spot_img
spot_img

ಎಲ್ಲರಲ್ಲಿ ಸಮಾನತೆಯ ಅಧಿಕಾರ ನೀಡಿದ್ದು ಸಂವಿಧಾನ

Must Read

- Advertisement -

ಸಿಂದಗಿ; ಸ್ವತಂತ್ರ ಸಿಕ್ಕ ನಂತರ ನಮ್ಮ ಆಡಳಿತವನ್ನು ಹೇಗೆ ಮುನ್ನಡೆಸಬೇಕು ಇದಕ್ಕೊಂದು ಸಂವಿಧಾನ ರಚಿಸಲು ಒಂದು ಕರಡು ಸಮಿತಿ ಅದ್ಯಕ್ಷರಾಗಿ ಡಾ ಅಂಬೇಡ್ಕರರನ್ನು ನೇಮಕ ಮಾಡಿ ಹಲವಾರು ದೇಶಗಳ ಗ್ರಂಥಗಳನ್ನು ಅಧ್ಯಯನ ಮಾಡಿ ಸಂವಿಧಾನ ರಚಿಸಿ ಯಾವುದೇ ಒಂದು ಕಟ್ಟಕಡೆಯ ಮನುಷ್ಯನಿಂದ ಉಚ್ಚವಾದ ಮುನುಷ್ಯರವರೆಗೆ ಒಂದು ನ್ಯಾಯ ಸಮಾನತೆಯಿಂದ ಅಧಿಕಾರ ನೀಡಿದ್ದು ಒಂದು ಧರ್ಮ ಗ್ರಂಥವೆಂದರೆ ಅದುವೇ ಧರ್ಮಗ್ರಂಥವೆಂದು ಹೇಳಿದರೆ ತಪ್ಪಾಗದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮು ಅಗ್ನಿ ಹೇಳಿದರು.

ಪಟ್ಟಣದ ಡಾ. ಅಂಬೇಡ್ಕರ ವೃತ್ತದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಸಂವಿಧಾನ ದಿನ ನಿಮಿತ್ತ ಹಮ್ಮಿಕೊಂಡ ಸಂವಿಧಾನ ಪೀಠಿಕೆಯನ್ನು ಓದುತ್ತ ಮಾತನಾಡಿ, ಭಾರತದ ಜನಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಅದರ ಸಮಸ್ತ ನಾಗರಿಕರಿಗೆ; ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ: ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ‍್ಯ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ದಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರೆಲ್ಲ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶೃದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ; ನಮ್ಮ ಸಂವಿಧಾನ ಸಭೆಯಲ್ಲಿ ೧೯೪೯ನೆಯ ಇಸವಿ ನವೆಂಬರ್ ತಿಂಗಳ ಇಪ್ಪತ್ತಾರನೆಯ ತಾರೀಖಾದ ಈ ದಿವಸ ಈ ಮೂಲಕ ಈ ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ್ ಇಂದ್ರಾಭಾಯಿ ಬಳಗಾನೂರ, ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ, ಕೃಷಿ ಅಧಿಕಾರಿ ಡಾ ಎಚ್.ವೈ.ಸಿಂಗೇಗೋಳ, ಪಿ.ಎಂ.ಜಿ.ಎಸ್ ವೈ ಎ ಇಇ ಜಿ.ವೈ.ಮುರಾಳ, ಸಿಡಿಪಿಓ ಗುರುರಾಜ ಹಿರೇಮಠ, ಅರಣ್ಯ ಅಧಿಕಾರಿ ಮಲಕಣ್ಣನವರ, ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಮುಖ್ಯಾಧಿಕಾರಿ ಎಸ್ ರಾಜಶೇಖರ, ಕಂದಾಯ ನಿರೀಕ್ಷ ಐ.ಎಸ್.ಮಕಾನದಾರ, ದ.ಸಂ.ಸ ಜಿಲ್ಲಾ ಸಂಚಾಲಕ ವೈ ಸಿ ಮಯೂರ, ಆರ್ ಎಸ್ ಬನ್ನೇಟ್ಟಿ ಸೇರಿದಂತೆ ಅನೇಕರು ಇದ್ದರು

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group