Monthly Archives: May, 2021
ಸುದ್ದಿಗಳು
ದಿ.24 ರಿಂದ ಕ್ಲಾಸ್ ಸದುಪಯೋಗಪಡಿಸಿಕೊಳ್ಳಲು ಕರೆ
ಸಿಂದಗಿ: 2020-21ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸುಧಾರಿಸುವ ನಿಟ್ಟಿನಲ್ಲಿ ದಿ. 24ರಿಂದ ಪರೀಕ್ಷೆ ನಡೆಯುವ ವರೆಗೂ ಪ್ರತಿಯೊಂದು ವಿಷಯದ ಕುರಿತು ಒಂದೊಂದು ದಿನದಂತೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಕ್ಲಾಸ್‍ಗಳಲ್ಲಿ ತಿಳಿಸಿಕೊಡಲಾಗುತ್ತಿದೆ ಕಾರಣ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ.ವಾಯ್ ದೇವಣಗಾಂವ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ ಅವರು, ಒಟ್ಟು...
ಲೇಖನ
ಹೋರಾಟಗಾರನಾಗಿಯೇ ಉಳಿದ ಬಾಬಾಗೌಡರಿಗೆ ವೃತ್ತಿನಿರತ ರಾಜಕಾರಣಿಯಾಗಿ ಪರಿವರ್ತನೆಯಾಗಲು ಕೊನೆಯವರೆಗೂ ಸಾಧ್ಯವಾಗಲಿಲ್ಲ!
ನೆಲ, ಜಲ, ಭಾಷೆ ಮತ್ತು ರೈತ ಪರ ಹೋರಾಟಗಳನ್ನು ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ರಾಜಕೀಯದಲ್ಲಿ ಮೇಲೇರಿ ಆಮೇಲೆ ಏರಿದ ಏಣಿಯನ್ನೇ ಒದ್ದು ವೃತ್ತಿನಿರತ ರಾಜಕಾರಣಿಯಾಗಿ ಪರಿವರ್ತನೆಗೊಂಡವರಿದ್ದಾರೆ. ಸಂ ಸದರು ಅಥವಾ ಶಾಸಕರಾಗಿ ಆಯ್ಕೆಯಾಗಿ ಮಂತ್ರಿ ಪಟ್ಟ ಸಿಕ್ಕ ನಂತರ ತಾವು ನಡೆಸಿದ ಹೋರಾಟಗಳ ಉದ್ದೇಶಗಳನ್ನೇ ಮರೆತವರಿದ್ದಾರೆ.ಆದರೆ ಇದೇ ಮೇ 21ರಂದು ಇಹಲೋಕ ಯಾತ್ರೆ ಮುಗಿಸಿದ ರೈತ...
ಕವನ
ಕವನ: ಚನ್ನಮ್ಮ ಸರ್ಕಲ್
ಚನ್ನಮ್ಮ ಸರ್ಕಲ್
ನಮ್ಮ ಬೆಳಗಾವಿಯ
ಹೃದಯ....!!
ಗಿಜುಗುಡುವ ಕಾರಸ್ಥಾನ
ಇತಿಹಾಸ ರಾಜಕೀಯ
ಹೋರಾಟ ಹರತಾಳಗಳ
ಲಬಡಬ್ ಬಡಿತ
ನಮ್ಮೆಲ್ಲರ ಮಿಡಿತ....!
ಹೊಸಬರಿಗೊಂದು
ಸಾಂಕೇತಿಕ ಕುರುಹು
ನಾಲ್ಕು ದಿಕ್ಕುಗಳಿಗೂ
ವಿಸ್ತಾರವಾಗಿ ಚಾಚಿಕೊಂಡರು
ತನ್ನ ಸುಳಿಯೊಳಗೆ ಸುತ್ತಿಕೊಳ್ಳುವ ವರ್ತಳ....!!
ಖಡ್ಗ ಹಿಡಿದು
ಕುದುರೆಯೇರಿ
ಯುದ್ದಕ್ಕೆ ಹೊರಟ
ಚೆನ್ನಮ್ಮ ಸದ್ದುಗದ್ದಲಿನೊಳಗೆ
ಮರತೆಬಿಟ್ಟಿದ್ದಾಳೆ....!!
