Monthly Archives: September, 2024

ಮಿಥುನ್ ದಾ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

ನವದೆಹಲಿ - ಹಿಂದಿ ಚಿತ್ರರಂಗದ ಹಿರಿಯ ನಟ, ಮಿಥುನ್ ದಾ ಎಂದು ಕರೆಯಲ್ಪಡುವ ಬಂಗಾಳದ ನಟ ಮಿಥುನ್ ಚಕ್ರವರ್ತಿ ಚಿತ್ರ ರಂಗದ ಅತ್ಯುನ್ನತ ಪ್ರಶಸ್ತಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ೧೯೮೦ ರ ದಶಕದಲ್ಲಿ ಡಿಸ್ಕೋ ಡಾನ್ಸರ್ ರೂಪದಲ್ಲಿ ಅಂದಿನ ಯುವ ಸಮೂಹದ ಮುಖ್ಯ ಆಕರ್ಷಣೆಯಾಗಿದ್ದ ಮಿಥುನ್ ಚಕ್ರವರ್ತಿ ೩೫೦ ಕ್ಕೂ ಹೆಚ್ಚು ವಿವಿಧ...

ಕವನ : ಭಗತ್ ಗೆ ಗಲ್ಲು

ಭಗತ್ ಗೆ ಗಲ್ಲು ಅಂದು ಕತ್ತಲು ಹರಿದಿರಲಿಲ್ಲ. ಮಧ್ಯ ರಾತ್ರಿ ಗುಸು ಗುಸು ಮಾತು ಸೆರೆವಾಸದ ಮನೆ ಸ್ಮಶಾನ ಕೆಂಪು ಮೋತಿಯವರಿಗೂ ದುಗುಡ ಒಳಗೊಳಗೆ ಕಳವಳ ಮುಖದ ಮೇಲೆ ಚಿಗುರು ಗಡ್ಡಮೀಸೆ ಹಸೆ ಮಣಿ ಏರಿರಲಿಲ್ಲ, ಕಂಕಣ ಕಟ್ಟಿಲ್ಲ ಬೇಡಲಿಲ್ಲ ಜೀವ ಭಿಕ್ಷೆ, ಪ್ರಾಣ ದಯೆ . ಬರೆದು ಮುಗಿಸಿದ ದಿನಚರಿ ಸಾವಿನ ಅಧಿಕಾರಿಯ ಕೈಕುಲುಕಿದ ಮುಗುಳು ನಗೆ ಮಂದಹಾಸ ನೋಟ ಬಾಡಿರಲಿಲ್ಲ ಮುಖದ ಚೇತನ ನಡೆದರು ಸಾವಿನ ಕುಣಿಕೆಗೆ ಸಂತಸದಿ ಭಗತ್ ಸುಖದೇವ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೇಳಿಕೊಡುವಂಥ ಗುರುವರನಿಲ್ಲದಿದ್ದರೂ ಏಕಲವ್ಯನು ಕಲಿತ ಧನುರ್ವಿದ್ಯೆ ಹಿಂದೊಬ್ಬ ಗುರುವಿಲ್ಲದಿದ್ದರೂ ನಡೆದೀತು ಮುಂದೊಂದು ಗುರಿಯಿರಲಿ - ಎಮ್ಮೆತಮ್ಮ ಶಬ್ಧಾರ್ಥ ಗುರುವರ = ಗುರು ಶ್ರೇಷ್ಠ ತಾತ್ಪರ್ಯ ಪ್ರತಿಯೊಬ್ಬರಲ್ಲಿ‌ ಒಂದಿಲ್ಲೊಂದು ಪ್ರತಿಭೆ ಇದ್ದೇ ಇರುತ್ತದೆ. ಗುರುವು‌ ನಿಮಿತ್ತ ಮಾತ್ರ. ಅದನ್ನು ಗುರುತಿಸಿ ಹೊರಗೆ ತರುತ್ತಾನೆ. ನಮ್ಮ‌‌ ಸಾಮರ್ಥ್ಯ‌ ನಮಗೆ‌ ಗೊತ್ತಾಗುವುದಿಲ್ಲ. ಗುರುವಿನಲ್ಲಿ ಭಕ್ತಿಶ್ರದ್ಧೆಯಿದ್ದರೆ ಸಾಕು ವಿದ್ಯೆ ತನ್ಮಷ್ಟಕ್ಕೆ ತಾನೆ ಕರಗತವಾಗುತ್ತದೆ. ಕಾಡಿನಲ್ಲಿದ್ದ ಏಕಲವ್ಯನು ರಾಜಗುರು ದ್ರೋಣಾಚಾರ್ಯರ ಮೂರ್ತಿಯನ್ನು ಇಟ್ಟು ಅದರ ಮುಂದೆ ಬಿಲ್ವಿದ್ಯೆ...

