Times of ಕರ್ನಾಟಕ

ಗುರು ಚಂಪಾರಿಗೆ ಅಶ್ರುತರ್ಪಣ; ಶಿವಾನಂದ ಬೆಳಕೂಡ

ಸಾಹಿತ್ಯವಲಯದ ಎರಡನೇ ತಲೆಮಾರಿನ ಕೊಂಡಿಯೊಂದು ಕಳಚಿ ಬಿದ್ದಾಗ ಒಮ್ಮೆಲೇ ಆಕಾಶದಲ್ಲಿನ ನಕ್ಷತ್ರಗಳು ಕಳಚಿಕೊಂಡು ಭೂಮಿಗೆ ಬಿದ್ದಂತೆ ; ಮತ್ತೊಮ್ಮೆ , ಸೂರ್ಯನೇ ಒಂದು ಗಳಿಗೆ ಅಸ್ತಂಗತನಾಗಿ ಜಗವೆಲ್ಲ ಕತ್ತಲಾಗಿ ದಿಕ್ಕು ಕಾಣದಂತಹ ಅನುಭವ ನನಗೆ.ಗುರುವೆಂಬ ಅರಿವನ್ನೇ ಮರೆತು ವಿದ್ಯಾರ್ಥಿಗಳ ಹೆಗಲ ಮೇಲೆ ಕೈ ಹಾಕಿ ಪ್ರೀತಿಯಿಂದ ಕಲಿಸುತ್ತಿದ್ದ ಸ್ನೇಹಜೀವಿ ನಮ್ಮೆಲ್ಲರ ಪ್ರೀತಿಯ ಗುರು ಚಂಪಾ.ಸಂಕ್ರಮಣ...

ಕಲಾವಿದ ಬಿ. ಮಾರುತಿ ಕಲಾಕೃತಿಗಳಲ್ಲಿ ನಿಸರ್ಗದ ಅನಾವರಣ

ಧಾರವಾಡ : ಹಿರಿಯ ಚಿತ್ರ ಕಲಾವಿದ ಬಿ. ಮಾರುತಿ ಅವರ ಕುಂಚದಲ್ಲಿ ಅರಳಿದ ಕಲಾಕೃತಿಗಳಲ್ಲಿ ನಿಸರ್ಗದ ವಿಭಿನ್ನ ದೃಶ್ಯಗಳು ಸಹಜವಾಗಿ ಅನಾವರಣಗೊಂಡಿವೆ ಎಂದು ಕನ್ನಡ ಪತ್ರಿಕೋದ್ಯಮದ ಪಾರಂಪರಿಕ ಹಿರಿಯ ನಿಯತಕಾಲಿಕೆ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಅಭಿಪ್ರಾಯಪಟ್ಟರು.ಅವರು ಸೋಮವಾರ ಇಲ್ಲಿಯ ಸರ್ಕಾರಿ ಆರ್ಟ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ...

ಬಸವಲಿಂಗಯ್ಯ ಹಿರೇಮಠ ಮತ್ತು ಚಂಪಾ ಅವರ ಶೃದ್ಧಾಂಜಲಿ ಕಾರ್ಯಕ್ರಮ

ಬೆಳಗಾವಿ: ಹಿರಿಯ ರಂಗಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ಸಾಹಿತಿ ಚಂದ್ರಶೇಖರ ಪಾಟೀಲರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಗಜಾನನ ನಾಯ್ಕ ಅವರು ಅಗಲಿದ ಸಾಹಿತಿಗಳ ಕುರಿತು ಮಾತನಾಡಿದರು.ರಂಗ ಕಲಾವಿದರಾದ ಬಸವಲಿಂಗಯ್ಯನವರು ರಂಗ ಶಿಕ್ಷಣವನ್ನು ನಿನಾಸಂನಲ್ಲಿ ಪಡೆದು, ಉತ್ತರಕರ್ನಾಟಕದ ಗಮನಾರ್ಹ...

