ಕವನ

ಕವನ : ಹೊನ್ನಗನ್ನಡಿಯ ಚೆಲುವೆ

ಹೊನ್ನಗನ್ನಡಿಯ ಚೆಲುವೆ ನೇಸರನ ಹೊನ್ನಿನ ಕಿರಣಗಳ ಬಳಿಯಲಿ ಲೋಕ ಮರೆತು ಇನಿಯನ ನೆನಪಿನಲಿ ತಣ್ಣಗೆ ಕುಳಿತಿರುವ ಹೊನ್ನಗನ್ನಡಿಯ ಚೆಲುವೆಯೇ ಓದಿ ಹೇಳು ಒಮ್ಮೆ ಸಾಗರದಲೆಗಳ ಎದೆಯ ಮೇಲೆ ನೀ ಬರೆದ ಒಲವಿನೋಲೆ ಮೇಘದೂತನ ಸಂದೇಶವಂದು ಕಾಳಿದಾಸನ ಲೀಲೆ ಇನ್ಯಾವ ಕವಿಯ ಸೃಷ್ಟಿಗೆ ಮುನ್ನುಡಿ ಬರೆಯುತಿರುವೆ ಬಾಲೆ ಪ್ರಣಯದೇವತೆಯಂತೆ ಬೆಳಗಿಸಿದ ನೇಸರನದೊಂದು ಅದ್ಭುತ ಕಲೆ ಅಲೆಗಳನ್ನೇ ಸಮ್ಮಾನಿಸಿಬಿಡು ಹಾಕಿ ಕೊರಳಿಗೆ ಮುತ್ತಿನಮಾಲೆಗಗನವನ್ನೇ ನಾಚಿಸುತಿದೆ ಹೊಳೆಯುವ ಶ್ವೇತವರ್ಣದ ಧಿರಿಸು ಕನಕಶಿಲೆಗಳ ಮೇಲಿನ ಹೊನ್ನ ಬಿಂಬದ...

ಕವನ : ಅಪ್ಪನೆಂಬ ಅದ್ಭುತ ಸಾಗರ

ಅಪ್ಪನೆಂಬ ಅದ್ಭುತ ಸಾಗರ ಆಕಾಶದಲ್ಲಿ ಮಿನುಗುವ ನಕ್ಷತ್ರಗಳ ಬೆಳಕಿನಲಿ ಮಿಂಚುಹುಳವಾಗಿದ್ದನು ನನ್ನಪ್ಪ ತ್ಯಾಗದ ಪ್ರತಿರೂಪವಾದರೂ ಜಗತ್ತಿಗೆ ಕಾಣದ ಭಾವಜೀವಿ ನನ್ನಪ್ಪಕೈ ಹಿಡಿದು ಶಿಕ್ಷಣ ಕೊಡಿಸಿ ಹೆಗಲಿಗೆ ಹೆಗಲು ಕೊಟ್ಟು ಸಂಸಾರವೆಂಬ ಸಾಗರವ ಅವ್ವನೊಡನೆ ಈಜಿ ಬದುಕಿನ ದಡ ಮುಟ್ಟಿಸಿದ ಅದ್ಭುತ ಸಾಗರ ನನ್ನಪ್ಪಸುಖದಲ್ಲಿ ನಗಿಸಿ ಜವಾಬ್ದಾರಿಯಿಂದ ನಮ್ಮನ್ನು ಗದರಿಸಿ ಅಪ್ಪನೆಂದರೆ ಬಾಲ್ಯದ ಭೂತವೆಂಬಂತೆ ಬಿಂಬಿಸಿದರೂ ಸಂಸಾರ ನೊಗ ಹೊತ್ತ ಬಾಳುವೆಯ ಜೋಡೆತ್ತು ನನ್ನಪ್ಪಒಪ್ಪತ್ತಿನ ಊಟದಿಂದ ಹಿಡಿದು ಐಶಾರಾಮಿ ಊಟದವರೆಗೆ ದುಡಿಮೆಯ ಬೆವರಿನ...