ತಂದೆ, ತಾಯಿ ಹಾಗೂ ಕಲಿತ ಶಾಲೆಯ ಋಣ ತೀರಿಸಬೇಕು – ಸರ್ವೋತ್ತಮ ಜಾರಕಿಹೊಳಿ

ಗೋಕಾಕ- ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿ ವಲಯದಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದರಿಂದಲೇ ಈ ಭಾಗದಲ್ಲಿ ದಾಖಲೆಯ ಮಟ್ಟದಲ್ಲಿ ವಿವಿಧ ವೃತ್ತಿಪರ ಕೋರ್ಸಗಳಿಗೆ ಆಯ್ಕೆಯಾಗುವ ಮೂಲಕ ವಿದ್ಯಾರ್ಥಿಗಳು ಕ್ಷೇತ್ರದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು. ರವಿವಾರದಂದು ನಗರದ ಎನ್‌ಎಸ್‌ಎಫ್ ಕಚೇರಿಯಲ್ಲಿ ೨೦೨೩-೨೪ ನೇ ಸಾಲಿನ ವ್ಯಾಸಂಗ ಮಾಡಿ ಉನ್ನತ...

ಬಸವಾಚಿದೇವ ಸ್ವಾಮೀಜಿಗಳಿಂದ ಮಡಿವಾಳ ಸಮಾಜಕ್ಕೆ ಯಾವ ಕೊಡುಗೆ ಇಲ್ಲ – ಹಣಮಂತ ಮಡಿವಾಳರ

ಮೂಡಲಗಿ: ಮಡಿವಾಳ ಸಮಾಜದ ಮೀಸಲಾತಿಗಾಗಿ ಸಾಕಷ್ಟು ಜನರು ರಾಜ್ಯ ಸರ್ಕಾರದ ಬಾಗಿಲು ತಟ್ಟುವ ಕಾರ್ಯವನ್ನು ಮಾಡಿದ್ದಾರೆ ವಿನಃ ಸಮಾಜದ ಗುರುಗಳಾದ ಬಸವಾಚಿದೇವ ಸ್ವಾಮೀಜಿಯವರಿಂದ ಮಾತ್ರ ಸಮಾಜದ ಏಳಿಗೆಗಾಗಿ ಯಾವುದೇ ಕೊಡುಗೆ ಇಲ್ಲ ಎಂದು ಮಡಿವಾಳ ಸಮಾಜದ ಹಿರಿಯ ಮುಖಂಡ ಹಣಮಂತ ಮಡಿವಾಳರ(ತಲ್ಲೂರ) ಬೇಸರ ವಕ್ತಪಡಿಸಿದರು. ರವಿವಾರದಂದು ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,...

ಅಪಾಯದ ಅಂಚಿನಲ್ಲಿ ಹುನಗುಂದದ ನವಿಲು

ಹುನಗುಂದ: ಹೇಳಿ ಕೇಳಿ ಹುನಗುಂದ ತಾಲ್ಲೂಕು ಬಯಲ ನಾಡು. ಮತ್ತೆ ಬರದ ನಾಡೆಂಬ ಹಣೆಪಟ್ಟಿ ಬೇರೆ. ಸದ್ಯ ಇಳಕಲ್ ತಾಲೂಕಿಗೆ ಸೇರಿದ ಗುಡೂರ, ದಮ್ಮೂರಗಳ ಗುಡ್ಡಗಳ ಇರುವ ದಟ್ಟ ಕಾಡು. ಮತ್ತೆ ಹುನಗುಂದ ತಾಲೂಕಿನ ಅಮೀನಗಡ ಕಮತಗಿ ಭಾಗದಲ್ಲಿ ಇರುವ ಕಾಡಿನಲ್ಲಿ ಸಾವಿರಾರು ಸಂಖ್ಯೆಯ ನವಿಲುಗಳು ವಾಸವಾಗಿವೆ. ಅಲ್ಲದೇ ಎರಡೂ ತಾಲೂಕುಗಳ ಚಿಕನಾಳ, ಸಿದ್ದನಕೊಳ್ಳ,...

