spot_img
spot_img

ಸಿಂದಗಿ ಪುರಸಭೆ ಸಾಮಾನ್ಯ ಸಭೆ : ನಗರ ಸ್ವಚ್ಛತೆಗೆ ಆದ್ಯತೆ

Must Read

- Advertisement -

ಸಿಂದಗಿ; ಡಾ. ಅಂಬೇಡ್ಕರ ವೃತ್ತದಿಂದ ಗಾಂಧೀಜಿ ವೃತ್ತದವರೆಗಿನ ರಸ್ತೆಗೆ ಗೋಕಾಕ ಚಳವಳಿಯ ರೂವಾರಿ ಹಾಗೂ ಪತ್ರಿಕಾ ಭೀಷ್ಮ ರೇ.ಚ.ರೇವಡಿಗಾರರ ಹೆಸರಿಡಬೇಕು ಮತ್ತು ಅವರ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಎಂದು ಪತ್ರಿಕಾ ಬಳಗದ ಸದಸ್ಯರ ಮನವಿಗೆ ಕೂಡಲೇ ಕ್ರಮ ಜರುಗಿಸುವೆ ಎಂದು ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.

ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರು ಮಾತನಾಡಿ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಮಟನ್ ಹಾಗೂ ಚಿಕನ್ ಅಂಗಡಿಗಳು ತಲೆ ಎತ್ತಿ ನಿಂತಿದ್ದು ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಿದ್ದರಿಂದ ಅವುಗಳನ್ನು ಒಂದೆಡೆ ಮಾರಾಟ ಮಾಡಲು ಸ್ಥಳಾಂತರ ಮಾಡಲಾಗುತ್ತಿದೆ ಅವರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಬೇಕು. ಎಲ್ಲರ ಸಹಕಾರದಿಂದ ಪಟ್ಟಣದ ಸೌಂದರೀಕರಣಕ್ಕೆ ಅತೀಕ್ರಮಣ ಶೆಡ್ಡು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಕಾಮಗಾರಿಗಳನ್ನು ಕೈಗೊಳ್ಳಲು ಶಾಸಕರಿಗೆ ಮನವಿ ಮಾಡಿಕೊಂಡು ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮನವಿ ಮಾಡಿಕೊಳ್ಳೋಣ ಅಲ್ಲದೆ ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಅನುದಾನ ಅನುಮೋದನೆಗೆ ಸಚಿವರಲ್ಲಿ ಮನವಿ ಮಾಡಿಕೊಳ್ಳೋಣ ಕಾರಣ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಮುಖ್ಯಾಧಿಕಾರಿ ಎಸ್ ರಾಜಶೇಖರ ಮಾತನಾಡಿ, ಪಟ್ಟಣದಲ್ಲಿ ಒಟ್ಟು ೧೨ ಸಾವಿರ ಮನೆಗಳಿಗೂ ಅಧಿಕೃತ ನಳಗಳ ಜೊಡಣೆಯಿದ್ದು ಇದರಿಂದ ಪುರಸಭೆಗೆ ನೀರಿನ ಟ್ಯಾಕ್ಸ ಇಲ್ಲದಂತಾಗಿದೆ ಅದಕ್ಕೆ ಸರ್ವೆ ನಡೆಸಿ ಕ್ರಮ ಜರುಗಿಸಲಾಗುವುದು ಅಲ್ಲದೆ ರೂ ೧ ಕೋಟಿ ೩೦ ಲಕ್ಷ ವೆಚ್ಚದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣವಾಗಿದ್ದು ಮಸೀನರಿ ಮಾತ್ರ ಅಳವಡಿಕೆ ಕಾರ್ಯ ಉಳಿದಿದ್ದು ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸಿ ಸಂಸ್ಕರಣ ಮಾಡಿ ಎರೆ ಹುಳು ಗೊಬ್ಬರ ಮಾಡಿ ಪುರಸಭೆಗೆ ಆದಾಯ ಹೆಚ್ಚಿಸಲು ಕ್ರಮ ಜರುಗಿಸಲಾಗುವುದು ಎಂದರು.

- Advertisement -

ಸದಸ್ಯರಾದ ಭಾಷಾಸಾಬ ತಾಂಬೋಳಿ, ಸಂದೀಪ ಚೌರ ಮಾತನಾಡಿ, ಪಟ್ಟಣದ ಬಹು ವಿಸ್ತಾರವಾಗಿದ್ದು ಮಟನ್ ಹಾಗೂ ಚಿಕನ್ ತಿನ್ನುವವರೆ ಬಡವ ಹಾಗೂ ಕೂಲಿ ಕಾರ್ಮಿಕರಿದ್ದು ಅಂಗಡಿಗಳನ್ನು ಸ್ಥಳಾಂತರ ಮಾಡುವುದರಿಂದ ಅವರಿಗೆ ದೂರದ ಸ್ಥಳಕ್ಕೆ ಹೋಗಿ ಬರಲು ನೂರಕ್ಕೆ ಇನ್ನೂರು ಖರ್ಚು ಮಾಡುವ ಪ್ರಸಂಗ ಎದುರಾಗುತ್ತದೆ ಕಾರಣ ಚಿಕನ್ ಅಂಗಡಿಗಳು ಇದ್ದ ಸ್ಥಳದಲ್ಲಿಯೇ ಇಟ್ಟು ಸ್ವಚ್ಚತೆ ಕಾಪಾಡಲು ಸೂಚನೆ ನೀಡಿ ಎಂದು ಸಲಹೆ ನೀಡಿದರು.