ಕವನ : ನನ್ನಪ್ಪ

ನನ್ನಪ್ಪ ಉಸಿರ ನೀಡಿ ಬೆವರ ಬಸಿದು ಬೆಚ್ಚಗಿನ ಸೂರಲಿ ಪೊರೆದ ಜೀವ.ನೋವ ನುಂಗಿ ನಲಿವ ಹಂಚಿ ಬಾನಂಚಿನ ತಾರೆ ಇರುಳಲೂ ಮಿನುಗುತ.ವಾತ್ಸಲ್ಯ ತೋರಿ ತಲ್ಲಣವ ದೂರಿಕರಿಸಿ ತನ್ನದಲ್ಲದ ಬದುಕಿಗೆ ತೇಯ್ದ ಗಂಧ.ತಾನು ಹಸಿದು ತನ್ನವರ ಹೊಟ್ಟೆ ತುಂಬಿಸಿ ಮಾಸಿದ ಬಟ್ಟೆಯಲೂ ದಿಟ್ಟ ನಿರ್ಧಾರ ಕೈಗೊಳ್ಳುವ.ಛಲವ ಹೊತ್ತು ಸಾಗಿ ಒಲವ ಬಲವ ತುಂಬಿ ಬಾಳ ಬಂಡಿಗೆ ನೊಗವೇ ಆಗಿ ತಾಳ ಮೇಳ ಸೇರಿಸುತ.ಆಲದ ಮರದ ಬೇರು ನೆಲೆಗಾಗಿ ಹೋರಾಟ ತನ್ನದೆಲ್ಲ ಕಡೆಗಣಿಸಿ ಮುಂದಡಿಗೆ...

ಕವನ : ಕನಸುಗಳು

ಕನಸುಗಳುಕನಸುಗಳು ಕಾಡುತ್ತವೆ ನಿತ್ಯ ನಿರಂತರ ಹಗಲು ಇರುಳು ಆಗಸದಲ್ಲಿ ಬಿತ್ತಿದ ಬೀಜ ಮಳೆಯ ಹನಿಯೊಂದಿಗೆ ನೆಲಕೆ ಹಸಿರು ಚೆಲ್ಲಿದೆ ನಿನ್ನ ಒಲವು ಸೂರ್ಯ ಚಂದ್ರರ ಹರಕೆ ಚುಕ್ಕಿಗಳ ಚೆಲ್ಲಾಟ ಏನೋ ಸಾಧಿಸುವ ನನ್ನ ಮನಸ್ಸು ಎಲ್ಲಾ ಭೇದವ ತೊರೆದು ಸರಳ ಸತ್ಯ ಸಮತೆಯ ದಾರಿಯಲ್ಲಿ ಸಾಧಿಸುವ ಹಟವಿತ್ತು ನನ್ನ ಮನದಲ್ಲಿ ಮುಟ್ಟುವೆನು ದಿಟ್ಟ ಗುರಿ ಸಾಧಿಸುವೆ ಯಶವನ್ನು ನನ್ನವರು ಹರಕೆಯಲಿ ದಿವ್ಯ ಗೆಲುವು ಹಲವು ಸಲ ಸೋತಿರುವೆ ಗೆಲ್ಲುವುದು ನಿಶ್ಚಿತ ಚಂದ್ರ ಪ್ರಭೆಯ ಜೊತೆ ಎನ್ನ ಸೊಬಗು ಕನಸುಗಳು ಕಾಡಲಿ ಬಯಕೆಗಳು ಬೇಡಲಿ ಮಲಗಿರುವ ನಾನು ನಿತ್ಯ ದುಡಿವೆ ಕನಸುಗಳ ಕೈ ಕುಲುಕಿ ಬದುಕಿ...