ಸಿಗ್ನಲ್ ನ ಕೆಂಪು ಹಸಿರು
ದೀಪಗಳ ನಡುವೆ...!
ಆಟೋ, ಬಸ್ಸು ಕಾರು,ಮೊಟರ್ ಸೈಕಲ್ ಉಗುಳುವ ಹೊಗೆಯ
ಮಾಲಿನ್ಯ ನಡುವೆ....!
ರಾಜ್ಯೋತ್ಸವ, ಗಣೇಶೋತ್ಸವದ
ಡಾಲ್ಬಿ ಗಳ ಸಂಗೀತದ
ಅಬ್ಬರಕೆ ಕುಣಿವ
ಪಡ್ಡೆ ಹುಡುಗರ ಅಭಿಮಾನದ ನಡುವೆ....!
ಆಗೊಮ್ಮೆ ಈಗೊಮ್ಮೆ ಹಾಕುವ
ಮಾಲೆಯ ಸುಗಂಧದ ನಡುವೆ...!
ಝಗಮಗಿಸುವ ದೀಪಾಲಂಕಾರದ
ಹೊನಲು...
ಸಿನಿಮಾ
ಸ್ಟಾರ್ ನಟನ ಸಿನೆಮಾದಲ್ಲಿ ಮೂಡಲಗಿ ಕಲಾವಿದ
ಮೂಡಲಗಿ - ಹೌದು ಈಗಾಗಲೇ ಸುಮಾರು ಆರೇಳು ಚಿತ್ರಗಳಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿರುವ ಮೂಡಲಗಿ ಕಲಾವಿದ ಮಂಜುನಾಥ ರೇಳೆಕರ ಕನ್ನಡದ ಸ್ಟಾರ್ ನಟರೊಬ್ಬರ ಸಿನೆಮಾಗೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಇನ್ನು ಆ ಸ್ಟಾರ್ ನಟರು ಯಾರೆಂದರೆ ಕನ್ನಡದ ಖ್ಯಾತ ನಟಿ ಪ್ರಮೀಳಾ ಜೋಷಾಯ್ ಮತ್ತು ನಟಿ ಮೇಘನಾ ರಾಜ್ ಕುಟುಂಬದವರಲ್ಲಿ ಒಬ್ಬರಾದ ನಟ...
ಸುದ್ದಿಗಳು
ಸ್ವಾರ್ಥ ರಾಜಕೀಯ ; ಆಯ್ಕೆಯಾದ ಮೇಲೆ ತಿರುಗಿ ನೋಡದ ಶಾಸಕ
ಬೀದರ - ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ಉಪಚುಣಾವಣೆ ನಡೆದ ಸಂದರ್ಭದಲ್ಲಿ ತನ್ನ ಗೆಲುವಿಗಾಗಿ ದುಡಿದ ಪಕ್ಷದ ಕಾರ್ಯಕರ್ತರೇ ಕರೋನಾ ವೈರಸ್ ಬಲಿಯಾದವರ ಕುಟುಂಬಕ್ಕೆ ಸಾಂತ್ವನ ಹೇಳದ ಬಸವಕಲ್ಯಾಣ ಶಾಸಕ.ಕ್ಷೇತ್ರದ ಇತರ ಜನರ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂಬ ಯಕ್ಷಪ್ರಶ್ನೆ ಜನರಲ್ಲಿ ಕಾಡುತ್ತಿದೆ.ಕಳೆದ ವರ್ಷ ಕರೋನಾ ವೈರಸ್ ಹತೋಟಿಗೆ ದೇಶಾದ್ಯಂತ ಮಾಡಲಾದ ಲಾಕ್...
ಕವನ
ಕವನ: ಭವಿಷ್ಯದ ಆಶಾಕಿರಣಗಳಾಗಿ…
ಭವಿಷ್ಯದ ಆಶಾಕಿರಣಗಳಾಗಿ...
