spot_img
spot_img

ಅಶ್ವತ್ಥ ನಾರಾಯಣ ಹಾಗೂ ಕಾಗೇರಿ ಹೇಳಿಕೆ; ವಿಠ್ಠಲ ಕೊಳ್ಳೂರ ಖಂಡನೆ

Must Read

- Advertisement -

ಸಿಂದಗಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‍ನಂತೆ ಹೊಡೆದು ಹಾಕಬೇಕು ಎಂದು ನಿನ್ನೆ ಮಂಡ್ಯದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದು ಹಾಗೂ ಸದನದ ಕಾರ್ಯಕಲಾಪದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಕಾಂಗೇರಿ ಅವರು ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಹೊರಹಾಕಬೇಕಾಗುತ್ತದೆ ಎನ್ನುವ ಹೇಳಿಕೆಗಳೂ ಅಸಾಂವಿಧಾನಿಕ ಇದನ್ನು ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳೂರ ಉಗ್ರವಾಗಿ ಖಂಡಿಸಿದರು.

ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯನವರ 50 ವರ್ಷದ ರಾಜಕಾರಣದಲ್ಲಿ ಯವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕಾರಣ ಮಾಡಿದ್ದಾರೆ ಅಂತವರನ್ನು ಟಿಪ್ಪುವಿನ ಹಾಗೆ ಕೊಲೆ ಮಾಡಬೇಕು ಅಂತ ಹೇಳಿಕೆ ನೀಡಿದ್ದಾರೆ. ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಅಂದಿದ್ದಾರೆ ಇವರಿಬ್ಬರು ಸಿದ್ದರಾಮಯ್ಯ ಹಾಗೂ ಟಿಪ್ಪು ವಂಶಸ್ಥರನ್ನು ಕೊಲೆಮಾಡುವ ಉದ್ದೇಶ ಹೊಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಭದ್ರತೆ ಕೊಡಬೇಕು. ಕೂಡಲೇ ಸಚಿವ ಸ್ಥಾನದಿಂದ ರಾಜೆನಾಮೆ ಸಲ್ಲಿಸಬೇಕು. ಸಿದ್ದರಾಮಯ್ಯರ ಜೀವಕ್ಕೆ ಹಾನಿಯಾಗುವ ಸಂಭವವಿದೆ ಹೀಗಾಗಿ ಅಶ್ವತ್ಥ ನಾರಾಯಣ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಎಚ್ಚರಿಕೆ: ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ರಾಜ್ಯದ ಅಭಿವೃದ್ಧಿ ಕುರಿತು ವಿಷಯ ಪ್ರಸ್ತಾಪ ಮಾಡುತ್ತಿರುವ ಸಂದರ್ಭದಲ್ಲಿ ಅವರಿಗೆ ಸದನದ ಕಾರ್ಯಕಲಾಪ ನಡೆಯುವ ಸಮಯದಲ್ಲಿ ಸದನದಿಂದ ಹೊರಹಾಕುತ್ತೇನೆ ಎಂದು ಹೇಳಿದ್ದು ಕಾಗೇರಿ ಅವರು ಸ್ವಂತ ಮನೆಯಿಂದ ಹೊರಹಾಕಿದಂತೆ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ ಕಾರಣ ಕೂಡಲೇ ಸಭಾಧ್ಯಕ್ಷ ಸ್ಥಾನದಿಂದ ರಾಜೀನಾಮೆ ನೀಡಿ ಅವರ ಕ್ಷಮೆ ಯಾಚಿಸಬೇಕು ಇಲ್ಲದಿದ್ದರೆ ಪಕ್ಷದ ವತಿಯಿಂದ ಉಗ್ರವಾದ ಹೋರಾಟ ಕೈಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎ.ಖತೀಬ, ಮಹಿಳಾ ಘಟಕ ಅದ್ಯಕ್ಷೆ ಶಾರದಾ ಬೇಟಗೇರಿ, ಉಪಾಧ್ಯಕ್ಷ ವರ್ಷಾ ಪಾಟೀಲ, ಯುಥ್ ಘಟಕಾಧ್ಯಕ್ಷ ಇರ್ಫಾನ ಆಳಂದ, ಶಿವನಗೌಡ ಬಿರಾದಾರ, ಗೊಲ್ಲಾಳಪ್ಪಗೌಡ ಮಾಗಣಗೇರಿ, ಸಿದ್ದಣ್ಣ ಹಿರೇಕುರಬರ, ಯೋಗೆಪ್ಪಗೌಡ ಪಾಟೀಲ, ಮಲ್ಲು ಗತ್ತರಗಿ ವಕೀಲರು, ಬಿ.ಸಿ.ಕೊಣ್ಣುರ ವಕೀಲರು, ಡಾ. ಸಂಗಮೇಶ ಹೊಸಮನಿ, ಭೀಮು ವಾಲೀಕಾರ, ವಿರೇಶ ಕೊಟಾರಗಸ್ತಿ, ಮಹಾದೇವ ಗುಬ್ಬೆವಾಡ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

Shahid Kapoor Birthday: ಈ ಬಾಲಿವುಡ್ ಹೀರೊ ಒಟ್ಟು ಆಸ್ತಿ ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಬಾಲಿವುಡ್ ನ ಬಹು ಬೇಡಿಕೆಯ ನಟರಲ್ಲಿ ಒಬ್ಬರು. ಇಂದು (ಫೆಬ್ರವರಿ 25) ಅವರ ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಎರಡು ದಶಕಗಳಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group