ಕವನ
ಚಿನ್ನ
ಚಿನ್ನದ ದರ ಆಡುತ್ತಿದೆ ತೂಗುಯ್ಯಾಲೆ
ಇಳಿದು ಮತ್ತೆ ಏರಿ..!
ಏರಿದಾಗ ಕೊಡಿಸಲು ಮುನಿಸು
ಇಳಿದಾಗ ಬಾರದು ಮನಸು
ಅಯ್ಯೋ ನೋಡಲಾಗದು ಮಡದಿಯ ಮಾರಿ
ಅದಕೇ ರಮಿಸಿದೆ ಭ್ರಮಿಸಿದೆ
ಇಷ್ಟಕ್ಕೇ ಮುನಿಸೇ ಚಿನ್ನ
ಬೆಳ್ಳಿ ಬಂಗಾರವೆಲ್ಲ ಏನು ಚೆನ್ನ..?!
ನೀನೇ ಅಲ್ಲವೇ ನನ್ನ ಚಿನ್ನ ರನ್ನ..!!
ಅಂದವೊಡನೆ ನಕ್ಕು
ಗೊತ್ತು ಗೊತ್ತು ನಿಮ್ಮ ಹುಸಿ ಮಾತು
ಕೇಳಿ ಕೇಳಿ ಕಿವಿಯಾಗಿದೆ ತೂತು
ನಿಮ್ಮ ಮಾತು ವರ್ಣನೆ ಬರೀ ಕೇಳೋಕಷ್ಟೇ ಚೆನ್ನ
ಅದಕೇ ದಿನವೂ ಹಾಕಿ...
ಕವನ
ಕವನ : ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ ನಮ್ಮಪ್ಪ
ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ ನಮ್ಮಪ್ಪಸರಳ ವ್ಯಕ್ತಿತ್ವದ ಸೇವಾ ಪೂರ್ಣ
ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ
ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರ ನರ್ತನ
ಊರು ತೊರೆದು ತೋಟ ಸೇರಿದ ಕುಟುಂಬ
ಸುಂದರ ಪರಿಸರದಲ್ಲಿ
ಅಪ್ಪನ ಜನನ..ಗದ್ದೆ ,ತೋಟ,ಸಹೋದರರೆಂದರೆ
ಅಪರಿಮಿತ ಪ್ರೀತಿ ,
ವೃತ್ತಿಯಲ್ಲಿ ಶಿಕ್ಷಕ , ಪ್ರವೃತ್ತಿಯಲ್ಲಿ ಕೃಷಿಕ
ಹಸು ಕಟ್ಟಿ ,ಸೆಗಣಿ ಬಾಚಿ ,ತೋಟ ಬಳಸಿ
ಸೈಕಲ್ಲು ಏರಿ ಶಾಲೆಗೆ ಹೊರಡುತ್ತಿದ್ದ
ಸಮಯ ಪಾಲಕ ,
ಅಪರೂಪದ ಶಿಕ್ಷಕ ನಮ್ಮಪ್ಪ..ಹುಟ್ಟಿದೂರಿಗೆ....
ಕವನ
ನಾಟಕ ಕರ್ನಾಟಕ
ದೃಶ್ಯ 1ಐದು ವರ್ಷವೂ ನಾನೇ,
ಮತ್ತೈದು ನಾನೇ !
ತೆರವಾದರೇ ತಾನೇ ಬೇರೊಬ್ಬ ಪ್ರಶ್ನೆ ?
' ಟಗರು ' ಮೈಯುಜ್ಜಲಿಕೆ
ಮಾತ್ರ
ಬೇಕೊಂದು
' ಬಂಡೆ '
ಜಜ್ಜಿಕೊಳಲಿಕ್ಕಲ್ಲ
ಅದರ ಮಂಡೆ !ದೃಶ್ಯ 2ಏನೇ ಮಾಡಲಿ ಬಿಡಲಿ
' ಐ' ಕಮಾಂಡ್
ದೆಹಲಿ...
ಆಗಾಗ
ಕೇಳುವುದೇ ನಮ್ಮ ಚಾಳಿ.
ನಮ್ಮನಮ್ಮೊಳಗಿಲ್ಲ ಬಿರುಕು ಬಂಡಾಯ
ಕಟ್ಟಲಿಲ್ಲವೇ ಸೇರಿ
ದಳ ಇನ್.ಡಿ. ಯ!ದೃಶ್ಯ 3ಕುಟುಂಬ ಒಂದನೇ ನಂಬಿ
ಕುಂಟುತಿದೆ ಪಕ್ಷ.
