spot_img
spot_img

ದಿ. ಶಿವಾನಂದ ಪಾಟೀಲ ನೆನಪಿಗೆ ಶುಭ ನುಡಿ ಕಾರ್ಯಕ್ರಮ

Must Read

spot_img

ಸಿಂದಗಿ: ಮತಕ್ಷೇತ್ರದ ಅಭ್ಯರ್ಥಿಯಾಗಿದ್ದ ದಿ.ಶಿವಾನಂದ ಪಾಟೀಲರ ಅಗಲಿಕೆಗೆ ಫೆಬ್ರುವರಿ 02 ರಂದು ಜೆಡಿಎಸ್ ಕಾರ್ಯಕರ್ತರು ಹಾಗೂ ದಿ.ಶಿವಾನಂದ ಪಾಟೀಲರ ಅಭಿಮಾನಿಗಳು ಸೇರಿ ಶಹಾಪುರ ಪೆಟ್ರೋಲ್ ಪಂಪ್ ಪಕ್ಕದಲ್ಲಿ ಶುಭನುಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರಣ ಕಾರ್ಯಕ್ರಮಕ್ಕೆ ಕ್ಷೇತ್ರದ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮನವಿ ಮಾಡಿಕೊಂಡರು.

ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ್ಯಾತ್ಯತೀತ ಜನತಾದಳದ ಜಿಲ್ಲೆಯಲ್ಲಿಯೇ ಸಿಂದಗಿ ಮತಕ್ಷೇತ್ರ ಮೊಟ್ಟ ಮೊದಲ ಬುನಾದಿಯಾಗಿತ್ತು. ದಿ.ಎಂ.ಸಿ.ಮನಗೂಳಿ ಅವರ ಅಗಲಿಕೆಯಿಂದ ಪಕ್ಷದ ಸಂಘಟನೆ ನೆಲಕಚ್ಚಿತ್ತು ಅದನ್ನು ಪಕ್ಷ ಪುನಃ ಸದೃಢವಾಗಿ ಮತ್ತೇ ಅಧಿಕಾರ ಚುಕ್ಕಾಣಿ ಹಿಡಿಯುವ ಭರವಸೆ ಮೂಡಿಸಿದ ಕೆಲವೇ ದಿನಗಳಲ್ಲಿ ದಿ.ಶಿವಾನಂದ ಪಾಟಿಲ ಅವರ ಅಗಲಿಕೆಯಿಂದ ಪಕ್ಷಕ್ಕೆ ದೊಡ್ಡ ಆಘಾತ ಅಪ್ಪಳಿಸಿ ಇಂದು ಕ್ಷೇತ್ರ ಅನಾಥವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್.ಡಿ ದೇವೆಗೌಡರು ಈ ಕ್ಷೇತ್ರಕ್ಕೆ ವಿಜಯಪುರ ಜಿಲ್ಲೆಯಲ್ಲಿಯೇ ಸಿಂದಗಿ ಮತಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದರು. ಅಷ್ಟೇ ಅಲ್ಲದೆ ಮನಗೂಳಿ ಅವರು ಚಪ್ಪಲಿ ಬಿಟ್ಟು ತಿರುಗಾಡುವಾಗ ಅವರ ಬೆನ್ನಿಗೆ ನಿಂತು ಗುತ್ತಿಬಸವಣ್ಣ ಯೋಜನೆಗೆ ಸಹಕಾರ ನೀಡಿದರು ಅದರ ಪ್ರತಿಪಲವಾಗಿಯೇ ಗೋಲಗೇರಿಯಲ್ಲಿ ಜೋಡಿ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅಂತಹ ಘಟನೆಗಳು ಮರುಕಳಿಸಲು ಪಾಟೀಲರ ಸೇವೆ ಕ್ಷೇತ್ರದ ಜನತೆಗೆ ಬಹಳ ಅವಶ್ಯಕವಿತ್ತು ಅವರು ಕೋವೀಡ್ ಸಂದರ್ಭದಲ್ಲಿ ಹಾಗೂ ಬಡ ಜನತೆ ಹಲವಾರು ರೀತಿಯಲ್ಲಿ ಸಹಾಯ ಸಹಕಾರ ನೀಡಿದ್ದರು ಎಂಬ ಮಾತುಗಳು ಜನರು ಇನ್ನೂ ಮರೆತಿಲ್ಲ. ಅಂತಹ ನಾಯಕರು ನಮ್ಮೊಂದಿಗೆ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿ ಬಂದು ಮಧ್ಯೆ ರಾತ್ರಿ ಹೊತ್ತಲ್ಲಿ ಅವರ ಸಾವಿನ ಸುದ್ದಿ ಆಘಾತ ಮೂಡಿಸಿದೆ ಎಂದರು.

ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜಾಧ್ಯಕ್ಷ ಸಿ.ಎಮ್.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಶಾಸಕ ದೇವಾನಂದ ಚವ್ಹಾಣ ಸೇರಿದಂತೆ ಹಲವಾರು ಮುಖಂಡರು ನುಡಿ- ನಮನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕಾ ಅಧ್ಯಕ್ಷ ದಾನಪ್ಪಗೌಡ ಚನ್ನಗೊಂಡ, ಆರ್.ಕೆ.ಪಾಟೀಲ, ಮಹಿಳಾ ಘಟಕಾಧ್ಯಕ್ಷೆ ಜ್ಯೋತಿ ಗುಡಿಮನಿ, ಎಂ.ಎನ್,ಪಾಟೀಲ, ಪ್ರಕಾಶ ಹಿರೇಕುರಬರ, ಮೋಮ್ಮದಸಾಬ ಉಸ್ತಾದ, ನಿಂಗರಾಜ ಬಗಲಿ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಸಂತೋಷ ಸಿರಕನಳ್ಳಿ, ಕಾಶೀನಾಥ ಕ್ಷತ್ರಿ, ಮಹಾಂತೇಶ ಪರಗೊಂಡ, ಭೀಮನಗೌಡ ಬಿರಾದಾರ, ಪ್ರಶಾಂತ ಸಾಲೋಟಗಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

- Advertisement -
- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!