Monthly Archives: May, 2021
ಲೇಖನ
ಹೃದಯವಂತರಿಗೆ ಬೆಣ್ಣೆ ಬುದ್ಧಿವಂತರಿಗೆ ಕೇವಲ ಮಜ್ಜಿಗೆ
ಇತ್ತೀಚಿನ ದಿನಮಾನಗಳಲ್ಲಿ ಒಳ್ಳೆಯವರು ಒಳ್ಳೆಯತನ ಅಂದರೆ ಮೂಗು ಮುರಿಯುವದೇ ಹೆಚ್ಚಾಗಿದೆ. ‘ಒಳ್ಳೆಯತನಕ್ಕೆ ಬೆಲೆ ಇಲ್ಲ.ಒಳ್ಳೆಯವರಿಗೆ ಕಷ್ಟಗಳೇ ಹೆಚ್ಚು. ಒಳ್ಳೆಯವರಿಗೆ ಸುಖವಿಲ್ಲ.’ ಎಂಬ ಮಾತು ಎಲ್ಲೆಲ್ಲೂ ಕಿವಿಗೆ ಬೀಳುತ್ತಿದೆ. ಶಾಲೆ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಹೇಳಿ ಕೊಡುವ ಹೃದಯ ವೈಶಾಲ್ಯ ಮತ್ತು ಮಾನವ ಸಂಬಂಧಗಳ ಕುರಿತಾಗಿ ಹೇಳಿ ಕೊಡುವ ನೀತಿ ಪಾಠಗಳು ಕೇವಲ ಅಂಕಕ್ಕೆ ಮಾತ್ರ ಸೀಮಿತ...
ಲೇಖನ
ಕೃಷಿ ಮತ್ತು ವಾಣಿಜ್ಯ ಕಾಯಕಗಳ ಸಾಕಾರ ಮೂರ್ತಿ ಬಸರೀಗಿಡದ ವೀರಪ್ಪನವರು
1946 ರ ಆಗಸ್ಟ 10 ಮತ್ತು 11 ರಂದು ಆದವಾನಿಯಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.ಆಗ ಗುತ್ತಿಯಲ್ಲಿ ಜಿಲ್ಲಾ ಮುನಿಸೀಫ್ ಆಗಿದ್ದ ಟಿ.ಎಚ್.ಎಂ.ಸದಾಶಿವಯ್ಯನವರು ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆ ನಂತರ ಅವರು 1949 ರಲ್ಲಿ ಕರ್ನಾಟಕದ ಗಡಿ ಗೆರೆಗಳು(ಪೂರ್ವಾರ್ಧ) ಎಂಬ ಕೃತಿಯ ಮೂಲಕ ಕರ್ನಾಟಕದ ಗಡಿಗಳನ್ನು ನಿರ್ಣಯಿಸುವ ಸಾರ್ಥಕ ಪ್ರಯತ್ನ ಮಾಡಿದ್ದರು. ಶಿವಸುತ...
ಕವನ
ಕವನಗಳು
ನಿನದೆನ್ನುವುದೇನಿಲ್ಲ
ಈ ನಿಸರ್ಗ ನಿರ್ಮಿತ ನೋಡೆಲ್ಲ ಮನುಜ ನಿನದೆನ್ನುವದೇನಿಲ್ಲ ನಿಜ,
ಬಂದು ಹೋಗುವ ಮೂರು ದಿನದ ಸಂತೆಯಲ್ಲಿ ನಿಂತು ಯಜಮಾನನನ್ನು ಮರೆತು
ತಿರುಗುವ ತಿಳಿಗೇಡಿಯಾದಿ ನಿಜ,
ಏನೆಲ್ಲಾ ನನ್ನದೆಂದು ಬೀಗುತ್ತಿರುವ ನೀನು ಇರುವ ನಿಸರ್ಗವನು ಹಾಗೆ ಇರಲು ಬಿಡಲು ಕಲಿಯಲಿಲ್ಲ ನಿಜ
ನಿಜವರಿಯದ ನಿನಗೆ ನಿಸರ್ಗ ನಿಡುತ್ತಿರುವ ಈ ತೊಡಕುಗಳಿಂದಾದರು ತಿಳಿಯದಿದ್ದರೆ ಕರೋನಾಗಿಂತಲೂ ಅಪಾಯದ ನಿರೀಕ್ಷೆ ನಿನ್ನದು ನಿಜ.....ಮೈಮರೆಯದಿರು
ಮನೆಯೊಳಗಿರದೆ ಮೈಮರೆತು ಬರುವರಂಗಳಕೆ...