ತಿಂದು ತೇಗಿದರೆಲ್ಲ
ಲಕ್ಷ ಲಕ್ಷ !
ಬಿಡುವುದುಂಟೇ
' ಯತ್ನ -...
ಕವನ
ಅಜ್ಜನ ಕಲೆಗಾರ
ಅದ್ಭುತ ಹಿರಿಯ ಅಜ್ಜ
ಅತಿ ಶ್ರೀಮಂತ ಜೀವಿ
ಇವನ ಕಲೆಗಾರ ವೈಭವ
ಜನರಿಗೆ ಮೆಚ್ಚುವ ಕಾಣುವಹಿರಿಯ ವಯಸ್ಸಿನಲ್ಲಿ
ಕಿರಿಯ ಕಾಣುವ ಮುಖ
ಮೀಸೆಗಳ ಕಾಲ ಪ್ರಭಾವ
ಎಲ್ಲರಿಗೂ ಕಾಣಲು ಸುಂದರಮೀಸೆಯ ಆರ್ಭಟದ ಚಿತ್ರ
ರಂಗೋಲಿ ಅರಳಿಧ ವೈಭವ
ಇದು ಕಲಾ ಅಜ್ಜನ ಪ್ರೇಮಿ
ನೋಡುವ ಜನರಿಗೆ ಸಾಗರಹತ್ತು ಹಲವಾರು ವರ್ಷಗಳು
ನಿರಂತರ ಜೀವನ ಹೇಗೆ
ಬಿಡದ ಕೊನೆತನ ಆಸೆಗಳು
ಹೆಸರು ಆಯ್ತು ಮೀಸೆ ಅಜ್ಜ ಅಮರಗಿನಿಸ್ ಬುಕ್ ರೆಕಾರ್ಡ ಪುಸ್ತಕದಲ್ಲಿ
ಸೇರ್ಪಡೆ-ಮೈಕಲ್...
ಕವನ
ವಚನ ಪಿತಾಮಹ
===============
ಹರಕು ಬಟ್ಟೆ ಮುರುಕು ಮನೆ
ನಿರಾಭಾರಿ ಫಕೀರನು
ಹಿಡಿದ ಹಟ ಬಿಡದೆ ಸಾಧಿಪ
ಛಲದಂಕ ಮಲ್ಲನು
ಊರು ಕೇರಿ ಸುತ್ತಿ ಸುತ್ತಿ
ಮಠ ಮಂದಿರ ಶೋಧಿಸಿ
ಶರಣ ವಚನ ಕಟ್ಟುಗಳಿಗೆ
ಮರುಹುಟ್ಟು ನೀಡಿದವನು
ಚಂದನ ಕಡಿದು ಕೊರೆದರೂ
ಕಂಪು ಬಿಡದ ಪರಿಯಲಿ
ಬೆಟ್ಟದಷ್ಟು ಕಷ್ಟಪಟ್ಟು
ನಾಡ ಸೇವೆ ಮಾಡಿದವನು
ಕಾಯಕಯೋಗಿ ಜ್ಞಾನಸಿರಿ
ಶಿಕ್ಷಣತಜ್ನ ಸ್ಥಿತಪ್ರಜ್ನನು
ಕನ್ನಡ ನಾಡಿನ ಚರಿತೆಯಲಿ
ನಿತ್ಯ ಶೋಭಿತ ಸೂರ್ಯನು
ವಚನಗಳ ಹಾಸಿಕೊಂಡು
ವಚನಗಳ ಹೊದ್ದುಕೊಂಡು
ವಚನ ಯೋಗ ನಿದ್ರೆ ಮಾಡಿ
ವಚನ ಪಿತಾಮಹನಾಗಿಹನು
ನಿನ್ನ ಹಾಡಿ ಹೊಗಳಲೆಮಗೆ
ಶಬ್ದಗಳೇ...
ಕವನ
ಮಳೆ ಹನಿಗಳು."ಮಳೆ "ಜೋರು ಮಳೆ
ಥೇಟ್ ಅವಳಂತೆಯೇ..;
ಒಲವ ಧಾರೆ ಹೊರಗಡಿಯಿಡಲು ಬಿಡದು
ನಿಂತರೂ ನೆನಪು
ಮರದ ಹನಿಯಂತೆ ತೊಟ್ಟಿಕ್ಕದೇ ಬಿಡದು..!
_________
"ಹೋಳಿ"ಬಾನಿಗೂ ಆಡುವ ಆಸೆ
ಹೋಳಿ..;
ಅದಕೇ ನೋಡಿ
ಬಿಸಿಲು ಮಳೆಯ ಕೇಳಿ..!
