ಈಗಿನ ಕಾಲದಲ್ಲಿ ಸುಖ ನಿದ್ರೆ ಮಾಡುವವರ ಸಂಖ್ಯೆ ತುಂಬಾ ಕಡಿಮೆ ಎಂದು ಹೇಳಬಹುದು. ಹಾಗೆ ಕಡಿಮೆ ನಿದ್ದೆ ಮಾಡುವ ಜನರ ಸಂಖ್ಯೆ ತುಂಬಾ ಜಾಸ್ತಿ ಎಂದು ಹೇಳಬಹುದು. ಕೆಲವರಿಗೆ ಮಂಚದ ಮೇಲೆ ಮಲಗಿದ ತಕ್ಷಣವೆ ನಿದ್ದೆ ಬರುತ್ತದೆ. ಇನ್ನೂ ಕೆಲವರಿಗೆ ಎಷ್ಟೇ ಒದ್ದಾಡಿದರೂ ಕೂಡ ಬೇಗ ನಿದ್ದೆ ಬರುವುದಿಲ್ಲ. ಇದಕ್ಕೆ ಕಾರಣಗಳು ಸುಮಾರು ಇವೆ ಎಂದು ಹೇಳಬಹುದು.
ವಾರದಲ್ಲಿ 5 ದಿನಗಳು ಪೂರ್ತಿ ಕೆಲಸಗಳನ್ನು ಮಾಡಿ ವಾರದ ಅಂತ್ಯ ಅಂದರೆ ಶನಿವಾರ ಭಾನುವಾರ ದಿನದಂದು ಪಾರ್ಟಿ ಪಬ್ ಸಿನಿಮಾ ನೋಡುವುದು ಇನ್ನಿತರ ಎಲ್ಲಾ ಕೆಲಸಗಳನ್ನು ಆ 2 ದಿನಗಳಲ್ಲಿ ಮಾಡಿ ಮುಗಿಸುತ್ತಾರೆ. ಇದರಿಂದ ಇಂತಹವರು ಕಡಿಮೆ ನಿದ್ದೆ ಮಾಡುತ್ತಾರೆ.ಕೆಲವರು ನಿದ್ದೆ ಮಾಡಿದರೆ ಸಮಯ ವ್ಯರ್ಥವಾಗುತ್ತದೆ ಎಂದು ಅಂದುಕೊಂಡಿದ್ದಾರೆ. ಆದರೆ ಇದು ತಪ್ಪು ಜಪಾನ್ ನಲ್ಲಿ ವಯಸ್ಕರು 6 ಗಂಟೆ ಕಾಲ ಮಾತ್ರ ನಿದ್ದೆ ಮಾಡುತ್ತಾರೆ, ನಮ್ಮ ಭಾರತದಲ್ಲಿ 6 ಗಂಟೆ 20 ನಿಮಿಷಗಳ ಕಾಲ ನಿದ್ದೆ ಮಾಡುತ್ತಾರೆ, ಹಾಗೆ ಪಾಕಿಸ್ತಾನದಲ್ಲಿ 8 ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ತಜ್ಞರು ಹೇಳಿದ ಪ್ರಕಾರ ವಯಸ್ಕರು 7.5 ಗಂಟೆಗಳ ಕಾಲ ಕನಿಷ್ಠ ನಿದ್ದೆ ಮಾಡಬೇಕು ಎಂದು ಹೇಳಿದ್ದಾರೆ. ಜೀವನದಲ್ಲಿ ಯಶಸ್ವಿಯನ್ನು ಸಾಧಿಸಲು ಪರೀಕ್ಷೆಯಲ್ಲಿ ಚೆನ್ನಾಗಿ ಓದಿ ಪಾಸಾಗಲು ನಿದ್ರೆ ಕೆಟ್ಟರೆ ಮಾತ್ರ ಆಗುತ್ತದೆ ಎಂದು ಅಂದುಕೊಂಡಿದ್ದಾರೆ.