ಲೇಖನ
ಪ್ರಜಾಪ್ರತಿನಿಧಿ ಶರಣರು (ವಿಷಯ-ಬಸವಾದಿ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು)
"ಬಸವಾದಿ ಶರಣರಿಂ
ಪಸರಿಸಿಹ ವಚನಗಳು
ಹಸನಾಗಿ ಮಾಡುವವು ಬಾಳಭವಣೆ
ಕೃಶವಾದ ಬದುಕಿನಲಿ
ಯಶಪಡೆಯಲೋಸುಗವೆ
ತುಸುಪಠಿಸು ವಚನಗಳ ಸತ್ಯಪ್ರಿಯೆ//"
ಎಂಬ ಆಧುನಿಕ ವಚನದಂತೆ ಬಸವಾದಿ ಶರಣರ ವಚನಗಳು ಅಂದಿನ ಕಾಲಘಟ್ಟದಲ್ಲಿ ಜನಸಾಮಾನ್ಯರ ಮನೆ ಮನದಲಿ ಜ್ಞಾನ ದೀವಿಗೆ ಹೊತ್ತಿಸಿ ಅವರು ಇದ್ದುದರಲ್ಲಿಯೇ ಹಂಚಿಕೊಂಡು ಸರಳ ಜೀವನ ನಡೆಸುವ ಕಾಯಕದಲ್ಲಿ ನಿರತರಾಗಿ ಜೀವನ ನಡೆಸುವ ಪರಿಯನ್ನು ಅರುಹಿದ್ದವು, ಆದರೂ ಆ ವಚನಗಳು ಈಗಲೂ ಸಹ ನಮ್ಮ...
ಕವನ
ಕವನ: ಸ್ವಚ್ಛ ಸಮಾಜ ನಿರ್ಮಾಪಕರು..
ಸ್ವಚ್ಛ ಸಮಾಜ ನಿರ್ಮಾಪಕರು..
ಚಳಿ ಇರಲಿ, ಬಿಸಿಲಿರಲಿ,
ಮಳೆ 'ಧೋ ಎಂದು ಸುರಿಯುತಿರಲಿ,
ನಿಮ್ಮ ಸೇವೆಯೇ ನಮ್ಮ ಧರ್ಮ,
ಬಸವಣ್ಣನ ಕಾಯಕ ತತ್ವದಲಿ
ಅನುದಿನ ಬಾಳುತಿಹೆವು ,
ಸ್ವಚ್ಛ ಸಮಾಜ ನಿರ್ಮಾತೃಗಳು
ನಾವು ಪೌರಕಾರ್ಮಿಕರು...
ಕೆಟ್ಟುನಿಂತ ಒಳಚರಂಡಿಗಳ,
ಅನೈರ್ಮಲ್ಯದ ರಸ್ತೆಗಳ ದುರಸ್ತಿ ಗೊಳಿಸಿ,
ಬೆಳೆದುನಿಂತ ಗಿಡಗಂಟಿಗಳ ಕಿತ್ತು,
ಆರೋಗ್ಯಕರ ಸಮಾಜ ನಿರ್ಮಾಣ ಮಾಡುವೆವು
ಸಮಾಜದ ಒಳಿತಿಗಾಗಿ
ನಮ್ಮ ಕೈಕಾಲುಗಳ ಕೊಳೆ ಮಾಡಿಕೊಳ್ಳುವೆವು..
ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರಾಣವನೇ ಮೀಸಲಿಟ್ಟಿಹೆವು ,
ನಾವು ಪೌರಕಾರ್ಮಿಕರು...
ತಲೆತಲಾಂತರದಿಂದ ಸ್ವಚ್ಛ ಸಮಾಜಕೆ
ಅನುದಿನ...