ಎರಡು ಕವನಗಳು

ಅವಳು ಹೀಗೆ --------------------------- ಅವಳು ಹೀಗೆ ಎಲ್ಲವನ್ನೂ ಹೊರಗೆ ತೋರಿದವಳಲ್ಲ ಅದೆಷ್ಟೋ ವರುಷಗಳಿಂದ ಮೌನದಲಿ ಮೌಲ್ಯ ತುಂಬಿಕೊಂಡು ಬದುಕು ನೂಕಿದವಳು ಅಳುವ ಮರೆಸುವ ಹುಸಿ ನಗೆ ಮುಚ್ಚಿ ಸೆರಗಿನಲಿ ಬಿಕ್ಕು ಕರುಣೆ ದಾಕ್ಷಿಣ್ಯ ಭಿಕ್ಷೆಗೆ ಸೆರಗೊಡ್ಡಿದವಳಲ್ಲ ಹಲವು ಸಲ ಸೋತರು ಗೆಲುವಿನ ದಾರಿಗೆ ದಿಟ್ಟ ಹೆಜ್ಜೆ ಹಾಕಿದವಳು ಎಲ್ಲರ ಯಶದಲಿ ಹಿರಿ ಹಿರಿ ಹಿಗ್ಗಿದವಳು ಮೃದು ಮಾತು ನಯನ ಓದು ಬರಹ ಚಿಂತನಾ ಸಂಘರ್ಷ ಹೋರಾಟ ಒಳಗೆ ಲಾವಾದ ಕುದಿತ ಮಾನವ ಮೌಲ್ಯಕ್ಕೆ ಮಿಡಿತ ಸಮರತಿ ಸಮಪಾಲು ಬುದ್ಧ ಬಸವರ ತುಡಿತ ಹೊರಟಳು ಒಬ್ಬಳೇ ಸತ್ಯದ ಬೆಳಕ ಹುಡುಕುತ --------------------------------------- ಸತ್ಯ ಸದಾ ಒಂಟಿ --------------------------- ಸುಳ್ಳು ಬಳಲುತ್ತದೆ ಅವರಿವರ...

ಕವನ : ಬಿಂದು

ಬಿಂದು ನಾನು ಎನ್ನುವುದು ಒಂದು ಸಣ್ಣ ಬಿಂದುವಾಗೇ ಇರಬಹುದು ಅಥವಾ ಒಂದು ಸಣ್ಣ ಕಣವಾಗಿರಬಹುದು ಅಥವಾ ನಾನು ನಾನೇ ಆಗಿರಬಹುದು!! ಇದನ್ನು ನೀವು ಅಹಂ ಎನ್ನಬಹುದು ಅಥವಾ ಅಸ್ಮಿತೆ ಎನ್ನಬಹುದು! ನಾನು ನಾನಾಗದ್ದಿದ್ದರೆ ಇನ್ನೇನಾಗಬಹುದು? ನಾನು ನಾನೇ ಹೊರತು ಬೇರೊಬ್ಬನಾಗಲು ಸಾಧ್ಯವಿಲ್ಲ!!ಇದರಲ್ಲಿ ಅಹಂಕಾರದ ಮಾತೇ ಇಲ್ಲ ಇದು ನನ್ನ ಗುರುತು ಇದು ನನ್ನ ಕುರುಹು ಯಾರು ಎಷ್ಟೇ ನನ್ನ ತುಳಿಯ ಬಯಸಿದರೂ ಯಾರು ಎಷ್ಟೇ ನನ್ನ ಪರಿಗಣಿಸದೇ ಇದ್ದರೂ ಚಿಂತೆ ಇಲ್ಲ ಇದು ನನಗೆ ಆ ದೇವರೇ ಕೊಟ್ಟ ಗುರುತು ಅದನು ಬೆಳೆಸಿಕೊಂಡು ನಾನು ಇಂದು ನಾನಾಗಿರುವೆ!ನನ್ನ ಅಳಿಸಿಹಾಕಿದರೂ ನನ್ನತನ ಉಳಿದೇ ಉಳಿಯುವುದು ನನ್ನ ಚಾರಿತ್ರ್ಯಹೀನನನ್ನಾಗಿ ಮಾಡಬಯಸುವವರು ಉಳಿಯರು ಅವರ ಪಾಪಕ್ಕೆ...