________
"ಕಾಮನಬಿಲ್ಲು"ಭುವಿಗೆ ಮಳೆಯ ಸ್ಪರ್ಶ
ಭುವಿ ತಂಪಾಗಿ ಬಿಸಿಯಾಗಿ
ಆಗಸದ ಮಳೆಯ ಬಿಸಿಲ ಬೆಳಕಿಗೆ
ನಾಚಿಕೆಯಿಂದ ರಂಗೇರುತ್ತಿರುವಳು ಎಲ್ಲೆಲ್ಲೂ
ಅವಳ ಪ್ರೇಮದ ರಂಗಿನಾಟಕೆ ಸಾಕ್ಷಿ ಬೇಕೆ
ಅದೋ ಕಾಮನಬಿಲ್ಲು..!
________
"ಅಳು"ಕೆಲವೊಮ್ಮೆ ಸೋನೆಯಾಗಿ ಸುರಿಯುತ್ತೀ
ಮತ್ತೊಮ್ಮೆ ಗುಡುಗು ಸಿಡಿಲಿನೊಂದಿಗೆ ಬಿಕ್ಕುತ್ತೀ
ಮಗದೊಮ್ಮೆ ಯಾರನ್ನೋ ನೆನೆಸಿಕೊಂಡವರಂತೆ
ಬಿಟ್ಟು ಬಿಟ್ಟು...
ಕವನ
ದೇವರು ನಗುತ್ತಿದ್ದಾನೆ
ಓ ಸ್ವಾರ್ಥಿ ಮನುಜ
ಎಲ್ಲವೂ ನನ್ನದೇ ,
ಎಲ್ಲದಕ್ಕೂ ನನ್ನದೇ ಯಜಮಾನಿಕೆ
ಎಂದು ಹಲುಬುತ್ತಿರುವ ನೀನು
ಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?
ಬೀಸುವ ಗಾಳಿಯ
ನೀನು ಹಿಡಿದಿಡಲು ಆಗುವುದೇ ?ದೇವರು ಕೊಟ್ಟ ಸುಂದರ ಪ್ರಕೃತಿ
ಹರಿವ ನೀರು ,ಸುಂದರ ಪರಿಸರ
ಬೀಸುವ ಗಾಳಿ
ನಿನ್ನ ಸ್ವಾರ್ಥಕ್ಕೆ ಬಲಿಯಾಗುತ್ತಿವೆ ;
ನಾನು, ನನ್ನ ಕುಟುಂಬ , ಎಲ್ಲವೂ ನನ್ನದೇ ಎನುವ
ನಿನ್ನ ಹುಚ್ಚು ತನಕೆ...
ಕವನ
ಒಂದು ಎಮರ್ಜೆನ್ಸಿ ಕವನ
ಬರುತಾಳೆ, ಬರುತಾಳೆ,
ಬಂದವಳೆ, ಮಹ ಕಾಳಿ
ದೆಹಲಿ ಗದ್ದುಗೆ ಅರಸಿ
ದಕ್ಷಿಣವವನರಸಿ
ದಿಕ್ಕೆಟ್ಟ ಮತಗಳನು
'ಹಸು ಕರುವಿ'ಗೊಲಿಸಿ
ಪಾದಕ್ಕೆ ಬಿದ್ದವರ
ಪಾರ್ಲಿಮೆಂಟಿಗೆ ಕಳಿಸಿ
ಎದುರಾಡಿದವರನ್ನು
ಸೆರೆಯಲಿರಿಸಿ !
ಕರಮುಗಿದು ಶಿರಬಾಗೆ
ಇವಳು ಧಾರಾಳಿ
ಇಲ್ಲವೆನೆ, ಎದುರಾಗೆ
ಆದಾಳು ಕಾಳಿ
ಕದನ ಕಾರಣರಾದ
ಸೀತೆ ಪಾಂಚಾಲಿ ?
ಇಲ್ಲ, ತ್ರಿವಿಕ್ರಮನೆ
ಬಂದನೋ, ಈಕೆ ಮೈದಾಳಿ !
ಇವಳಿಟ್ಟ ಮೊದಲ ಹೆಜ್ಜೆಗೆ ಸಂವಿಧಾನ,
ಮತ್ತೊಂದು ಹೆಜ್ಜೆಯಲೇ
ಜನತಂತ್ರ ಮರಣ
ಇಡಲು ಹವಣಿಸುತಿಹಳು
ಮೂರನೇ ಪಾದವನ್ನ
ಮತ್ತೇನೋ ?ಮತ್ತಾರೋ ?
ಅದಕೆ ಬಲಿದಾನ !