ಆಧುನಿಕ ಸಂವಿಧಾನಗಳಿಗೆ ಶರಣರ ವಚನ ಸಂವಿಧಾನವೇ ಮೂಲ – ಬಿರಾದಾರ

ಬೆಳಗಾವಿ: ಜಗತ್ತು ಸಂವಿಧಾನದ ಬಗ್ಗೆ ಯೋಚಿಸುವ ಮೊದಲೇ ಸಂಸದೀಯ ವ್ಯವಸ್ಥೆಯನ್ನು ಅಕ್ಷರಶಃ ಜಾರಿಗೊಳಿಸಿದ್ದ ಬಸವಾದಿ ಶರಣರ ವಚನ ಸಂವಿಧಾನವು ಆಧುನಿಕ ಸಂವಿಧಾನಗಳಿಗೆ ಮೂಲವಾಗಿದೆ ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು. ಲಿಂಗಾಯತ ಸಂಘಟನೆಯು ಆಯೋಜಿಸಿದ ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ವಿಶೇಷ‌ ಅನುಭಾವಗೋಷ್ಠಿ ಕಾರ್ಯಕ್ರಮದಲ್ಲಿ 'ಶರಣರ ವಚನ...

ಸಮುದಾಯ ಭವನಗಳು ಸಾಮಾಜಿಕ ಚಟುವಟಿಕೆಗಳಿಗಾಗಿ ರೂಪುಗೊಳ್ಳಬೇಕು – ಈರಣ್ಣ ಕಡಾಡಿ

ಮೂಡಲಗಿ: ಸಮುದಾಯ ಭವನಗಳು ಜನ ಸಮುದಾಯದ ಪ್ರಗತಿಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು. ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ರೂ. ೧೦ ಲಕ್ಷ ವೆಚ್ಚದಲ್ಲಿ ಬಲಭೀಮ ತೋಟದ ಮಾರುತಿ ದೇವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ...

ರೇಬೀಸ್ ತಡೆಯಲು ಸರಿಯಾಗಿ ಲಸಿಕೆ ಹಾಕಿಸಿಕೊಳ್ಳಿ – ಡಾ. ಪ್ರದೀಪ ಕುಮಾರ

ವಿಶ್ವ ರೇಬೀಸ್ ದಿನಾಚರಣೆ ಕೂಡ್ಲಿಗಿ: ರೇಬೀಸ್ ಕಾಯಿಲೆ ಮಾರಣಾಂತಿಕವಾಗಿದ್ದು, ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ಹಾಕಿಸಿಕೊಳ್ಳುವುದರ ಮೂಲಕ ಸಾವು ತಡೆಯಬಹುದು ಎಂದು ಟಿಎಚ್ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶನಿವಾರ ತಾಲೂಕು ಸಾರ್ವಜನಿಕ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ವಿಶ್ವ ರೇಬೀಸ್ ದಿನಾಚರಣೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರೇಬೀಸ್ ರೋಗವು ನಾಯಿ, ನರಿ,...

ಡಾ. ನೆಗಳಗುಳಿ ಹಾಗೂ ಶ್ರೀಮತಿ ಭಟ್ ಅವರಿಗೆ ಶಿಕ್ಷಕ ಸನ್ಮಾನ

ಮಂಗಳೂರು - ದೀರ್ಘ ಕಾಲದಿಂದ ವೈದ್ಯಕೀಯ ಶಿಕ್ಷಕರೂ ಆಗಿರುವ ಮಂಗಳೂರಿನ ಶಸ್ತ್ರ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಹಾಗೂ ಬಲ್ಮಠ ಕಾಲೇಜಿನ ಶಿಕ್ಷಕಿ ಶ್ರೀಮತಿ ಜ್ಯೋತಿ ಕೇಶವ ಭಟ್ ಇವರಿಗೆ ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕ ಪುರಸ್ಕಾರವು ಕದ್ರಿ ಅಶೋಕ ಭವನ ದಲ್ಲಿ ಇತ್ತೀಚೆಗೆ ಜರಗಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಲ....
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group