ನಿಲ್ಲದ ನಗೆ
ಚಿಕ್ಕವನಾಗಿದ್ದಾಗ
ಪ್ರಪಂಚ ನೋಡಿ
ಎಲ್ಲರೂ ನನ್ನವರೆಂದು
ಸಂತೋಷದಿಂದ
ನಗು ನಗುತ್ತಿದ್ದೆ,
ವಯಸ್ಸಾದಂತೆ
ಸಮಾಜದ ಎಲ್ಲರೂ
ಆಸ್ತಿ,ಅಂತಸ್ತು, ಸ್ವಾರ್ಥಗಳ
ಬೇಲಿ ಹಾಕಿಕೊಂಡಿದ್ದ ನೋಡಿ
ವಿಷಾದದ ನಗು ನಗಲಾರಂಭಿಸಿದೆ
ಅದೇಕೋ ಏನೋ
ಇನ್ನೂ ನಗು ನಿಲ್ಲಿಸಲಾಗಿಲ್ಲ,
ನಂಗೊಂದು ಹೆದರಿಕೆ
ನಾನೂ ಸಹ ನಗೆ ನಿಲ್ಲಿಸದ
ಲಾಫಿಂಗ್ ಬುದ್ಧ
ಆಗಿ ಬಿಡುತ್ತೇನೋ ಅಂತ..
ವಾಸ್ತವ
ಬಾಯಲ್ಲಿ ಜೇನುತುಪ್ಪ ಸುರಿಸುತ್ತಾ
ಹೃದಯದಲ್ಲಿ ವಿಷ ಹರಿಸುವ
ಕಾರ್ಕೋಟಕ ಮನುಜರ ಕಂಡಾಗ
ಪರೋಪಕಾರ ಮಾಡಲೂ ಹೇಸಿಗೆ..
ನೋವಿನ ತುತ್ತತುದಿಯಲ್ಲಿ
ಎಲ್ಲೋ ಬೆಳಕು ಕಾಣಿಸಿದಾಗ,
ಮಾಡಿದ ಸೇವೆಗೆ ಯಾರೋ ಸಹೃದಯರು
ಆತ್ಮಪೂರ್ವಕ ಮೆಚ್ಚುಗೆ ನೀಡಿದಾಗ,
ಮತ್ತೆ ಕತ್ತಲಿಗೆ ಬೆಳಕು...
ಮೂಡಲಗಿ: ಅವಶ್ಯಕತೆ ಇದ್ದವರಿಗೆ ಸಹಾಯ ಮಾಡಿದಾಗ ಅವರು ತೋರುವ ಪ್ರೀತಿ, ವಿಶ್ವಾಸ ಅತ್ಯಂತ ಅಮೂಲ್ಯವಾದದ್ದು ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ದುರ್ಗಾದೇವಿ ದೇವಸ್ಥಾನದ ಎದುರುಗಡೆ ನಿರ್ಮಿಸಲಾದ ಶೆಲ್ಟರ ಕಾಮಗಾರಿಯ ಉದ್ಗಾಟನೆ ನೆರವೇರಿಸಿ ಪರಿಶಿಷ್ಟ ಸಮುದಾಯ ಬಂಧುಗಳಿಂದ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾಮಾಜಿಕ,...
ಮೂಡಲಗಿ- ಕಟ್ಟಡ ಕಾರ್ಮಿಕರಿಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂತಹ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಲು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಲಹೆ ಮಾಡಿದರು.
ಶುಕ್ರವಾರದಂದು ಪಟ್ಟಣದ ತಹಶೀಲ್ದಾರರ ಕಚೇರಿ ಬಳಿ ಕಾರ್ಮಿಕ ಇಲಾಖೆಯಿಂದ ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ಕಾರ್ಮಿಕರ ಏಳ್ಗೆಗಾಗಿ ಇರುವ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ಕಟ್ಟಡಗಳ ನಿರ್ಮಾಣದಲ್ಲಿ...
ಎಲೆಕ್ಟ್ರಿಕ್ ಕಾಯಿಲ್ ಸ್ಟೌವ್ ನಲ್ಲಿ ಸಾಮಾನ್ಯವಾಗಿ ನಿಕ್ರೋಮ್ ಎಂಬ ಮಿಶ್ರಲೋಹದ ತಂತಿಯನ್ನು ಬಳಸುತ್ತಾರೆ. ವಿದ್ಯುತ್ ನಿಂದ ಬಿಸಿ ಮಾಡುವ ಹೇರ್ ಡೈಯರ್, ವಾಟರ್ ಹೀಟರ್, ಇಸ್ತ್ರಿ ಪೆಟ್ಟಿಗೆ, ಸಾಲ್ಡರಿಂಗ್ ಯಂತ್ರ, ಆಹಾರ ಬಿಸಿ ಮಾಡುವ ಬಹುತೇಕ ಯಂತ್ರಗಳಲ್ಲಿ ನಿಕ್ರೋಮ್ ಇರುತ್ತದೆ. ಇದು ಶೇ 80 ಭಾಗ ನಿಕ್ಕಲ್ ಮತ್ತು ಶೇ 20 ಭಾಗ ಕ್ರೋಮಿಯಂನಿಂದ...