ಕವನ :ಅಪ್ಪ ಬದಲಾಗಿದ್ದಾರೆ !

ಅಪ್ಪ ಬದಲಾಗಿದ್ದಾರೆ!ಮೊದಲೆಲ್ಲ ದಣಿವಿರದೆ ತೋಟದಿ ದುಡಿಯುತ್ತಿದ್ದ ಅಪ್ಪ ಈಗೀಗ ದಣಿವಾರಿಸಿಕೊಳ್ಳಲು ತೆಂಗಿನ ಮರದ ಆಶ್ರಯ ಪಡೆಯುತ್ತಾರೆ ಆದರೂ ದುಡಿಮೆ ಬಿಡದೇ ಸಾಗುತ್ತಿದ್ದಾರೆ ಇಂದೇಕೋ ಅಪ್ಪ ತುಸು ಬದಲಾಗಿದ್ದಾರೆ! ಕಪ್ಪು ಕೂದಲಿಗೆ ಮೊರೆ ಹೋಗದೆ ಇಳಿ ವಯಸ್ಸಿನ ಸವಾಲುಗಳನ್ನು ಸ್ವೀಕರಿಸಿದ್ದಾರೆ, ಗರಿ ಗರಿ ಇಸ್ತ್ರಿ ಅಂಗಿಯ ಮರೆತಿದ್ದಾರೆ ತೋಳುದ್ದ ಒಳ ಅಂಗಿ ಕಪ್ಪಾಗಿ ಬಣ್ಣ ಮಾಸಿದ್ದರೂ ಧರಿಸಿದ್ದಾರೆ ಅದೇಕೋ ಅಪ್ಪ ತುಸು ಬದಲಾಗಿದ್ದಾರೆ! ತನ್ನದೇ ಹಠ ನಡೆಯಬೇಕು ಎಂಬುವರು ನಸು ನಗುವಿಗೆ ಶರಣಾಗಿದ್ದಾರೆ, ಈಗೀಗಷ್ಟೇ ಅವ್ವನನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಮುಂಚೆಗಿಂತ ಅಪ್ಪ...

ಕವನ : ಬಂಜೆಯಾದಳೆ ಭೂಮಿ

ಬಂಜೆಯಾದಳೆ ಭೂಮಿಬಂಜೆ ಎಂಬ ಪದ ಬೇಡ ಈ ಭೂ ತಾಯಿಗೆ ರೈತರು ಮಕ್ಕಳಿರುವಾಗ ರೈತನ ಹಡೆದವಳು ಭೂ ತಾಯಿ ಬೆಳೆದ ಭೂ ಒಡಲಲ್ಲಿ ದವಸ ಧಾನ್ಯ ತರಕಾರಿ ಹಣ್ಣು ಹಂಪಲು ಭಾರಿ ಬಿಡಲಿಲ್ಲ ಅವನು ಮರಳು ಕಾಳು ಕಡಿ ಬೆನ್ನು ಹತ್ತಿದರು ದಲ್ಲಾಳಿ ಸೊರಗಿದ ಸೋತ ರೈತ ತಾಯಿ ಎದುರು ಶರಣಾದ ನೇಣು ಆತ್ಮ ಹತ್ಯೆ ಮಗನ ಕಳೆದು ಕೊಂಡ ತಾಯಿ ವೇದನೆ ಭೂಮಿಗೆ ಮತ್ತೆ ಬಂಜೆಯಾದಳು ಸ್ಮಾರ್ಟ್ ಸಿಟಿ ಮೆಟ್ರೋ ಸಿಟಿ ಕಾರ್ಪೊರೇಟ್ ಜಗತ್ತಿಗೆ ಮುಚ್ಚಿದರು ಕೆರೆ ಬಾವಿಗಳ ಕಟ್ಟಿದರು...

