ಹಾಯ್ಕುಗಳು
ಸ್ವಾತಂತ್ರ್ಯಕ್ಕಾಗಿ
ಪಟ್ಟ ಕಷ್ಟ ಅಷ್ಟಿಷ್ಟೇ
ಜ್ಞಾಪಿಸಿಕೊಳ್ಳಿ..
ದೇಶಕ್ಕೆ ಪ್ರಾಣ
ನೀಡಿ ಮರೆಯಾದರೂ
ಅಮರರಾದ್ರು..
ತರೆಮರೆಯ
ಮಾಣಿಕ್ಯಗಳದೆಷ್ಟೋ
ಲೆಕ್ಕವೇ ಇಲ್ಲ..
ನಿಸ್ವಾರ್ಥ ಸೇವೆ
ಆದರ್ಶಜೀವಿಗಳು
ಭಾರತೀಯರು..
ಅವರಲ್ಲಿಲ್ಲ
ಪ್ರಚಾರದ ಬಯಕೆ
ಢಂಬಾಚಾರಿಕೆ..
ಒಂದೇ ಆಶಯ
ಸ್ವಾತಂತ್ರ್ಯದ ದೀವಿಗೆ
ಹಚ್ಚಲೇ ಬೇಕು..
ಸ್ವಾತಂತ್ರ್ಯವನ್ನು
ಪಡೆದೇ ತೀರಿದರು
ವೀರ ಪುತ್ರರು..
ದೇಶಕೆ ಇಂದು
ವಜ್ರ ಮಹೋತ್ಸವದ
ಸಡಗರವು…
ಶ್ರೀಮತಿ ಜ್ಯೋತಿ ಕೋಟಗಿ.