ವಿಶ್ವದ ಭವಿಷ್ಯ ರೂಪಿಸುವ
ಆಶಾಕಿರಣಗಳು ನೀವು ,
ಸಾಹಿತ್ಯ, ಸಂಗೀತ,ಕ್ರೀಡೆ,
ಸಾಂಸ್ಕೃತಿಕ ಕ್ಷೇತ್ರಗಳ ಅಭ್ಯುದಯಕೆ ಗಟ್ಟಿಬೇರುಗಳು ನೀವು ,
ಸಮಾಜದ ಅಭ್ಯುದಯಕೆ ಪಥಿಕರು ನೀವು ,
ಏಕೆ ಈ ತಲ್ಲಣ,ಆತಂಕ..ಓ ಯುವ ಬಾಂಧವರೆ..,??
'ಆನೆ ನಡೆದದ್ದೇ ಹಾದಿ ' ಎಂಬಂತೆ,
ನಿಮ್ಮ ನಡೆಯೇ ನಿಮ್ಮ ಪ್ರಗತಿಗೆ ದಾರಿದೀಪ...
ಏಕೆ ನಿರಾಸೆ,ನಿಟ್ಟುಸಿರು...
ಜಗವು ನಿಮ್ಮ ಮೇಲೆ ವಿಶ್ವಾಸವಿಟ್ಟಿದೆ...
'ಏಳಿ ಎದ್ದೇಳಿ,ಗುರಿಮುಟ್ಟುವವರೆಗೂ ನಿಲ್ಲದಿರಿ '
ಸ್ವಾಮಿ ವಿವೇಕಾನಂದರ ವಾಣಿ
ನಿಮ್ಮನು ಜಾಗೃತಿಗೊಳಿಸಲಿ...
ಕ್ರೀಡೆ,ಸಂಗೀತ,ಸಾಹಿತ್ಯ, ವಿಜ್ಞಾನಗಳತ್ತ
ನೀವು...
ಲೇಖನ
“ಪರಿಸರ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದ” ಸುಂದರ್ ಲಾಲ್ ಬಹುಗುಣ
ಚಿಪ್ಕೋ ಮತ್ತು ಅಪ್ಪಿಕೋ ಚಳುವಳಿಯ ಹರಿಕಾರ ಎಂದೇ ಗುರ್ತಿಸಲ್ಪಟ್ಟಿರುವ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ ರವರು ತಮ್ಮ ಇಡೀ ಜೀವನವನ್ನೇ ಪರಿಸರದ ರಕ್ಷ ಣೆಗಾಗಿ ಮುಡಿಪಾಗಿಟ್ಟಿದ್ದ ಪರಿಸರ ಪ್ರೇಮಿಯ ಅಗಲುವಿಕೆಯಿಂದ ನಮ್ಮೆಲ್ಲರಲ್ಲಿ ಅನಾಥ ಪ್ರಜ್ಞೆ ಕಾಡುತ್ತಿದೆ.ಇಡೀ ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಬುದ್ಧನ ಆದರ್ಶ ಮಹಾತ್ಮಗಾಂಧೀಜಿಯವರ ಅಹಿಂಸಾತ್ಮಕ ನಿಲುವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಸುಂದರ್...
ಸಂಪಾದಕೀಯ
ಮರುಗಿದ ಜೀವಿಯ ದುಡ್ಡು ಸುಖ ನೀಡೀತೆ?
ಈ ಮಾತು ಈಗ ನಿಜವಾಗುತ್ತಿದೆ. ಯಾರನ್ನು ನಾವು ಇಷ್ಟು ಶತಮಾನಗಳ ಕಾಲ ರಕ್ಷಕ ದೇವರೆಂದುಕೊಂಡು ಬಂದಿದ್ದೆವೋ ಅವರೆಲ್ಲ ಈಗ ಈ ಕೊರೋನಾ ಕಾಲದಲ್ಲಿ ಕೇವಲ ಸೈನಿಕರಾಗಿದ್ದಾರಷ್ಟೆ ಆದರೆ ರಕ್ಷಣೆಯ ಕೆಲಸ ಅವರಿಂದ ಆಗುತ್ತಿಲ್ಲ. ಈ ಮಾತು ಯಾಕೆ ಬಂತೆಂದರೆ ಒಂದೆರಡು ಉದಾಹರಣೆಗಳನ್ನು ನೋಡೋಣ ಬನ್ನಿ.ಒಬ್ಬ ವ್ಯಕ್ತಿ ತನಗೆ ತೀವ್ರ ಎದೆ ನೋವೆಂದು ಖಾಸಗಿ ಆಸ್ಪತ್ರೆಗೆ...