ಲಿಂಗಾಯತ 2 ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ – ಬಸವ ಮೃತ್ಯುಂಜಯ ಶ್ರೀಗಳು

ಸಿಂದಗಿ: 23 ಶಾಸಕರನ್ನು ಪಂಚಮಸಾಲಿ ಸಮಾಜ ಕೊಟ್ಟಿದೆ ನಮ್ಮ ಸಮಾಜದಲ್ಲಿ ಒಗ್ಗಟ್ಟು ಕೊರತೆಯಾಗಿದೆ ನಾಳೆ 14 ರಂದು ನಡೆಯುವ ಸಮಾವೇಶ ಸರಕಾರಕ್ಕೆ ಎಚ್ಚರಿಕೆ ಗಂಟೆಯಾಗಬೇಕು. ಲಿಂಗಾಯತ 2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ ಪಂಚಮಸಾಲಿ ಸಮಾಜದ ಎಲ್ಲ ಸಮುದಾಯ ಕೂಡಿಕೊಂಡು ಸಭೆ  ನಡೆದರೆ ಹೆಚ್ಚಿನ ಬಲ  ಬರುತ್ತದೆ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿದಾಗ...

ಶೀಘ್ರ ವಿದ್ಯುತ್ ಸ್ಟೇಶನ್ ಕಾಮಗಾರಿ ಆರಂಭ – ರಮೇಶ ಭೂಸನೂರ

ಸಿಂದಗಿ; ಈ ಕ್ಷೇತ್ರದ ರೈತರ ಜಮೀನುಗಳಿಗೆ ವಿದ್ಯುತ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಹೇರಿಯಲ್ಲಿ 220 ಕೆ.ವ್ಹಿ. ಸ್ಟೇಷನ್ ಸೇರಿದಂತೆ 5 ಗ್ರಾಮಗಳಲ್ಲಿ 110 ಕೆ/ವ್ಹಿ ಸ್ಟೇಷನ್‍ಗಳ ಶೀಘ್ರದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಆವರಣದಲ್ಲಿ ರೂ.1.20 ಲಕ್ಷ ವೆಚ್ಚದ ಉಪವಿಭಾಗ ಕಛೇರಿ ಕಟ್ಟಡ...

ಸಿಂದಗಿ: ನೂತನ ತಹಶೀಲ್ದಾರ ಕಚೇರಿ ಕಟ್ಟಡಕ್ಕೆ ಭೂಮಿಪೂಜೆ

ಸಿಂದಗಿ; ಈಗಿದ್ದ ತಹಶೀಲ್ದಾರ ಕಚೇರಿಯು ನಿರ್ಮಾಣವಾಗಿ 30 ವರ್ಷಗಳಲ್ಲಿಯೇ ಶಿಥಿಲಾವಸ್ಥೆ ಕಂಡಿದೆ ಆ ಕಾರಣಕ್ಕೆ ಒಳ್ಳೆಯ ಗುಣಮಟ್ಟದ ಕಾಮಗಾರಿ ಮಾಡಿ ಶಾಶ್ವತವಾಗಿ ಉಳಿಯುವಂತೆ ಕಾಮಗಾರಿ ಮಾಡಬೇಕು ಎಂದು ಲಿಂಬೆ ಅಭಿವೃದ್ದಿ ಮಂಡಳಿ ಅದ್ಯಕ್ಷ ಅಶೋಕ ಅಲ್ಲಾಪುರ ಗುತ್ತಿಗೆದಾರರಿಗೆ ಸೂಚಿಸಿದರು.ಪಟ್ಟಣದ ಆಲಮೇಲ ರಸ್ತೆಯಲ್ಲಿರುವ ಕಲ್ಲಕಣಿ ಜಾಗೆಯಲ್ಲಿ ಸುಮಾರು 975 ಲಕ್ಷ ವೆಚ್ಚದಲ್ಲಿ ಮಿನಿ ವಿಧಾನ ಸೌಧ...

ಬೆಳಗಾವಿ ಜಿಲ್ಲೆಯಲ್ಲಿ ಏಳು ದಿನ ಶಾಲೆಗೆ ರಜೆ

ಬೆಳಗಾವಿ - ಜಿಲ್ಲೆಯಲ್ಲಿ ಕೋವಿಡ್ ಕೇಸುಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ೧ ರಿಂದ ೯ ನೇ ತರಗತಿಯ ಶಾಲೆಗಳು ಹಾಗೂ ವಸತಿ ಶಾಲೆಗಳಿಗೆ ದಿ. ೧೧ ರಿಂದ ೧೮ ರ ವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ದಿ. ೧೦ ರಂದು ಬೆಳಗಾವಿಯಲ್ಲಿ ನಡೆದ ವಿಪತ್ತು ನಿರ್ವಹಣಾ ಸಭೆಯಲ್ಲಿ ಚರ್ಚಿಸಿದ ನಂತರ ಕೋವಿಡ್...