ಸುದ್ದಿಗಳು
ಸೋಂಕಿತರಿಗೆ ನೆರವಾದ ಜನಹಿತ ಟ್ರಸ್ಟ್
ನಿತ್ಯವೂ ಕುಲಗೋಡ ಕೋವಿಡ್ ಕೇಂದ್ರದ ರೋಗಿಗಳಿಗೆ ಊಟ ಉಪಾಹಾರ
ಕುಲಗೋಡ: ಕೋವಿಡ್ ಸೋಂಕಿತರು ಇದ್ದರೆ ಅದೇ ಕುಟುಂಬದ ಸದಸ್ಯರು ಊಟ ಉಪಾಹಾರವನ್ನು ಆಸ್ಪತ್ರೆ ಬಾಗಿಲಲ್ಲಿ ಇಟ್ಟು ಹೋಗುತ್ತಿರುವ ಹಾಗೂ ಮನೆಯಲ್ಲಿ ಸೋಂಕಿತರಿದ್ದರೆ ಅವರ ರೂಮ್ ಮುಂದೆ ಊಟ ಉಪಾಹಾರ ಇಡುತ್ತಿರುವ ಇಂದಿನ ದಿನಗಳಲ್ಲಿ ಮುಧೋಳ ಜನ ಹಿತ ಟ್ರಸ್ಟ್ ಸೋಂಕಿತ ರ ಸ್ನೇಹಿಯಾಗಿ ಅವರು ಚಿಕಿತ್ಸೆ...
ಲೇಖನ
ನಾನಿವತ್ತು ಓದಿದ ಪುಸ್ತಕ “ಪ್ಯಾರಿ ಪದ್ಯ”
ಎ.ಎಸ್.ಮಕಾನದಾರರು ಉತ್ತರ ಕರ್ನಾಕಟದಲ್ಲಿ ಅಪಾರ ಪ್ರೀತಿ ಗೌರವಕ್ಕೆ ಕಾರಣರಾದ ಸಾಹಿತಿಗಳ ಒಡನಾಡಿಗಳು.ಸೃಜನಶೀಲ ಸಾಹಿತಿಗಳಾಗಿ,ವಿಮರ್ಶಕರಾಗಿ,ಚಿಂತಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಸರಳ ಸಜ್ಜನಿಕೆಯ ವ್ಯಕ್ತಿಗಳು.ವೃತ್ತಿಯಿಂದ ಕೌಟುಂಬಿಕ ನ್ಯಾಯಾಲಯದ ಪ್ರಥಮ ದರ್ಜೆ ಸಹಾಯಕರಾಗಿ(ಗದಗ) ಸೇವೆ ಸಲ್ಲಿಸುತ್ತಾ,ಪ್ರವೃತ್ತಿಯಲ್ಲಿ ಉತ್ತಮ ಬರಹದ ಹತ್ತಾರು ಪುಸ್ತಕಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಎ.ಎಸ್.ಮಕಾನದಾರರು,ಕೇವಲ ಸಾಹಿತಿಗಳಷ್ಟೇ ಅಲ್ಲ.ಸ್ವತಹಃ ನಿರಂತರ ಪ್ರಕಾಶನದ ಸ್ಥಾಪಕರು.ಈ ನಿರಂತರ ಪ್ರಕಾಶನಕ್ಕೂ ಕವಿ...
ಲೇಖನ
ಪೋಷಕರೆ, ಮಕ್ಕಳ ಭಯ ತೊಡೆದು ಹಾಕಿ
ಆತ್ಮೀಯ ಪೋಷಕರೆ, ಇತ್ತ ಸ್ವಲ್ಪ ಕೇಳಿ ಕೋರೋಣ ಎಂಬ ಖಾಯಿಲೆಯು ಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿದೆ ಇದರ ನಡುವೆ ನಮ್ಮ ಜೀವನ ಸಂತಸಮಯವಾಗಿಯೇ ಇಡಲು ಶತ ಪ್ರಯತ್ನ ಮಾಡಲೇಬೇಕಿದೆ. ನಮಗಾಗಿ ಅಲ್ಲ ನಮ್ಮ ಮುಂದಿನ ಉಜ್ವಲ ಭವಿಷ್ಯ ಕ್ಕಾಗಿ....ಹೌದು, ನಾನು ಹೇಳಲು ಹೊರಟಿರುವ ಮಾತುಗಳು ಮಕ್ಕಳ ಸಲವಾಗಿಯೇ ಆಗಿವೆ.ದಯವಿಟ್ಟು ಮಕ್ಕಳ ಮುಂದೆ ನಕಾರಾತ್ಮಕ ಯೋಚನೆಗಳು...