( ತುರ್ತು ಪರಿಸ್ಥಿತಿ ಇದ್ದಾಗಲೇ ಫೆಬ್ರವರಿ...
ಕವನ
ಮರಳಿ ಮೂಕನಾದೆ
ನಿನ್ನ ಹೊಗಳಿ ಬರೆದ
ಕವಿತೆಗಿನ್ನು ಕಾಗದದ
ಭಾಗ್ಯ ಬಂದಿಲ್ಲ
ಮಾತಾಡಲೆನ್ನ ಮನಕೆ
ಧೈರ್ಯವೂ ಸಾಲುತಿಲ್ಲ
ನನ್ನೀ ವೇದನೆಯ ನಿನ್ನೆದುರು
ಬಿಚ್ಚಿಡುವ ಪರಿಣತಿಯಿಲ್ಲಕುಂಚ ಹಿಡಿದ ನಾನು
ಕನ್ನಡಿ ಮುಂದೆ ಕುಳಿತ
ನಿನ್ನ ಕಣ್ಣೇಟಿಗೆ ಸೋತಿದ್ದೇನೆ
ತುಟಿಗೆ ರಂಗು ತುಂಬಿದವನು
ಚುಂಬಿಸುವನುಮತಿ
ಇಲ್ಲವೆಂದು ಅರಿತಿದ್ದೇನೆ.ನನ್ನೆದೆಯ ಕನಸು ಕೊಳ್ಳಲು
ನಿನಗೆ ಧಾವಂತವಿಲ್ಲ
ಮಾರಲು ನನಗೆ ಚತುರತೆಯಿಲ್ಲ
ಬ್ರಶ್ಶು ಕ್ಯಾನ್ವಾಸನ್ನು
ಮುಟ್ಟಬಹುದಷ್ಟೇ
ಚಿತ್ರವೇ ತನ್ನದೆನ್ನಲು ಸಾಧ್ಯವಿಲ್ಲನಿನ್ನ ನಯನಗಳು ಮಾತ್ರ
ಮೋಸಗೊಳಿಸುತ್ತದೆ
ಸನಿಹ ಬರುವಂತೆ ಆಹ್ವಾನಿಸುತ್ತದೆ
ನನ್ನ ಖಾಲಿ ಜೇಬು
ಮೇಕಪ್ಪುಡಬ್ಬಿ ತಡೆಯುತ್ತಿದೆ
ಹೃದಯವಿದು ಹತಾಶೆಯಿಂದ
ಮರಳಿ ಮೂಕವಾಗುತ್ತಿದೆ ಡಾ.ಭವ್ಯ ಅಶೋಕ ಸಂಪಗಾರ್
ಕವನ
ಕಾವ್ಯ ಮಾತನಾಡುತ್ತದೆಕಾವ್ಯ ಮಾತನಾಡುತ್ತದೆ
ಹೌದು ತನ್ನೊಳಗೆ
ಅನಂತ ಭಾವ ತೀರದೊಳಗೆ
ದೋಣಿಯಲಿ ಹುಟ್ಟು ಹಾಕಿ ನಡೆಸುವ ಅಂಬಿಗನಂತೆ
ಪಯಣದ ಗುರಿ ತಲುಪಲು
ಕಾವ್ಯ ಮಾತನಾಡುತ್ತದೆಬಿಂಕ ಭಾವದ ಜನರನು
ಬದಿಗೆ ಸರಿಸಿ
ಬಂಧು ಬಾಂಧವ ನೇಹ ಸ್ನೇಹದ
ಪಯಣದಲಿ
ಕಾವ್ಯ ಮಾತನಾಡುತ್ತದೆ
ಒಳಗೊಳಗೆ ಬಿಕ್ಕಿ
ಮುರಿದ ಭಾವಗಳ ಒಂದುಗೂಡಿಸಿ
ಕಟ್ಟುತ್ತದೆ ಐಕ್ಯಭಾವ
ಭಾವ ತಿಮಿರದಲಿ
ಕಾವ್ಯ ಮಾತನಾಡುತ್ತದೆಸೊಲ್ಲು ಸೊಲ್ಲಿಗೂ
ಸೋಲನರಿಯದ ಸವಿಮನದಿ
ಹೆಣೆದ ಭಾವ ಅಕ್ಷರಗಳ
ಪದಮಾಲೆಯ ರಾಗ ತಾಳ ಮಾಡಿ
ಹಾಡುವ ಸ್ವರ ಕಾವ್ಯಗಳ ಮುತ್ತು ಪೋಣಿಸಿ ಹಾಡುವ ಕಾವ್ಯ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



