spot_img
spot_img

ಬಿಜೆಪಿಯ ಕೆಲವು ಗದ್ಧಾರರಿಂದಲೇ ತಮಗೆ ಸೋಲುಂಟಾಗಿದೆ – ಈಶ್ವರಸಿಂಗ್ ಠಾಕೂರ್

Must Read

- Advertisement -

ಬೀದರ: ಬಿಜೆಪಿಯ ಕೆಲವು ಗದ್ದಾರರಿಂದಲೇ ತಮಗೆ ಸೋಲುಂಟಾಗಿದೆ ಎಂದು ಬಿಜೆಪಿ ಪಕ್ಷದ ಬೀದರ ಉತ್ತರ ಕ್ಷೇತ್ರದ ಅಭ್ಯರ್ಥಿ ಈಶ್ವರಸಿಂಗ್ ಠಾಕೂರ್ ಅವರು ಆರೋಪಿಸಿದರು.

ಅವರು ರವಿವಾರ ಬೆಳಿಗ್ಗೆ ಬೀದರ ನಗರದಲ್ಲಿ ಕರೆದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದರು. 

ತಮ್ಮ ವಿಶ್ವಾಸಕ್ಕೆ ಮತ್ತು ಪಕ್ಷಕ್ಕೆ ದ್ರೋಹ ಬಗೆದು ಮೋಸ ಮಾಡಿರುವ ಬಿಜೆಪಿಯ ಡಿಕೆ ಸಿದ್ರಾಮ್ ಹಾಗೂ ಇತರರು ತಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ ಮತ್ತು ಅನೇಕ ವಾಮ ಮಾರ್ಗಗಳನ್ನು ಅನುಸರಿಸಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಅಂತಹ ಮೋಸಗಾರರ ಪಟ್ಟಿ ತಯಾರಿಸಿದ್ದು ಪಕ್ಷದ ವರಿಷ್ಠರಿಗೆ ಕಳಿಸಿ ಅವರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಮನವಿ ಮಾಡಿದ್ದೇನೆ ಅಲ್ಲದೇ ಆ ಪಟ್ಟಿ ಶಿಘ್ರವೇ ಬಿಡುಗಡೆ ಮಾಡುವೆ ಎಂದು ತಿಳಿಸಿದರು.

- Advertisement -

ಚುನಾವಣೆಯಲ್ಲಿ ಈಶ್ವರ್‍ ಸಿಂಗ್ ಠಾಕೂರ್ ಅವರು ಸೈಲೆಂಟ್ ಆಗಿದ್ದಾರೆ. ಮನೆ ಹೊರಗೆ ಬರುತ್ತಿಲ್ಲ ಎಂಬ ಇತ್ಯಾದಿ ಅಪಪ್ರಚಾರ ಮಾಡಿ ಸಾಮಾಜಿಕ ಜಾಲತಾಣಗಳ ಮೂಲಕ ಮಿಥ್ಯ ಹೇಳಿಕೆ ನೀಡಿ ನೀಚತನದ ರಾಜಕಾರಣ ಮಾಡಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಈ ಹಿಂದೆ ಎರಡು ಸಲ ಪಕ್ಷದ ಟಿಕೇಟ್ ಪಡೆದು ಸ್ಪರ್ಧಿಸಿ ಸೋಲು ಅನುಭವಿಸಿದ್ದುಂಟು, ಅವರು ಪಕ್ಷಾಂತರಗೊಂಡು ಮೋಸಗೈದಿರುವರು. ಎಂದ ಅವರು ಬೀದರ ಕ್ಷೇತ್ರದ ಜನತೆ ತಮಗೆ ಮತ ನೀಡಿ ತಮ್ಮ ಜೊತೆ ಇದ್ದೇವೆ ಎಂದು ಸಾಬೀತುಪಡಿಸಿದ್ದಾರೆ. ನನಗೆ ಮತದಾನ ಮಾಡಿರುವ ಸುಮಾರು 18 ಸಾವಿರ ಮಹಾ ಜನತೆಗೆ ಚಿರ ಋಣಿಯಾಗಿರುವೆ. ಈ ಕ್ಷಣದಿಂದ ಮುಂಬರುವ ಚುನಾವಣೆ ವರೆಗೆ ಸರ್ವ ಜನಾಂಗದ ಸುಖ ದುಃಖ ಗಳಲ್ಲಿ ಭಾಗಿಯಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವೆ ಅವರ ಪರವಾಗಿ ದಿನದ 24 ತಾಸುಗಳ ಕಾಲ ತಮ್ಮ ಮೋಬಾಯಿಲ್ ಚಾಲು ಇಡುವೆ ಆದರೇ ಈಗಾಗಲೆ ಗೆದ್ದ ಅಭ್ಯರ್ಥಿ ಮತ್ತು ಸೋತ ಅಭ್ಯರ್ಥಿ ತಮ್ಮ ಮೋಬಾಯಿಲ್‍ಗಳನ್ನು ಸ್ವಿಚ್ ಆಫ್ ಮಾಡಿರುತ್ತಾರೆ. ಹಾಲಿ ಮಂತ್ರಿ ಭಗವಂತ ಖೂಬಾ ಅವರು ತಮ್ಮ ಪರವಾಗಿ ಕೆಲಸ ಮಾಡಲಿಲ್ಲ ಎಂದ ಅವರು ಮುಂಬರುವ ದಿನಗಳಲ್ಲಿ ತಾವು ಬೀದರ ಲೋಕ ಸಭಾ ಕ್ಷೇತ್ರಕ್ಕೆ ಟಿಕೇಟ್ ಕೆಳಲಿದ್ದೇನೆ ಎಂದರು.

- Advertisement -

ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಾಟೀಲ್ ಅಲಿಯಾಬಾದ್, ವಿಶ್ವನಾಥ ಉಪ್ಪೆ, ಶಿವರಾಜಸಿಂಗ್ ಠಾಕೂರ್, ಉಮೇಶ ಕಟ್ಮೆ, ಮಹೇಶ್ವರ್ ಸ್ವಾಮಿ ಅವರುಗಳು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group