ಕವನ : ಸಿಂಧೂರ

ಸಿಂಧೂರ ಆಕೆ ನಗುತ್ತಾಳೆ..ಅವನಿಲ್ಲದಿದ್ದರೂ.. ಜನ ಮನಬಂದಂತೆ ಹಂಗಿಸುವರು ಅವರಿಗೇನು ಗೊತ್ತು...? ಅವಳ ಹಣೆಯ ಮೇಲಿನ ಸಿಂಧೂರಅವಳ ಸೌಂದರ್ಯಕ್ಕಿಟ್ಟ ಕಲಶ. ಪ್ರತಿ ದಿನ ಕುಂಕುಮ ಇಡುವಳು ಅವನ ನೆನಪಲ್ಲಿ..ಅಂದಿಟ್ಟ ನೆನಪಲಿ..ಅಂದವನಿಗಿಟ್ಟ ಮಾತಿನ ನೆನಪಲ್ಲಿ..ಅರಶಿನ, ಲಿಂಬೆ ಮತ್ತು ಪಾದರಸದ ಮಿಶ್ರಣ ಈ ಸಿಂಧೂರ ಸಿಂಧೂರ ಗಿಡದಿಂದ ತಯಾರಾಗುವ ಕೆಂಪು ಗುಲಾಬಿ ವರ್ಣ ಭಾರತೀಯ ಸಂಸ್ಕೃತಿಯ ಮುತೈದೆಯ ಸಂಕೇತದುರ್ಗಾದೇವಿ ಯ ಸಂಕೇತ ದುಷ್ಟರ ವಿನಾಶದ ದ್ಯೋತಕ ದುಷ್ಟ ಸಂಹಾರ ಶಿಷ್ಟ ರಕ್ಷಕ ಅಮಾಯಕರ...

ಕವನ : ರಜಿಯಾ ಬಾನೋ

ರಜಿಯಾ ಬಾನೊ ರಜಿಯಾ ನನ್ನ ನಿನ್ನ ಸ್ತ್ರೀ ಯಾಗಿ ಬಾಳುವ ಜೀವನ ಒಂದೇ ಅಲ್ಲವೇ? ನಾನು ತಿನಿಸುತ್ತೇನೆ ಭಕ್ಕರಿ ಗೋವಿಗೆ ನೀನು ಫಕೀರನಿಗೆ ನಮ್ಮ ತನವಕಳೆದು ಪುರುಷನ ನಿತ್ಯಭೋಗಕ್ಕೆ ಹೆರುವ ಹೆರಿಗೆನೋವು ಇಬ್ಬರಿಗದೂ ಒಂದೇ ಸಾಯುವಾಗ ನಿನಗೂ ಕುಡಿಸುತ್ತಾರೆ, ಪವಿತ್ರ ಜಲ ನನಗೂ ಗಂಗಾಜಲ ನಿನ್ನ ಪಯಣ ಕಬರಸ್ತಾನಕೆ ನನ್ನದು ಸ್ಮಶಾನಕೆ ಈ ಎಲ್ಲಾ ಸಮಾನತೆಗಳಿದ್ದು ವಿಷಮತೆ ಏಕೆ? ಏಕೆ ಯುದ್ಧ? ಸಾಯುವರಾರು? ನಿನ್ನ ಗಂಡ , ನನ್ನ ಮಗ ನಾವೇ ತಬ್ಬಲಿ ಗಳು ಸಾಕು ಏಳಿನ್ನು ತೆಗೆದೊಗೆಯಬೇಕು ಸ್ತ್ರೀಗೆ ಹೇರಿದ ಮುಖವಾಡ ನಂದಿಸಬೇಕಿದೆ ಕೋಮುವಾದದ ಜ್ವಾಲೆ ಒಗ್ಗಟ್ಟಿನಲ್ಲಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group