ಮೂಡಲಗಿ - ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಅನುಯಾಯಿಗಳಾಗಿರುವುದು ಅತ್ಯಂತ ಹೆಮ್ಮೆ ಪಡುವ ಸಂಗತಿಯಾಗಿದೆ. ಈ ಸಮುದಾಯದ ಜನರಿಗೆ ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮುದಾಯದ ಭವನದ ಅವಶ್ಯಕತೆ ಇದ್ದು. ಇದನ್ನು ಮನಗಂಡು ಭವನ ನಿರ್ಮಾಣ ಮಾಡಲು ದೃಢ ಹೆಜ್ಜೆ ಇಟ್ಟಿರುತ್ತೇನೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.
ಬುಧವಾರ...
ಸಿಂದಗಿ; ತಾಲೂಕು ಆಸ್ಪತ್ರೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಚಿಕಿತ್ಸೆ ಪಡೆದುಕೊಳ್ಳಲು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದರು ಉತ್ತಮವಾದ ಚಿಕಿತ್ಸೆ ಪಡೆದು ಆರೋಗ್ಯ ಸುಧಾರಣೆಗೆ ಸಾರ್ವಜನಿಕರು ಸಮಸ್ಯೆಗಳನ್ನು ಎದುರಿಸಬಾರದು ಎನ್ನುವ ನಿಟ್ಟಿನಲ್ಲಿ ಮೂಲ ಸೌಕರ್ಯಗಳಿಗಾಗಿ ರೂ. ೧೨೦ ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಜನರು ಆರೋಗ್ಯವಂತ ಜೀವನ ಸಾಗಿಸಬೇಕು ಇದರ ಸದುಪಯೋಗವಾಗಲಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ...
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ, ಹಾಸನ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷ ಸುಂದರೇಶ್ ಡಿ ಉಡುವಾರೆ ಇವರ ಸಾರಥ್ಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ ಮೂರರಂದು ಭಾನುವಾರ ಹಾಸನ ನಗರ ಸಾಲಗಾಮೆ ರಸ್ತೆ ಅರಳಿಕಟ್ಟೆ ಸರ್ಕಲ್ ಬಳಿ ಇರುವ ಸಂಸ್ಕೃತ ಭವನದಲ್ಲಿ ಕವಿ ಕಾವ್ಯ ಕುಂಚ ಗಾಯನ, ನೃತ್ಯ ವಿಮರ್ಶೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂದು...
*ಶಿಕ್ಷಕರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸುಲಭದ ಪರಿಹಾರ ದೊರಕಿಸಲು ಶಿಕ್ಷಣ ಅದಾಲತ್ ಪರಿಹಾರವಾಗಬಲ್ಲದು*
*ಮೋಹನ್ ದಂಡಿನ*
ಸವದತ್ತಿ : "ಶಿಕ್ಷಕರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸುಲಭದ ಪರಿಹಾರ ದೊರಕಿಸಲು ಶಿಕ್ಷಣ ಅದಾಲತ್ ಪರಿಹಾರವಾಗಬಲ್ಲದು ಇಂದು ಹಲವು ಸಮಸ್ಯೆ ಗಳನ್ನು ಸ್ಥಳದಲ್ಲಿ ಬಗೆಹರಿಸಿದರೆ ಒಂದು ವಾರದಲ್ಲಿ ಇನ್ನೂ ಹಲವು ಶಿಕ್ಷಕರ ಕುಂದುಕೊರತೆಗಳನ್ನು ಬಗೆಹರಿಸಲು ಸಮಯಾವಕಾಶ ನೀಡಲಾಯಿತು". ಎಂದು ಸವದತ್ತಿ...
ಗುಡಿಗೆ ಹೋಗುವದೇಕೆ ? ದೇವನರಸುವದೇಕೆ ?
ಮತ್ತೆ ಹುಡುಕುವುದೇಕೆ ಗುರುದೇವನ ?
ದೇಹದೇವಾಲಯದಿ ನೀ ದೇವನಾಗುರುವಿ
ನಿನ್ನರಿವೆ ಗುರುದೇವ - ಎಮ್ಮೆತಮ್ಮ
ಶಬ್ಧಾರ್ಥ
ಅರಸು = ಹುಡುಕು.
ತಾತ್ಪರ್ಯ
ದೇಹದ ಸಾಂಕೇತಿಕವಾಗಿ ದೇವಾಲಯವನ್ನು ನಿರ್ಮಿಸಿದರು.
ಅದರಿಂದ ದೇವಾಲಯ ಸಂಸ್ಕೃತಿ ಬೆಳೆದು ಬಂದಿತು ಆದ್ದರಿಂದಲೇ ದೇಹೋ ದೇವಾಲಯಃ ಪ್ರೋಕ್ತಃ ಜೀವೋ ಹಂಸಃ ಸನಾತನಃ ಎಂಬ ಮಾತು ಬೆಳೆದು ಬಂತು.