ಕವನ
ಕವನ: ಹಸಿರು (ಉಸಿರು ) ರಕ್ಷಕರು.
ಹಸಿರು (ಉಸಿರು ) ರಕ್ಷಕರು.
ನಮ್ಮ ಜೀವ ಪಣಕ್ಕಿಟ್ಟು ,
ನಿಮಗೆ ಹಸಿರು-ಉಸಿರು
ನೀಡುವವರು ನಾವು..
ವಿಶ್ವ ಹಸಿರಾಗಲು ,ಜೀವನ ಬೆಳಕಾಗಲು
ಭೂಮಿ ತಂಪಾಗಲು, ಬಾಳು ಇಂಪಾಗಲು
ದಿನ-ರಾತ್ರಿ ಎಲ್ಲವ ತ್ಯಜಿಸಿ ಶ್ರಮಿಸುವವರು ನಾವು,
ನಾವು ಅರಣ್ಯ ರಕ್ಷಕರು....
ಮರ-ಗಿಡಗಳೇ ನಮಗೆ ಕುಟುಂಬ ,
ವನ್ಯಪ್ರಾಣಿಗಳೆ ನಮಗೆ ಬಂಧುಗಳು ,
ಕೋಗಿಲೆಗಳ ಕುಹೂ-ಕುಹೂಗಾನ
ನಮಗೆ ಸುಮಧುರ ಸಂಗೀತ,
ನವಿಲುಗಳ ನರ್ತನವೇ
ನಮಗೆ ಜಗತ್ಪ್ರಸಿದ್ಧ ನಾಟ್ಯ,
ಮೊಲ,ಜಿಂಕೆಗಳ ಶರವೇಗದ ಓಟವೇ ..
ನಮ್ಮ ಉತ್ಸಾಹದ ಬದುಕಿಗೆ ಸ್ಪೂರ್ತಿ.........
ಒಮ್ಮೆ...
ಕವನ
ನಿನ್ನದೆಂತಹ ಪ್ರೀತಿ ಅಪ್ಪ
ನಿನ್ನದೆಂತಹ ಪ್ರೀತಿ ಅಪ್ಪ
ಅಂತಹ ಮಮತೆ ಬೇರೊಬ್ಬರಲಿಲ್ಲ
ಬೇರೆಯವರಲ್ಲಿ ಆ ಪ್ರೀತಿ ಕಾಣಲಿಲ್ಲ
ಜಗದಲಿ ಹುಡುಕಿದರೂ ಸಿಗಲಿಲ್ಲ
ನಿನ್ನದೆಂತಹ ಪ್ರೀತಿ ಅಪ್ಪ
ದು:ಖ ನುಂಗಿ ಸಂತಸ ತಂದೆ
ನಗು ನಗುತ ಸಾಗಿ ಬಂದೆ
ಬಾಳ ಬಂಡೆ ನಡೆಸುತ್ತ ಬಂದೆ
ನಿನ್ನದೆಂತಹ ಪ್ರೀತಿ ಅಪ್ಪ
ಹಿರಿಮಗನಿಗೆ ಅಭಿಮಾನದ ಪ್ರೀತಿ
ಕಿರಿಮಗನಿಗೆ ಕಾಳಜಿಯ ಪ್ರೀತಿ
ಮಗಳಮೇಲೋ ಪ್ರೀತಿಯೋ ಪ್ರೀತಿ
ನಿನ್ನದೆಂತಹ ಪ್ರೀತಿ ಅಪ್ಪ
ಕಂಡಕನಸೆಲ್ಲವ ಸಾಕಾರಗೊಳಿಸಿದೆ
ಬದುಕಿನ ಸಾರವನು ತಿಳಿಸಿದೆ
ಲೋಕದ ಜ್ಞಾನವ ನೀಡಿದೆ
ನಿನ್ನದೆಂತಹ ಪ್ರೀತಿ ಅಪ್ಪ
ಆಕಾಶದೆತ್ತರದಲಿ ಹುಡುಕಿದೆ
ಪಾತಾಳದಡಿಯಲಿ...
Latest News
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...