ಸದಸ್ಯ ರಹಿಮ ದುದ್ದನಿ ಮಾತನಾಡಿ, ಕಂಪ್ಯೂಟರ ಉತಾರೆ ಪಡೆದುಕೊಳ್ಳಲು ಸಾರ್ವಜನಿಕರು ಹರಸಹಾಸ ಪಡುತ್ತಿದ್ದಾರೆ ಅದಕ್ಕೆ ಬೇಗ ಸಿಗುವಂತೆ ಕ್ರಮ ಜರುಗಿಸಿ ಎಂದು ಹೇಳುತ್ತಿದಂತೆ ಅದ್ಯಕ್ಷ ಶಾಂತವೀರ ಬಿರಾದಾರ ಮಧ್ಯ ಪ್ರವೇಶಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಬೇಕು ಎಂದು ನಾಲ್ಕು ಕಂಪ್ಯೂಟರ ಖರೀದಿಸಲಾಗಿದ್ದು ೪ ಜನ ಪರಿಣಿತರನ್ನು ನೇಮಕ ಮಾಡಿಕೊಂಡು ಗಣಕೀಕರಣ ಉತಾರೆ ನೀಡುವ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ನಾಮನಿರ್ದೆಶನ ಸದಸ್ಯ ಸಾಯಬಣ್ಣ ಪುರದಾಳ ಮಾತನಾಡಿ, ಅಮೃತ ೨.೦ ಯೋಜನೆಯಡಿ ಜಲಮೂಲಗಳ ಪುನ:ಶ್ಚೇತನ ಹಾಗೂ ಹಸಿರು ಜಾಗ ಮತ್ತು ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಸರಿಯಾದ ಕ್ರೀಯಾ ಯೋಜನೆ ರೂಪಿಸಿ ಎಂದು ಹೇಳುತ್ತ ಎಸ್‌ಸಿಪಿ ಟಿಎಸ್ಪಿ ಯೋಜನೆಯಡಿ ದಲಿತರ ಕೇರಿಗಳನ್ನು ಅಭಿವೃದ್ಧಿ ಪಡಿಸಲು ಸರಕಾರ ಸಾಕಷ್ಟು ಅನುದಾನ ಇಡುತ್ತಿದ್ದು ಅದು ಎಲ್ಲಿ ಹೋಗಿದೆ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ ಎಂದು ದೂರುತ್ತಿದಂತೆ ಸದಸ್ಯ ಸಂದಿಪ ಚೌರ ಪುರಸಭೆ ಉಳಿಕೆಯಲ್ಲಿ ೨೪.೧೦ ಅನುದಾನದಲ್ಲಿ ಪಟ್ಟಣದ ೨೩ ವಾರ್ಡುಗಳಲ್ಲಿರುವ ದಲಿತರ ಕೇರಿಗಳನ್ನು ಅಭಿವೃದ್ಧಿಗೆ ಅವಕಾಶವಿದೆ ಇದರ ಕ್ರಮ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

- Advertisement -

ಪಟ್ಟಣದ ಪ್ರಮುಖ ರಸ್ತೆಯಾದ ವಿವೇಕಾನಂದ ವೃತ್ತದಿಂದ ಟಿಪ್ಪುಸುಲ್ತಾನ್ ವೃತ್ತದ ವರೆಗೆ ಏಕಮುಖ(ಒನ್‌ವೇ) ಸಂಚಾರ ನಿರ್ಮಿಸುವದು, ಕಚೇರಿಯ ಎಲ್ಲ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯವಾಗಿ ಕಾರ್ಯರೂಪಕ್ಕೆ ತರಲಾಗಿದೆ. ಪುರಸಭೆಯ ಕಾನೂನು ಸಲಹೆಗಾರರು ಪುರಸಭೆಯ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ. ಕಾರಣ ಸದರಿ ಕಾನೂನು ಸಲಹೆಗಾರರನ್ನು ಬದಲಾಯಿಸಿ ನೂತನ ಕಾನೂನು ಸಲಹೆಗಾರರನ್ನು ನೇಮಿಸುವದು. ಸೇರಿದಂತೆ ೧೧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆಯಾಗಿ ಅನುಮೋದನೆ ಪಡೆದುಕೊಂಡವು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಸದಸ್ಯರಾದ ಹಾಸೀಂ ಆಳಂದ, ಸದಸ್ಯ ಬಸವರಾಜ ಯರನಾಳ, ಶರಣಗೌಡ ಪಾಟೀಲ, ಗೊಲ್ಲಾಳ ಬಂಕಲಗಿ, ಪ್ರತಿಬಾ ಕಲ್ಲೂರ, ಸಿದ್ದು ಮಲ್ಲೇದ ಸೇರಿದಂತೆ ಹಾಜರಿದ್ದ ಸದಸ್ಯರು ತಮ್ಮ ತಮ್ಮ ವಾರ್ಡಗಳ ಸಮಸ್ಯೆಗಳ ಕುರಿತು ವಿವರಣೆ ನೀಡಿದರು.
ಸಿಬ್ಬಂದಿ ಸಿದ್ದು ಅಂಗಡಿ ನಡಾವಳಿ ಪತ್ರವನ್ನು ಓದಿದರು. ಜೆಇ ಎ.ಜೆ.ನಾಟೀಕಾರ, ಸೇರಿದಂತೆ ಎಲ್ಲ ಸಿಬ್ಬಂದಿ ಹಾಜರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group