spot_img
spot_img

ಪುಸ್ತಕ ಪರಿಚಯ

Must Read

- Advertisement -

ಅಡಿಗರ ಕಾವ್ಯಾಭ್ಯಾಸಕ್ಕೆ ಉಪಯುಕ್ತ ಪುಸ್ತಕ

ನೈಮಿತ್ತಿಕ
ಕೃತಿಕಾರರು:ಎನ್. ಬೋರಲಿಂಗಯ್ಯ

ಈಚೆಗೆ ಮೈಸೂರಿಂದ ಬಂದ ಈ ಕೃತಿ ಬರೆದವರು ನಿವೃತ್ತ ಪ್ರಾಧ್ಯಾಪಕರೂ , ಹಿರಿಯ ವಿಮರ್ಶಕರೂ ಆದ ಎನ್. ಬೋರಲಿಂಗಯ್ಯ ಅವರು. ಮೊದಲು ಕವಿ ಕುವೆಂಪು ಅವರ ಆರಾಧಕರಾಗಿದ್ದ ಬೋರಲಿಂಗಯ್ಯನವರು ಗೋಪಾಲಕೃಷ್ಣ ಅಡಿಗರ ಕಾವ್ಯವನ್ನು ಅಥವಾ ಅವರ ಧೋರಣೆಯನ್ನು ಅಷ್ಟಾಗಿ ಇಷ್ಟಪಟ್ಟವರಾಗಿರಲಿಲ್ಲ. ನಂತರ ಅಡಿಗರ ಕಾವ್ಯದ ವ್ಯಾಪಕ ಅಧ್ಯಯನದಿಂದ ತಮ್ಮ ಅಭಿಪ್ರಾಯವನ್ನು ಬದಲಿಸಿಕೊಂಡ ಬೋರಲಿಂಗಯ್ಯನವರು ಇಲ್ಲಿ ಅಡಿಗರ ಏಳು ಬಹುಮುಖ್ಯ ಕವನಗಳನ್ನಾಯ್ದುಕೊಂಡು ವಿಶ್ಲೇಷಿಸಿದ್ದಾರೆ.

- Advertisement -

ಪ್ರಾರ್ಥನೆ , ಕೂಪಮಂಡೂಕ, ಒಳ್ಳೆತನ ಸಹಜವೇನಲ್ಲ, ಕೆಂದಾವರೆ, ಭೂತ, ವರ್ಧಮಾನ, ಮತ್ತು ಚಿಂತಾಮಣಿಯಲ್ಲಿ ಕಂಡ ಮುಖ ಈ ಏಳು ಕವನಗಳ ಮಹತ್ವವನ್ನು, ವೈಶಿಷ್ಟ್ಯಗಳನ್ನು, ತಾವು ಕಂಡಂತೆ ವಿವರಿಸಿದ್ದಾರೆ.

೧೯೫೦ ರ ನಂತರ ಕನ್ನಡ ಸಾಹಿತ್ಯ ವಲಯದಲ್ಲಿ ಕಾಣಿಸಿಕೊಂಡ ಲೇಖಕರಲ್ಲೆಲ್ಲಾ ಅಡಿಗರು ಬಹುಶಃ ಪ್ರತಿಭೆ ಮತ್ತು ಪ್ರಬುದ್ಧತೆಯ ದೃಷ್ಟಿಯಿಂದ ಅತ್ಯಂತ ಮಹತ್ವದವರು. ಈ ಕವಿಯ ಧಾಟಿ- ಧೋರಣೆ, ಒಲವು ನಿಲುವುಗಳು ಏನೇ ಇದ್ದರೂ ಸಾಹಿತ್ಯ ರಚನೆಯ ದೃಷ್ಟಿಯಿಂದ, ಕನ್ನಡ ಸಾಹಿತ್ಯದ ನಿಷ್ಠಾವಂತ ವಿದ್ಯಾರ್ಥಿಗಳು ಅವರನ್ನು ಅಧ್ಯಯನ ಮಾಡದೇ ಹೋದರೆ ಕಳೆದುಕೊಳ್ಳುವುದು ಬಹಳ ಎಂದು ಬೋರಲಿಂಗಯ್ಯನವರು ಅಭಿಪ್ರಾಯ ಪಡುತ್ತಾರೆ. ಅಷ್ಟೇ ಅಲ್ಲ, ಅಡಿಗರ ಸಮಕಾಲೀನ ತಲೆಮಾರಿನ ಮತ್ತು ಮುಂದಿನ ತಕ್ಷಣದ ತಲೆಮಾರಿನ ಯಾವ ಲೇಖಕರೂ – ಜ್ಞಾನ ಪೀಠ ಪಡೆದವರನ್ನೂ ಒಳಗೊಂಡಂತೆ – ಅವರ ನಿಲುವುಗಳನ್ನು ಹೊರತುಪಡಿಸಿದರೆ ಅಡಿಗರಿಗಿಂತ ಹೆಚ್ಚೇನು ಪ್ರಬುದ್ಧರೂ ಅಲ್ಲ, ಪ್ರತಿಭಾವಂತರೂ ಅಲ್ಲ … ಕವಿ ಅಡಿಗರು ಎಲ್ಲಾ ಕಾಲಕ್ಕೂ ಅಧ್ಯಯನ ಯೋಗ್ಯರು ಎಂದೂ ಹೇಳುತ್ತಾರೆ.
ಅಡಿಗರ ಕಾವ್ಯಾಧ್ಯಯನಕ್ಕೆ ಸಹಕಾರಿಯಾಗಬಲ್ಲ ಕೃತಿ ಇದು ಎನ್ನಲಡ್ಡಿಯಿಲ್ಲ.
ಕೃತಿಗಾಗಿ ಸಂಪರ್ಕಿಸಬಹುದು- 9008556888
– ಎಲ್.ಎಸ್. ಶಾಸ್ತ್ರಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group