ಕಂಗಳೆರಡೊಂದಾಗಿ ಕಣ್ಣಾಲಿಗಳು ನಿಂತು
ಉಸಿರಾಟಹೃದಯ ಬಡಿತಗಳು ನಿಂತು
ಚಿತ್ತವೃತ್ತಿಯು ನಿಂತು ಮನದೊಳಾನಂದವಿರೆ
ಯೋಗ ಸಿದ್ಧಿಸಿದಂತೆ - ಎಮ್ಮೆತಮ್ಮ
ಶಬ್ಧಾರ್ಥ
ಕಂಗಳು = ಕಣ್ಣುಗಳು. ಚಿತ್ತವೃತ್ತಿ = ಮನದ ಚಂಚಲತೆ
ತಾತ್ಪರ್ಯ
ದೃಷ್ಟಿಯನ್ನು ಭ್ರೂಮಧ್ಯದ ಕಡೆಗೆ ಅಂದರೆ ಮೂಗಿನ ತುದಿಯನ್ನು ಅಥವಾ ಇಷ್ಟಲಿಂಗವನ್ನು ಆಲಿ ಬಡಿಯದೆ ನೋಡುತ್ತಿದ್ದರೆ ಉಸಿರಾಟದ ವೇಗ ಕಡಿಮೆಯಾಗುತ್ತದೆ. ಉಸಿರಾಟ ಕಡಿಮೆಯಾದಂತೆ ಮನಸು ನಿಲ್ಲುತ್ತದೆ. ಕಣ್ಣಾಲಿ, ಉಸಿರಾಟ ಮತ್ತು ಮನಸಿಗೆ ನೇರ ಸಂಬಂಧವಿದೆ.
ಆಲಿ...
ಕೇವಲ ಎರಡು ದಿನಗಳ ಹಿಂದೆ ಮುಂಡರಗಿ ಪಟ್ಟಣದಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ೧೫೭ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಅತ್ಯಂತ ವಿಧಾಯಕವಾಗಿ ರಚನಾತ್ಮಕವಾಗಿ ಜರುಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿರಕ್ತ ಮಠಾಧೀಶರು ಭಾಗವಹಿಸಿ ಮುಂಡರಗಿ ಸುತ್ತಮುತ್ತಲಿನ ೧೮ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಮಾಡಿ, ಜನರಲ್ಲಿ ಒಂದು ರೀತಿಯ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದರು....
ಸಿದ್ದೇಶ್ವರ ಶ್ರೀಗಳ ಕುರಿತ 'ಜ್ಞಾನಗಂಧ' ಪುಸ್ತಕ ಬಿಡುಗಡೆ
ಮೂಡಲಗಿ - ಮಾಣಿಕ್ಯಕ್ಕೆ ಬೆಲೆ ಎಲ್ಲಿಯವರೆಗೆ ಇರುವುದೋ ಅಲ್ಲಿಯವರೆಗೆ ಸಿದ್ಧೇಶ್ವರ ಶ್ರೀಗಳ ಮಾತಿಗೆ ಬೆಲೆ ಇರುತ್ತದೆ. ಅಂಥ ಮಹಾತ್ಮರ ಮಾತುಗಳನ್ನು ಸಂಪಾದಿಸಿ ಪುಸ್ತಕ ರೂಪದಲ್ಲಿ ತರಲಿಕ್ಕೆ ಸಾಕಷ್ಟು ತಾಳ್ಮೆ ಬೇಕು. ಬಾಲಶೇಖರ ಅವರು ಶ್ರೀ ಸಿದ್ಧೇಶ್ವರ ಶ್ರೀಗಳ ಮಾತುಗಳನ್ನು ತಾಳ್ಮೆಯಿಂದ ಕೇಳಿ, ಅಷ್ಟೇ ಪರಿಶ್ರಮದಿಂದ ಬರೆದು ಮತ್ತೆ...
ಬರುವ ನವಂಬರ್ 9 ರಿಂದ 11ರವರೆಗೆ ಉಡುಪಿಯಲ್ಲಿ ವಿಜಯದಾಸರ ಆರಾಧನಾ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಸಹಯೋಗದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ದಾಸ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ ಸಭೆಯನ್ನು ಬೆಂಗಳೂರು ಬಸವನಗುಡಿ ಪುತ್ತಿಗೆ ಮಠ ಗೋವರ್ಧನ ಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು.
ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ ಬಿ ಗೋಪಾಲ್ ಆಚಾರ್ ರವರು ಉಡುಪಿಯಿಂದ...
ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ 4X400 ಮೀ ರಿಲೇ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ವಿಭಾಗದಲ್ಲಿ ಮುತ್ತುರಾಜ ಜೋಗಿಗುಡ್ಡ (1500 ಮೀ ಓಟದಲ್ಲಿ ಪ್ರಥಮ), 14 ವರ್ಷ ವಯೋಮಿತಿಯ ಬಾಲಕಿಯರ...
ಗರಡಿ ಮನೆಯ ನವೀಕರಣ
ಮೂಡಲಗಿ: ೭೦ ವರ್ಷಗಳ ಹಿಂದೆ (೧೯೫೫ರಲ್ಲಿ) ಸ್ಥಾಪನೆಗೊಂಡು ಶಿಥಿಲಾವಸ್ಥೆಗೆ ತಲುಪಿದ್ದ ಗರಡಿ ಮನೆಯನ್ನು ಪುನರ್ ನಿರ್ಮಾಣಗೊಳಿಸುವ ಮೂಲಕ ಕುಸ್ತಿಯ ಗತ ವೈಭವ ಮರುಕಳಿಸುವಂತೆ ಮಾಡಲಾಗಿದ್ದು, ಪಟ್ಟಣದ ಯುವಕರು ಇದರ ಸದುಯೋಗಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.
ಗುರುವಾರ ಸೆ-೨೬ ರಂದು ಕಲ್ಲೋಳಿ ಪಟ್ಟಣದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ...