ಸಿಂದಗಿ: ಸೈಬರ್ ವಂಚನೆಯ ಕಥಾ ಹಂದರವನ್ನು ಹೆಣೆದು ಢಣ ಢಣ ಕಾಂಚಾಣ ವೆಬ್ ಸೀರಿಸ್ ರಚಿಸಿದ್ದಾರೆ. ಬಹುತೇಕ ವಿಜಯಪುರ ಜಿಲ್ಲೆ ಹಾಗೂ ಗ್ರಾಮೀಣ ಭಾಗದಲ್ಲಿ ಶೂಟಿಂಗ್ ಮಾಡಲಾಗಿದ್ದು. ಇಡೀ ವೆಬ್ ಸೀರಿಸ್ ಉತ್ತರ ಕರ್ನಾಟಕ ಭಾಷೆಯನ್ನು ಒಳಗೊಂಡಿದೆ. ಉತ್ತರ ಕರ್ನಾಟಕದ ಕಲಾವಿದರ ನಟನೆಯನ್ನು ಉತ್ತರ ಕರ್ನಾಟಕದ ಸೊಗಡಿನಲ್ಲಿಯೇ ನೋಡಬಹುದಾಗಿದೆ ಎಂದು ನಿರ್ಮಾಪಕ ಗುರುರಾಜ ಮಠ ನಿರ್ದೇಶಕರಾದ ರಘುಚಂದ್ರ ಬಿರಾದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೈಬರ್ ಕ್ರೈಂ ವಂಚನೆ ಆಧಾರಿತ ಢಣ ಢಣ ಕಾಂಚಾಣ ವೆಬ್ ಸಿರೀಸ್‌ನ ಬಿಡುಗಡೆ ಕುರಿತು ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನುದ್ದೇಶಿಯಲ್ಲಿ ಮಾತನಾಡಿ, ಶಿವು ಕುಂಬಾರ, ಶೃತಿ ಪೂಜಾರ, ಸಂತೋಷ ಉಪ್ಪಿನ, ಯಶವಂತ ಕೊಚಬಾಳ, ಪ್ರವೀಣ ಬಿರಾದಾರ ಈ ೬ ಜನ ಕಲಾವಿದರು ಮುಖ್ಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ೭ ಎಪಿಸೋಡ್‌ಗಳು ಓಟಿಟಿಯ ಮೂಲಕ ತೆರೆಗೆ ಬರಲಿದೆ ಎಂದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರದಂದು ಸೈಬರ್ ಕ್ರೈಂ ವಂಚನೆ ಆಧಾರಿತ ಢಣ ಢಣ ಕಾಂಚಾಣ ವೆಬ್ ಸೀರಿಸ್‌ನ ಪೋಸ್ಟರ್‌ನ್ನು ಪ್ರಶಾಂತ ಕದ್ದರಕಿಯವರು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಕಲಾವಿದ ಸಂತೋಷ ಉಪ್ಪಿನ ನಿರ್ದೇಶಕ ರಘುಚಂದ್ರ ಬಿರಾದಾರರವರ ಉತ್ತರ ಕರ್ನಾಟಕದ ಶೈಲಿಯ ನಿರ್ದೇಶನವು ವಿಭಿನ್ನವಾಗಿ ಮೂಡಿಬಂದಿದೆ. ಈ ಭಾಗದ ಕಲಾವಿದರಿಗೆ ಈ ವೆಬ್ ಸಿರೀಸ್ ಮುಖ್ಯ ವೇದಿಕೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಭೋಜರಾಜ ದೇಸಾಯಿ, ಪ್ರಶಾಂತ ಕದ್ದರಕಿ, ನಟ ಶಿವು ಕುಂಬಾರ, ನಟ ಸಂತೋಷ ಉಪ್ಪಿನ, ರಂಗಭೂಮಿ ಕಲಾವಿದ ರಂಗಾಯಣ ನಾಗರಾಜ ಹರನೂರ ಇದ್ದರು.