spot_img
spot_img

ಮರಗಳ ಬೆಂಕಿಗಾಹುತಿ ಪುರಸಭೆಯ ನಿರ್ಲಕ್ಷ್ಯದಿಂದಾದ ಅವಘಡ – ಅಶೋಕ ಅಲ್ಲಾಪೂರ ಆರೋಪ

Must Read

- Advertisement -

ಸಿಂದಗಿ: ವಿಜಯಪುರ ರಸ್ತೆಯ ಮಂಗಲ ಕಾರ್ಯಾಲಯದ ಎದುರು ಬೆಳೆದು ನಿಂತಿರುವ ಅರಣ್ಯ ಇಲಾಖೆಯ ಮರಗಳ ಕೆಳಗೆ ಖಾಲಿ ಗ್ಲಾಸುಗಳು ,ಪ್ಲಾಸ್ಟಿಕ್ ಪೇಪರ್ ಗಳನ್ನು ಗುಡ್ಡೆ ಹಾಕಿರುವುದರಿಂದ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದ ಈ ಮರಗಳು ಸಂಪೂರ್ಣ ಸುಟ್ಟು ಹೋಗುತ್ತವೆ  ಎನ್ನುವ ಮಾನವೀಯ ಪ್ರಜ್ಞೆ ಇಲ್ಲದ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ದಂಡ ವಿಧಿಸಿ ಸ್ವಚ್ಛತೆ ಕಾಪಾಡಬೇಕು ಪುರಸಭೆಯ ದಿವ್ಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ನಗರ ಸುಧಾರಣಾ ವೇದಿಕೆಯ ಅಧ್ಯಕ್ಷ ಅಶೋಕ ಅಲ್ಲಾಪುರ ಆಕ್ರೋಶ ಹೊರ ಹಾಕಿದರು.

ಪಟ್ಟಣದಲ್ಲಿ ಸುಟ್ಟ ಮರಗಳನ್ನು ವೀಕ್ಷಿಸಿ ಅವರು ಮಾತನಾಡಿದ ಅವರು, ಪಟ್ಟಣದ ಹೊರವಲಯದಲ್ಲಿರುವ ಎಲ್ಲ ಮಂಗಲ ಕಾರ್ಯಾಲಯಗಳ ಬಳಿ ವೈದ್ಯರು ಬಳಸಿರುವ  ವೇಸ್ಟು ಮಟೀರಿಯಲ್ಲುಗಳು  ಸಿಂದಗಿಯ ರಸ್ತೆಯ ಎಡ ಬಲಗಳಲ್ಲಿ ಹಾಕುತ್ತಿರುವದು ನಾಚಿಕೆಯ ಸಂಗತಿ. ಅಲ್ಲದೆ ಮಲಘಾಣ ರಸ್ತೆಯಲ್ಲಿನ ಸ್ಮಶಾನ ಹತ್ತಿರ ಕೋಳಿಗಳ ಮಾಂಸ ಹಾಗೂ ಮೀನಿನ ಎಲ್ಲ ವೆಸ್ಟೆಜ್‍ನ್ನು ಹಾಕಿ ಗಲೀಜಾಗಿದೆ ಈ ಕುರಿತು  ಸುತ್ತಲಿನ ದಾಬಾಗಳಿಗೆ, ಮಾಂಸದ ಅಂಗಡಿಗಳಿಗೆ ನೋಟಿಸ್ ನೀಡಬೇಕು ಎಂದು ಸಿಂದಗಿ ನಗರ ಸುಧಾರಣಾ ಸಮಿತಿಯ ಕಾರ್ಯದರ್ಶಿ ಶಿವಾನಂದ ತಾವರಕೇಡ, ಎಂ.ಎ.ಖತೀಬ, ಶ್ರೀಶೈಲ ಯಳಮೇಲಿ, ಶಾಂತು ರಾಣಾಗೋಳ  ಅವಧೂತ ಜೋಶಿ, ಪೋದ್ದಾರ್  ಪುರಸಭೆಗೆ ಎಚ್ಚರಿಕೆ ನೀಡಿದರು.

2 ದಿನಗಳಲ್ಲಿ ಆ ಜಾಗೆಯು  ಸಂಪೂರ್ಣ ಸ್ವಚ್ಛವಾಗಬೇಕು ಇಲ್ಲದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group