*ರಕ್ಷಾಬಂಧನ*
- Advertisement -
ಅಣ್ಣ-ತಂಗಿಯರ ಅನುಬಂಧ
ಜೀವ ಜೀವದ ಭಾವಾನುಬಂಧ
ಅದುವೇ ಈ ರಕ್ಷಾಬಂಧನ
ಆರತಿಯ ಬೆಳಗಿ ಹರಸುವರು
ಸದಾ ನಮ್ಮಿಂದ ರಕ್ಷಣೆಯ ಬೇಡುವರು
ನಮ್ಮ ಪ್ರೀತಿಯ ಸಹೋದರಿಯರು
ಪ್ರೀತಿಯ ಉಡುಗೊರೆಯ ಪಡೆಯುತಾ
ಸದಾ ರಕ್ಷಣೆಯ ವರವ ಬೇಡುತಾ
ಹರಸುವರು ಅಣ್ಣನ ಜೀವನ ಬದುಕುತಾ
- Advertisement -
ಕಷ್ಟ-ಸುಖಗಳನು ಹಂಚಿಕೊಳ್ಳುತಾ
ಸದಾ ಒಳಿತನ್ನೇ ಬಯಸುತಾ
ಬೆಳಗುವರು ಸಹೋದರರ ಬಾಳನು ನಲಿಯುತಾ
ವರ್ಷಕ್ಕೊಮ್ಮೆ ಬರುವ ಈ ರಕ್ಷಾಬಂಧನ
ಸಹೋದರ ಸಂಬಂಧದ ಬಿಗಿಬಂಧನ
ಬಾಂಧವ್ಯ ಗಟ್ಟಿಗೊಳಿಸುವ ಪ್ರೇಮ ಬಂಧನ
ಶಿವಕುಮಾರ ಕೋಡಿಹಾಳ
ಮೂಡಲಗಿ