ಆರೋಗ್ಯ
ಬ್ಲಾಕ್ ಫಂಗಸ್; ಬಾಯಿ ಸ್ವಚ್ಛವಾಗಿಟ್ಟುಕೊಂಡರೆ ತೊಂದರೆ ಬಾರದು.
ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಹೊಸ ರೋಗವೆಂದರೆ ಬ್ಲಾಕ್ ಫಂಗಸ್. ಕೊರೋನಾದಿಂದ ಚೇತರಿಕೆ ಕಂಡವರಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೊರೋನಾವೇ ಸಾಕಷ್ಟು ಹೈರಾಣ ಮಾಡಿ ಹೋಯಿತು ಎನ್ನುತ್ತಿರುವಾಗಲೇ ಈ ಬ್ಲಾಕ್ ಫಂಗಸ್ ಕಾಣಿಸಿಕೊಂಡು ಜನರ ಜೀವನವನ್ನು ಮತ್ತಷ್ಟು ಹೈರಾಣವಾಗಿಸುತ್ತಿದೆ.ಕೊರೋನಾ ಟ್ರೀಟ್ಮೆಂಟಿನಲ್ಲಿ ಸಾಕಷ್ಟು ಸ್ಟಿರಾಯ್ಡ್ ಗಳು ಅಂದರೆ ಉದ್ದೀಪನಕಾರಿ ಔಷಧಗಳ ಬಳಕೆಯಿಂದಾಗಿ ಕೊರೋನಾ ನಂತರ ಬ್ಲಾಕ್...
ಕವನ
ಕವನ: ಒಂಟಿ ಜೀವ
ಒಂಟಿ ಜೀವ..
ಒಂಟಿ ಜೀವ ನಾನೆಂಬ ,
ಆತಂಕ ಬೇಡ ,
ಜಗದ ಉತ್ತಮ ನಿಲುವುಗಳು
ರೂಪುಗೊಂಡಿದ್ದು ,
ಒಂಟಿ ಆಲೋಚನೆಯ ಜಗದಲ್ಲಿ...
ಹಿಟ್ಲರ್ ನ ಅಧಿಕಾರ ದಾಹಕೆ ,
ಜಗತ್ತೇ ತಲ್ಲಣಿಸಿತು ,
ಘಜನಿ ಮಹಮ್ಮದ್ ನ
ಅಧಿಕಾರ ದಾಹದ ಆಲೋಚನೆಗೆ ,
ಭಾರತದ ಮೇಲೆ
ಹದಿಮೂರು ಬಾರಿ ಧಾಳಿಯಾಯ್ತು.
ಬಸವಣ್ಣನ ಸಮಾನತೆ,ಕಾಯಕ ತತ್ವಕೆ
ಕಲ್ಯಾಣದಲಿ ಮಹೋನ್ನತ ಕ್ರಾಂತಿಯಾಯ್ತು...
ಬುದ್ದ-ಮಹಾವೀರರ ಚಿಂತನೆಗೆ
ಸತ್ಯ-ಅಹಿಂಸೆ ಸಾರುವ
ಹೊಸ ಧರ್ಮ ಗಳ ಜನನವಾಯ್ತು,
ಗಾಂಧೀಜಿಯವರ ಸತ್ಯ,ತ್ಯಾಗ, ಅಹಿಂಸೆಯ ಹೋರಾಟಕೆ
ಭಾರತದಲಿ ಬ್ರಿಟೀಷರ...
Latest News
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...