ಆದರೆ ಇದು ತಪ್ಪು ಕೆಲವರಿಗೆ ನಿನ್ನೆ ಕೇಳಿಸಿಕೊಂಡಿರುವ ಪಾಠ ಈ ದಿನ ನೆನಪಿರುವುದಿಲ್ಲ. ಇದಕ್ಕೆ ಕಾರಣ ಅವರು ಕಡಿಮೆ ನಿದ್ದೆ ಮಾಡುವುದರಿಂದ. ಇನ್ನೂ ಕೆಲವರಿಗೆ ಮಧ್ಯಾಹ್ನ ಮಲಗಿಕೊಂಡರೆ ಒಳ್ಳೆಯದಾ ಅಥವಾ ರಾತ್ರಿ ಮಲಗಿಕೊಂಡರೆ ಒಳ್ಳೆಯದಾ ಎನ್ನುವ ಪ್ರಶ್ನೆಯು ಇರುತ್ತದೆ. ಇದಕ್ಕೆ ಉತ್ತರ ರಾತ್ರಿ ಮಲಗಿದರೆ ತುಂಬಾ ಉತ್ತಮ. ರಾತ್ರಿ ಊಟ ಮಾಡಿದ ಮೇಲೆ 8 ರಿಂದ 12 ಗಂಟೆಗಳ ಒಳಗೆ ಮಲಗುವ ಕೋಣೆಗೆ ಹೋಗಬೇಕು. ಬೇಗ ಮಲಗಿ ಬೇಗ ಎದ್ದರೆ ಬೆಳಿಗ್ಗೆ ಸಿಗುವ ವಿಟಮಿನ್ ಡಿ ಅಂಶ ದೇಹಕ್ಕೆ ದೊರೆತು ದೇಹವನ್ನು ಆರೋಗ್ಯವಾಗಿ ಇಟ್ಟಿರುತ್ತದೆ.ಇನ್ನೂ ನಮ್ಮ ಪೂರ್ವಜರು ಆಗಿನ ಕಾಲದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ತುಂಬಾ ಕಷ್ಟ. ಏಕೆಂದರೆ ಈಗ ಕೆಲವರು ಶಿಫ್ಟ್ ನಲ್ಲಿ ಕೆಲಸ ಮಾಡುವುದರಿಂದ ಈ ಸಮಯವನ್ನು ಪಾಲಿಸಲು ಕಷ್ಟವಾಗುತ್ತದೆ. ಒಂದು ವೇಳೆ ನೀವು ಮಲಗುವ ಸಮಯ ಮಧ್ಯರಾತ್ರಿ ಆಗಿದ್ದರೆ ನಿಮ್ಮ ಮೆದುಳು ಫ್ರೆಶ್ ಆಗಿ ಇರುವುದಿಲ್ಲ ಹಾಗೆ ಒತ್ತಡಗಳು ಕೂಡ ಜಾಸ್ತಿಯಾಗುತ್ತದೆ. ತಜ್ಞರು ಹೇಳಿದ ಪ್ರಕಾರ ಒಂದು ವೇಳೆ ನೀವು ರಾತ್ರಿ 2 ಗಂಟೆಗೆ ಮಲಗಿದರೂ ಕನಿಷ್ಠ 7 ಗಂಟೆಗಳ ಕಾಲ ಮಲಗಲೇಬೇಕು. ಇದರಿಂದ ನಿಮಗೆ ಏನು ತಿಳಿಯಿತೋ ಅಂದರೆ ಯಾವಾಗಲೇ ನೀವು ಮಲಗಿ 7 ಗಂಟೆಗಳ ಕಾಲ ಕನಿಷ್ಠ ನಿದ್ದೆ ಮಾಡಲೇಬೇಕು. ಇದರಿಂದ ಯಾವ ಆರೋಗ್ಯದ ತೊಂದರೆಗಳು ಕೂಡ ಬರುವುದಿಲ್ಲ.
ಇನ್ನು ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದರೆ ಹೃದಯಕ್ಕೆ ಸಂಬಂಧಿಸಿದ ತೊಂದರೆಗಳು, ಮಧುಮೇಹ, ಅಧಿಕ ರಕ್ತದೊತ್ತಡ, ಸ್ತನ ಕ್ಯಾನ್ಸರ್, ಆತಂಕ, ಮಾನಸಿಕ ಖಿನ್ನತೆಗಳು, ದೇಹದ ಅಧಿಕ ತೂಕ ಇನ್ನಿತರ ಸಮಸ್ಯೆಗಳು ಕಾಡುತ್ತವೆ. 1880 ರ ಸಮಯದವರೆಗೂ ಎಲ್ಲರೂ ಕೂಡ ಹತ್ತು ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದರು. ಆದರೆ ಇದಾದ ಮೇಲೆ ಮೊಬೈಲ್ ಟಿವಿ ಲ್ಯಾಪ್ ಟಾಪ್ ಕಂಪ್ಯೂಟರ್ ಬಂದಿರುವುದರಿಂದ ಅದರ ಮೇಲೆ ಹೆಚ್ಚು ಗಮನವನ್ನು ಇಡುತ್ತಿದ್ದಾರೆ. ಅದನ್ನು ಉಪಯೋಗಿಸಿಯೇ ಕೆಲವರು ಮಲಗಿಕೊಳ್ಳುವ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ.ಇವುಗಳನ್ನು ಉಪಯೋಗಿಸಿದರೆ ಕಾರ್ಟಿಸೋಲ್ ಎನ್ನುವುದು ದೇಹದಲ್ಲಿ ತುಂಬ ಉತ್ಪತ್ತಿಯಾಗುತ್ತದೆ. ಇದರಿಂದ ನಿದ್ದೆ ಕಡಿಮೆಯಾಗುತ್ತದೆ. ಕೆಲ ಜನರು ನಿದ್ದೆ ಬರಬೇಕು ಎಂದು ಸಾಕಷ್ಟು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಇದು ಅಡ್ಡಪರಿಣಾಮಗಳನ್ನು ತರುತ್ತದೆ ಹೊರತು ಒಳ್ಳೆಯ ನಿದ್ದೆಯನ್ನು ಕೊಡುವುದಿಲ್ಲ. ಹಾಗಾಗಿ ಇನ್ನು ಮುಂದೆ ನೀವು ಯಾವಾಗಲೇ ಮಲಗಿ ಕನಿಷ್ಠ 7 ಗಂಟೆಗಳ ಕಾಲ ರಾತ್ರಿ ಹೊತ್ತು ನಿದ್ದೆ ಮಾಡಲೇಬೇಕು