ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀಮತಿ ಸುಲೋಚನಾ ಮಾಲಿಪಾಟೀಲರ ಚಿಗುರಿದ ಹೂಬಳ್ಳಿ, ಅಂತರಂಗದ ನಿನಾದ ಹಾಗೂ ಡಾ.ಸುಧಾ ಚಂದ್ರಶೇ ಖರ ಹುಲಗೂರ ಅವರ ಅಂತರಂಗದ ಅಲೆಗಳು ಕವನ ಸಂಕಲನಗಳನ್ನು ಪ್ರೊ. ಮಾಲತಿ ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು .
ಕವಯಿತ್ರಿಯರು ಸಮಾಜಮುಖಿಯಾದ ಕವನಗಳನ್ನು ಬರೆಯುವಾಗ ಮೌಲ್ಯಾಧಾರಿತ ಸಂದೇಶ ಇರಬೇಕು. ಭಾಷೆ , ಅಭಿವ್ಯಕ್ತಿ , ಭಾವನೆಗಳು, ವಿಷಯಗಳು ಓದುಗರ ಸಹೃದಯರನ್ನು ಆಕರ್ಷಿಸುವಂತಿರಬೇಕೆಂದು ಕಿವಿಮಾತು ಹೇಳಿದರು.
ಸಾಹಿತ್ಯ ಪರಿಷತ್ತು ಉದಯೋನ್ಮುಖ ಕವಿಗಳ ಕೃತಿಗಳನ್ನು ಬಿಡುಗಡೆ ಮಾಡಿ ಪ್ರೋತ್ಸಾಹಿಸುತ್ತಾ ಬಂದಿರುವುದನ್ನು ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಪ್ರಶಂಸಿಸಿದರು. ಬಿಡುಗಡೆಗೊಂಡ ಕವನ ಸಂಕಲನಗಳ ಕುರಿತು ಡಾ. ಎಮ್ ವೈ ಸಾವಂತ್, ಶ್ರೀಮತಿ ಲೀಲಾ ಕಲಕೋಟಿ ಹಾಗೂ ಶ್ರೀಮತಿ ಬಸಂತಿ ಇಂಗಳಳ್ಳಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್ ಆರ್ ಗುಂಜಾಳ ಅವರು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಎಂದು ತಿಳಿಸಿದರು.
ಡಾ . ಲಿಂಗರಾಜ ಅಂಗಡಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ಶ್ರೀಮತಿ ಸುನೀತಾ ಅರಬಳ್ಳಿ ಹಾಗೂ ಶ್ರೀಮತಿ ಲಲಿತಾ ಪಾಟೀಲ ಮತ್ತು ಮಧು ಗುಂಜಾಳ ಅತಿಗಳ ಪರಿಚಯ ಮಾಡಿದರು. ಕು ತೇಜಸ್ವಿನಿ ಹಾಗೂ ಸಂಜನಾ ಪ್ರಾರ್ಥಿಸಿದರು.ವೇದಿಕೆ ಮೇಲೆ ಶ್ರೀಮತಿ ಸುಲೋಚನಾ ಅಪ್ಪಾಸಾಹೇಬ ಮಾಲಿಪಾಟೀಲ ದಂಪತಿಗಳು ಹಾಗೂ ಡಾ. ಸುಧಾ ಚಂದ್ರಶೇಖರ ಹುಲಗೂರ ದಂಪತಿಗಳು ಉಪಸ್ಥಿತರಿದ್ದರು. ಶ್ರೀಮತಿ ಮೇಘಾ ಹುಕ್ಕೇರಿ ಕಾರ್ಯಕ್ರಮ ನಿರೂಪಿಸಿದರು.