ಪಾದಗಳೇ ಮುಖದ್ವಾರ, ಜನನೇಂದ್ರಿಯವು ಧ್ವಜಸ್ತಂಭ, ಉದರವು ಬಲಿಪೀಠ, ಹೃದಯವು...
ಲಯನ್ಸ್ ಕ್ಲಬ್ ಪರಿವಾರಾದ ೧೦೦ನೇ ಅನ್ನದಾಸೋಹ
ಮೂಡಲಗಿ: ‘ಯಾವುದೇ ಫಲಾಪೇಕ್ಷೆ ಬಯಸದೆ ನಿಸ್ವಾರ್ಥದಿಂದ ಮಾಡುವ ಸೇವೆಯು ನಿಜವಾದ ಸಮಾಜ ಸೇವೆಯೆನಿಸುತ್ತದೆ’ ಎಂದು ಶಿವಬೋಧರಂಗ ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮಿಗಳು ಹೇಳಿದರು.
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರ ಆಸ್ಪತ್ರೆಯಲ್ಲಿ ರೋಗಿಗಳಿಗೆ ಏರ್ಪಡಿಸಿದ್ದ ೧೦೦ನೇ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು...
ಗೋಕಾಕ- ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ಎಲ್ಲ ಜಾತಿಯವರು ಸೇರಿಕೊಂಡು ಆಚರಿಸಿದರೆ ಮಾತ್ರ ಅಂತಹ ಕಾರ್ಯಕ್ರಮಗಳಿಗೆ ಶೋಭೆ ಬರುತ್ತದೆ. ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೇ ಒಗ್ಗಟ್ಟಿನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕಾರ್ಯಕ್ಕೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೆಚ್ಚುಗೆ...
ನಿನ್ನ ಮುನಿಸಿಗೆ....
ಅರಳಿದ ಅಚ್ಚ ಮಲ್ಲಿಗೆ ಕೆಂಪಾದವು ನಿನ್ನ ಮುನಿಸಿಗೆ
ಮರಳಿದ ಸವಿ ನೆನಪುಗಳು ಮಂಕಾದವು ನಿನ್ನ ಮುನಿಸಿಗೆ
ಮೌನದರಮನೆಯ ತುಂಬ ದೀಪ ಕನ್ಯೆಯರ ಕಲಕಲ
ಬೆಳಕಿನ ಕುಡಿಗಳು ಹೊಯ್ದಾಡಿದವು ನಿನ್ನ ಮುನಿಸಿಗೆ
ಎದೆಯ ಹೂ ತೋಟದಲ್ಲಿ ನಿನ್ನ ಪ್ರೀತಿ ಸ್ನೇಹದ ಕಲರವ
ಅಲರುಣಿಗಳು ಆಲಾಪಿಸದೆ ಮೂಕವಾದವು ನಿನ್ನ ಮುನಿಸಿಗೆ
ಮನದ ಭಿತ್ತಿಯಲಿ ಬಿತ್ತಿ ಬೆಳೆದ ಭಾವಗಳ ಓಲಾಟ
ಜೀವ ಮುದುಡಿ ಮಾತು ಹಿಡಿಯಾದವು ನಿನ್ನ...
ಹೊಸ ಬಾಳಿನ ಬೆಳಕು
ಹಚ್ಚಿದ್ದೇವೆ ಶಬ್ದ ಮಧ್ಯದ
ಸಂತೆಯ ಸೊಡರು
ಗುಡಿಸಲಲಿ ಕಾಣದ ಮಿಣುಕು ಬೆಳಕು
ಸಿರಿವಂತರ ಅಂಗಳದ ಸಾಲು ಹಣತೆಗಳು
ಆಕಾಶ ಬುಟ್ಟಿ ಬಣ್ಣದೋಕುಳಿ
ಚಿಂದಿ ಬಟ್ಟೆಗಳ ಮುಂದೆ
ಉಡುಗೆ ತೊಡಗಿನ ವೈಯಾರ
ಹಿಂಗಿಲ್ಲ ಶತಮಾನದ ಹಸಿವು
ತಿರುಪೆ ಭಿಕ್ಷೆ ಬಡವರ ಅಳಲು
ಎಳೆಯ ಬಾಳೆ ಕಬ್ಬು ತೆರೆದು
ಹಸಿರು ತೋರಣ ಕೊಚ್ಚಿ
ಚೆಂಡು ಹೂವಿನ ಚೆಂಡು ಕಡಿದ ಮಂಟಪ
ಮನೆಗಳಲಿ ಲಕುಮಿಯ ಮೆರವಣಿಗೆ
ಪಟಾಕಿಯ ಅಬ್ಬರಕೆ ಕೊನೆಯಿಲ್ಲ
ಮೌನದಿ ಮರುಗಿ ಸಾಯುವ
ಪುಟ್ಟ ಗುಬ್ಬಚ್ಚಿ...