ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ, ಹಾಸನ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ ಉಡುವಾರೆ ಇವರ ಸಾರಥ್ಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ ಮೂರರಂದು ಭಾನುವಾರ ಹಾಸನ ನಗರ ಸಾಲಗಾಮೆ ರಸ್ತೆ ಅರಳಿಕಟ್ಟೆ ಸರ್ಕಲ್ ಬಳಿ ಇರುವ ಸಂಸ್ಕೃತ ಭವನದಲ್ಲಿ ಕವಿ ಕಾವ್ಯ ಕುಂಚ ಗಾಯನ, ನೃತ್ಯ ವಿಮರ್ಶೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ಹಿರಿಯ ವಿಜ್ಞಾನಿ ಡಿಆರ್‌ಡಿಓ ಬೆಂಗಳೂರು ಸ್ವಾಮಿ ನಾಯಕ್ ಉದ್ಘಾಟಿಸುವರು. ಹಾಸನ ಆಕಾಶವಾಣಿ ನಿರ್ದೇಶಕರು ವಿಜಯ ಅಂಗಡಿಯವರಿಂದ ಪ್ರಧಾನ ಭಾಷಣ ಸಾಹಿತಿ ಗೊರೂರು ಅನಂತರಾಜು ಅವರಿಂದ ಪ್ರಾಸ್ತಾವಿಕ ಭಾಷಣ ಇರುವುದು. ಕಾರ್ಯಕ್ರಮದಲ್ಲಿ 37 ಕವಿಗಳ ಸ್ವರಚಿತ ಕವಿತೆಗಳನ್ನು ಗಾಯಕರು ರಾಗ ಸಂಯೋಜಿಸಿ ಹಾಡುವರು ಮತ್ತು ಚಿತ್ರ ಕಲಾವಿದರು ಚಿತ್ರ ಬಿಡಿಸುವರು ನಂತರ 9 ವಿಮರ್ಶಕರು ತಲಾ ನಾಲ್ಕು ಕವಿತೆ, ಗಾಯನ ಚಿತ್ರಗಳ ಕುರಿತಾಗಿ ವಿಮರ್ಶೆ ಮಾಡುವರು. ಈ ನಡುವಿನಲ್ಲಿ ಭರತನಾಟ್ಯ ಕಲಾವಿದೆಯರಿಂದ ನೃತ್ಯ ಪ್ರದರ್ಶನ ಇರುವುದು. ಕಾರ್ಯಕ್ರಮದಲ್ಲಿ 25ಕ್ಕೂ ಹೆಚ್ಚು ಗಾಯಕರು ಚಿತ್ರ ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸುತ್ತಿರುವರು.