಶ್ವ ಹಿಂದೂ ಪರಿಷದ್ ಸಿಂದಗಿ ವತಿಯಿಂದ ಗೋಪಾಷ್ಟಮಿ ನಿಮಿತ್ತ ಗೋವನ್ನು ಅಲಂಕರಿಸಿ ವಿಶೇಷ ರೀತಿಯಿಂದ ಪೂಜೆ ನೆರವೇರಿಸಿ ಮಾತನಾಡಿ, ರಕ್ತದೊತ್ತಡ ಸಕ್ಕರೆ ಕಾಯಿಲೆ,  ಚರ್ಮರೋಗ, ಕ್ಯಾನ್ಸರ್  ನಂತಹ ಅನೇಕ ರೋಗಗಳನ್ನು ನಿಯಂತ್ರಣ ಮಾಡುವಲ್ಲಿ ಗೋಮೂತ್ರ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಗೋವಿನ ಸಗಣಿಯಿಂದ ವಿಭೂತಿಗಳನ್ನು ತಯಾರಿಸಲ್ಪಡುತ್ತದೆ ಹಾಗೂ ಪ್ರತಿಯೊಬ್ಬ ಮನುಷ್ಯನಿಗೆ ಗೋವಿನ ಹಾಲು ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಗೋವಿನ ಸಂತತಿ ಹೆಚ್ಚು ಇರುವುದರಿಂದ ಹಾಲು ಉತ್ಪನ್ನಗಳ ಆಮದು ಅವಶ್ಯಕತೆ ಇಲ್ಲ, ಆದರೆ ನಾವು ಪೂಜಿಸಲ್ಪಡುವ ಗೋವನ್ನು ಮಾಂಸಕ್ಕಾಗಿ ಹತ್ಯೆ ಮಾಡುತ್ತಿರುವುದು ನೀಚತನದ ಪರಮಾವಧಿ ಆದ್ದರಿಂದ ಗೋಹತ್ಯೆಯನ್ನು ತಡೆದು ಗೋವಿನ ರಕ್ಷಣೆಗೆ ಎಲ್ಲ ಹಿಂದೂ ಬಾಂಧವರು ಕಂಕಣ ಬದ್ಧರಾಗಿ ನಿಲ್ಲಬೇಕಾಗಿದೆ ಎಂದರು.

ವಿಶ್ವ ಹಿಂದೂ ಪರಿಷದ್ ಮಹಿಳಾ ಪ್ರಮುಖರಾದ ಲಕ್ಷ್ಮೀ ತಾಳಿಕೋಟಿ, ಬೋರಮ್ಮ ಬಗಲಿ, ರೇಖಾ ಗುಡ್ಡೋಡಗಿ, ಸುಜಾತಾ ನಾಯ್ಕೋಡಿ, ರೇಣುಕಾ ಕುಂಬಾರ, ನಿಂಗಮ್ಮ ಹೂಗಾರ  ಅವರು ಆರತಿಯನ್ನು ಬೆಳಗಿದರು.

ಶ್ರೀ ಗುರುಪಾದಯ್ಯನವರು ಹಾಗೂ  ಶಿವಾನಂದ ಗುಡ್ಡೋಡಗಿ  ಗೋಮಾತೆಗೆ ಪೂಜೆ ಸಲ್ಲಿಸಿದರು.

ವಿಶ್ವ ಹಿಂದೂ ಪರಿಷದ್ ತಾಲೂಕ ಅಧ್ಯಕ್ಷ ಡಾ. ಶರಣಗೌಡ ಬಿರಾದಾರ, ಉಪಾಧ್ಯಕ್ಷ ಗುರು ಬಿರಾದಾರ (ವಕೀಲರು), ಬಜರಂಗದಳ ಸಂಯೋಜಕ ಯಮನಪ್ಪ ಚೌಧರಿ, ಡಾ. ಅಭಯ್ ಕುಲಕರ್ಣಿ, ಮಲ್ಲಿಕಾರ್ಜುನ ಸಿಂದಗಿ, ಪರಿಷತ್ ನ ಪ್ರಮುಖರಾದ ಗುಂಡೂರಾವ್ ಕೊಟಾರಗಸ್ತಿ, ರಾಯಪ್ಪ ಬಡಿಗೇರ, ಪ್ರಶಾಂತ ಬಿರಾದಾರ, ಅಕ್ಷಯ ಬಂದಾಳ, ಸೋಮು ಕಟ್ಟಿಮನಿ, ಶಿವರಾಜ್ ಸೊನ್ನದ, ಸಂಗಮೇಶ ಬಡಿಗೇರ, ಸಿದ್ದು ಮಾಲಗಾರ, ಆಕಾಶ ನಾಟಿಕಾರ ಹಾಗೂ ಪ್ರಮುಖ  ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಶ್ವ ಹಿಂದೂ ಪರಿಷತ್ ಸತ್ಸಂಗ ಪ್ರಮುಖರಾದ ಬಸವರಾಜ ಬಿರಾದಾರ ಕಾರ್ಯಕ್ರಮದ ನಿರೂಪಣೆ ಮಾಡಿದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!