ಕೆಎಂಎಫ್‍ದಿಂದ 460 ಹುದ್ದೆಗಳ ಭರ್ತಿಗೆ ಕ್ರಮ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ವಾರ್ಷಿಕವಾಗಿ 17 ಸಾವಿರ ಕೋಟಿ ರೂ ಗಳ, ವ್ಯವಹಾರ ನಡೆಸುತ್ತಿರುವ ರಾಜ್ಯದ ನಂ1 ಸಹಕಾರಿ ಸಂಸ್ಥೆ ಕೆಎಮ್ಎಫ್ ಮೂಡಲಗಿ: ರಾಜ್ಯದ 14 ಜಿಲ್ಲಾ ಹಾಲು ಒಕ್ಕೂಟಗಳಿಂದ ಕೂಡಿರುವ ಕೆ.ಎಂ.ಎಫ್ ವಾರ್ಷಿಕವಾಗಿ ಸುಮಾರು 17 ಸಾವಿರ ಕೋಟಿ ರೂಪಾಯಿ ವ್ಯವಹಾರ ಮಾಡುತ್ತಿರುವ ರಾಜ್ಯದ ಅಗ್ರಗಣ್ಯ ಸಹಕಾರಿ ಸಂಸ್ಥೆಯಾಗಿದೆ. ಈ ಮೂಲಕ ಹೈನೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ...

ಮೂಡಲಗಿ: ಕಸಾಯಿ ಖಾನೆಗಳನ್ನು ಬಂದ್ ಮಾಡಲು ಶ್ರೀ ಬಸವ ಸೇನೆಯಿಂದ ಮನವಿ

ಮೂಡಲಗಿ - ನಗರದಲ್ಲಿ ಇರುವ ಕಸಾಯಿಖಾನೆಗಳಿಂದ ನಗರದಲ್ಲಿ ಎಲ್ಲ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದ್ದು ಕಸಾಯಿ ಖಾನೆಗಳಿಂದ ಬರುತ್ತಿರುವ ತ್ಯಾಜ್ಯವಸ್ತು ಮೂಡಲಗಿ ನಗರದಲ್ಲಿ ಹರಿಯುವ ಹಳ್ಳದ ನೀರಿನಲ್ಲಿ ಮಿಶ್ರಣವಾಗಿ ಮೂಡಲಗಿಯಿಂದ ಸುಣಧೋಳಿ ಗ್ರಾಮಕ್ಕೆ ಹೋಗುವ (ಮೂಡಲಗಿ ರುದ್ರ ಭೂಮಿ) ರಸ್ತೆಯಲ್ಲಿ ಗಬ್ಬು ನಾರುತ್ತಿದ್ದು ಆ ರಸ್ತೆಯಲ್ಲಿ ಮೂಡಲಗಿಯ ಸುತ್ತಮುತ್ತಲಿನ ರೈತರು ಮತ್ತು ವ್ಯಾಪಾರಿಗಳು ಸಾಮಾನ್ಯ ಜನರು...

ಚಂಪಾ ಹೆಸರಿನಲ್ಲಿ ವೈಚಾರಿಕ ಲೇಖಕರಿಗೆ ಪ್ರಶಸ್ತಿ ಸ್ಥಾಪನೆಗೆ ಆಗ್ರಹ

ಮೈಸೂರು - ಹಿರಿಯ ಸಾಹಿತಿ ಚಂಪಾ ಅವರ ನಿಧನಕ್ಕೆ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.‌ಚಂಪಾ ಅವರು ತಮ್ಮ ವಿಪುಲ ಸಾಹಿತ್ಯ ಕೃತಿಗಳ ಮೂಲಕ ಹಾಗೂ ತಮ್ಮ ಸಂಕ್ರಮಣ ವೈಚಾರಿಕ ಪತ್ರಿಕೆಯ ಮೂಲಕ ಯುವ ಲೇಖಕ-ಲೇಖಕಿಯರ ಬರವಣಿಗೆ ಮೇಲೆ ಹಾಗೂ ಬದುಕಿನ ಮೇಲೆ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group